ದಿನಾಂಕ 10-09-2021ರೊಳಗೆ ಅಂತರ ಜಿಲ್ಲಾ ವರ್ಗಾವಣೆ ಬಯಸುವ ರಾಜ್ಯದ ಪ್ರಾಥಮಿಕ / ಪ್ರೌಢ ಶಾಲಾ ಶಿಕ್ಷಕರು ತಮ್ಮ ಮಾಹಿತಿಯನ್ನು ಆನ್ ಲೈನ್ ಮೂಲಕ ಮಾಹಿತಿ ಸಲ್ಲಿಸಿ.
ದಿನಾಂಕ 10-09-2021ರೊಳಗೆ ಅಂತರ ಜಿಲ್ಲಾ ವರ್ಗಾವಣೆ ಬಯಸುವ ರಾಜ್ಯದ ಪ್ರಾಥಮಿಕ / ಪ್ರೌಢ ಶಾಲಾ ಶಿಕ್ಷಕರು ತಮ್ಮ ಮಾಹಿತಿಯನ್ನು ಆನ್ ಲೈನ್ ಮೂಲಕ ಮಾಹಿತಿ ಸಲ್ಲಿಸಿ.
ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂತರ ಜಿಲ್ಲಾ ವರ್ಗಾವಣೆ ವಂಚಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಮಾತ್ರ ದಿನಾಂಕ : 10-09-2021 ರೊಳಗೆ Online ಮೂಲಕ ಈ ಕೆಳಕಂಡ ಲಿಂಕ್ ಬಳಸಿ ತಮ್ಮ ಮಾಹಿತಿಯನ್ನು ಸಲ್ಲಿಸಲು ಕೋರಿದೆ .
ನಿಖರ ಹಾಗೂ ವಾಸ್ತವಾಂಶದಿಂದ ಕೂಡಿದ ಶಿಕ್ಷಕರುಗಳ ಮಾಹಿತಿಯನ್ನು ಕ್ರೂಢಿಕರಿಸಿ ವೈಜ್ಞಾನಿಕ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಶಿಕ್ಷಕರ ಅಂತರ ಜಿಲ್ಲಾ ವರ್ಗಾವಣೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು . ಕೊನೆಯ ದಿನಾಂಕ 10-09-2021 https://bit.ly/ksgeateachers
Good
ReplyDeleteSir, please consider drawing Teacher's also
Delete9845768305
ReplyDeleteಪ್ರಸ್ತುತ ವರ್ಗಾವಣೆ ಪ್ರಕ್ರಿಯೆಯಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತಿ ಪತ್ನಿ ಪ್ರಕರಣಗಳನ್ನು ಕೈಬಿಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುವುದು ಒಂದು ಕಾಯಂ ನೌಕರಿ ಯಾಗಿದೆ. ಆದರೆ ಇದನ್ನು ಈ ವರ್ಷದ ವರ್ಗಾವಣೆ ಪ್ರಕ್ರಿಯೆಯಲ್ಲಿ ಪರಿಗಣಿಸಿಲ್ಲ...!!! ಆದ್ದರಿಂದ ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತಿ-ಪತ್ನಿ ಪ್ರಕರಣದಡಿಯಲ್ಲಿ ಬರುವ ಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗಿದ್ದಾರೆ..!! ದಯವಿಟ್ಟು ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತಿ-ಪತ್ನಿ ಪ್ರಕರಣಗಳನ್ನು ಪರಿಗಣಿಸಿ ಶಿಕ್ಷಕರಿಗೆ ಅವರು ಬಯಸಿದ ಜಿಲ್ಲೆಗೆ ವರ್ಗಾವಣೆಯಾಗಲು ಅನುಕೂಲ ಮಾಡಿಕೊಡಬೇಕೆಂದು ತಾವುಗಳು ಮನವಿಯನ್ನು ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ ಪೂರ್ವಕವಾಗಿ ಕೇಳಿಕೊಳ್ಳುತ್ತೇನೆ...
ReplyDeleteಧನ್ಯವಾದಗಳು....
ಅಂತರ ಜಿಲ್ಲಾ ವರ್ಗಾವಣೆ ಕನಿಷ್ಠ 3ವರ್ಷಕ್ಕೆ ಒಮ್ಮೆಯಾದರೂ ನಡಿಯಲೇ ಬೇಕು...
ReplyDeleteಪತಿ ಖಾಸಗಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ ಅದನ್ನು ವರ್ಗಾವಣೆಗೆ ಪರಿಗಣಿಸುವುದೇ ಇಲ್ಲಾ,ಅದೇ ಪತಿ-ಪತ್ನಿ ಸರ್ಕಾರಿ ಉದ್ಯೋಗದಲ್ಲಿರುವವರು ಪ್ರತಿ 3ವರ್ಷ ಕ್ಕೊಮ್ಮೆ ವರ್ಗಾವಣೆ ತೆಗೆದುಕೊಳ್ಳುತ್ತಾರೆ.
ReplyDeleteಏಕೆ ಈ ತಾರತಮ್ಯ?ನಮ್ಮದು ಕುಟುಂಬ ವಲ್ಲವೇ ?ಇದನ್ನು ಹೋಗಲಾಡಿಸಿ,ನಮ್ಮ0ತ ವರಿಗೂ ಅಂತರ್ ಜಿಲ್ಲಾ ವರ್ಗಾವಣೆಯಲ್ಲಿ ಆದ್ಯತೆ ನೀಡುವ ಹಾಗೆ ಮಾಡಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.🙏
ನಿಜಾ ಸರ್
Deleteಪತಿ ಕೃಷಿಕರಾಗಿದ್ದು ನಾವು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ವಾಸಿಸುವುದು ಕಷ್ಟ. ಹಾಗಾಗಿ ಇಂತಹ ಪ್ರಕರಣಗಳನ್ನು ಪರಿಗಣಿಸಿ ಬಯಸಿದ ಜಿಲ್ಲೆಗೆ ವರ್ಗಾವಣೆಯಾಗಲು ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿಮಾಡಿಕೊಳ್ಳುತ್ತೇನೆ. ಧನ್ಯವಾದಗಳು
ReplyDelete