ಅಂತರ್ ಜಿಲ್ಲಾ ವರ್ಗಾವಣೆ ಬಯಸುವ ಪ್ರಾಥಮಿಕ ಶಾಲಾ ಶಿಕ್ಷಕರ ಕ್ರೂಢೀಕೃತ ಮಾಹಿತಿಯನ್ನು ಮಾನ್ಯ ಶಿಕ್ಷಣ ಸಚಿವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಲ್ಲಿಕೆ.
ಅಂತರ್ ಜಿಲ್ಲಾ ವರ್ಗಾವಣೆ ಬಯಸುವ ಪ್ರಾಥಮಿಕ ಶಾಲಾ ಶಿಕ್ಷಕರ ಕ್ರೂಢೀಕೃತ ಮಾಹಿತಿಯನ್ನು ಮಾನ್ಯ ಶಿಕ್ಷಣ ಸಚಿವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಲ್ಲಿಕೆ.
ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ದಿನಾಂಕ: 01-09-2021ರಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂತರ್ ಜಿಲ್ಲಾ ವರ್ಗಾವಣೆ ಬಯಸುವ ಪ್ರಾಥಮಿಕ ಶಾಲಾ ಶಿಕ್ಷಕರ ನಿಖರ ಹಾಗೂ ವಾಸ್ತವ ಮಾಹಿತಿಯನ್ನು ಸಲ್ಲಿಸಲು ಸೂಚನೆ ನೀಡಿದ್ದರ ಮೇರೆಗೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಈ ಕೆಳಕಂಡ ಅಂಶಗಳ ಹಿನ್ನಲೆಯಲ್ಲಿ ನಿಖರ ಹಾಗೂ ವಾಸ್ತವ ಮಾಹಿತಿಯನ್ನು ಸಂಗ್ರಹಿಸಿ ಅನುಬಂಧವಾರು ಸಲ್ಲಿಸಿರುವ ಮಾಹಿತಿಯನ್ನಾಧರಿಸಿ “ಒಂದು ಬಾರಿಗೆ” ಸೀಮಿತವಾಗಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಲು ಕೋರಿ ಅಂಕಿ-ಅಂಶಗಳ ಮಾಹಿತಿಯನ್ನು ತಮಗೆ ಸಲ್ಲಿಸಿದೆ.
1. ಶಿಕ್ಷಕರು ಮಾನಸಿಕ ನೆಮ್ಮದಿಯಿಂದ ಇದ್ದರೆ ಮಾತ್ರ ತರಗತಿ ಬೋಧನೆ ಹಾಗೂ ಕಲಿಕೆ ಗುಣಮಟ್ಟದಿಂದ ಕೂಡಿರುತ್ತದೆ ಎಂಬ ಶೈಕ್ಷಣಿಕ ಮನೋವಿಜ್ಞಾನಿಗಳ ಮಾತಿನಂತೆ ಕಳೆದ 10-15 ವರ್ಷಗಳಿಂದ ತಮ್ಮ ಕುಟುಂಬದಿಂದ ದೂರವಿರುವ ಅಂತರ್ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ವರ್ಗಾವಣೆ ನಿಯಮಗಳ ನ್ಯೂನತೆಯಿಂದ ಮಾನಸಿಕ ಸ್ವಾಸ್ಥ್ಯ ವನ್ನು ಕಳೆದುಕೊಂಡಿರುತ್ತಾರೆ. ಹಾಗಾಗಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಸಕ್ತ ಸಾಲಿನಲ್ಲಿ ಪಶ್ಚಿಮ ಬಂಗಾಳದ ಮಾದರಿಯಲ್ಲಿ ಒಂದು ಬಾರಿ ಅವರವರು ಇಚ್ಛಿಸುವ ಜಿಲ್ಲೆಗೆ ವರ್ಗಾವಣೆಗೆ ಅವಕಾಶ ಮಾಡಿಕೊಡುವ ಮೂಲಕ ಮುಕ್ತ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅವಕಾಶ ಕಲ್ಪಿಸಿದಂತಾಗುತ್ತದೆ.
2. ಕುಟುಂಬದವರಿಂದ ಸುಮಾರು 400 ಕ್ಕೂ ಹೆಚ್ಚು ಕಿಮೀ ದೂರದ ಸ್ಥಳಗಳಲ್ಲಿ ಕಳೆದ 10-15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯ ಪತಿ ದಾಂಪತ್ಯ ತೊರೆದು ಬೇರೆ ಮದುವೆಯಾಗಿರುವ ಉದಾಹರಣೆಗಳು ಇರುತ್ತವೆ. ಇದರಿಂದಾಗಿ ಮಹಿಳಾ ಶಿಕ್ಷಕಯರು ಮಾನಸಿಕ ಖಿನ್ನತೆ ಒಳಗಾಗಿರುವ ಪ್ರಕರಣಗಳನ್ನು ಗಮನಿಸಲಾಗಿದೆ.
3. ಪತಿ-ಪತ್ನಿ ಪ್ರಕರಣಗಳಲ್ಲಿ ಕಳೆದ 10-15 ವರ್ಷಗಳಿಂದ ಸಂಸಾರದಿಂದ ದೂರವಿದ್ದು, ಅಂತಹ ಶಿಕ್ಷಕ/ಶಿಕ್ಷಕಿಯರು ಕೌಟುಂಬಿಕ ಸಮಸ್ಯೆಗಳಿಗೆ ಸಿಲುಕಿದ್ದು, ಇದು ಶೈಕ್ಷಣಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ಗಮನಿಸಲಾಗಿದೆ.
4. ಒಟ್ಟು ವರ್ಗಾವಣೆ ಬಯಸಿರುವ 6186 ಶಿಕ್ಷರಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ 2032 ಶಿಕ್ಷಕರು ವರ್ಗಾವಣೆ ಬಯಸಿದ್ದು, ಉಳಿಕೆ 4154 ಶಿಕ್ಷಕರು ವಿವಿಧ ಜಿಲ್ಲೆಗಳಿಗೆ ವರ್ಗಾವಣೆ ಬಯಸಿರುವುದನ್ನು ಗಮನಿಸಬಹುದಾಗಿದೆ. ಉಳಿಕೆ ಹುದ್ದೆಗಳಿಗೆ ಹೊಸ ನೇಮಕಾತಿ/ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಕಾರ್ಯನಿರ್ವಹಣಾ ವ್ಯವಸ್ಥೆ ಮಾಡುವುದರಿಂದ ಅಖಂಡ ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬಹುದಾಗಿದೆ.
5. ಎಲ್ಲಾ ಇಲಾಖೆಗಳು ಅವರವರ ಕೋರಿಕೆ ಸ್ಥಳಗಳಿಗೆ ವರ್ಗಾವಣೆಗೊಳ್ಳುವ ಅವಕಾಶವಿರುವಂತೆ ಶಿಕ್ಷಣ ಇಲಾಖೆಯಲ್ಲಿಯೂ ಸಹ ಅವಕಾಶ ನೀಡಿ, ಅಖಂಡ ಕರ್ನಾಟಕ ಶಿಕ್ಷಣ ಇಲಾಖೆಯ ಉನ್ನತಿಗೆ ವಿಶೇಷ ನಿಯಮಗಳನ್ನು ಜಾರಿಗೊಳಿಸಿ ವರ್ಗಾವಣೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿ ರವರು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಅಂಕಿ-ಅಂಶಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ➡ Primary School Teacher Data













ಸರ್ ವಿನಮ್ರ ಮನವಿ.. . ..
ReplyDeleteಶಿಕ್ಷಕರ ಪರಸ್ಪರ ವರ್ಗಾವಣೆ ಯಿಂದ ಯಾವುದೇ ಶಿಕ್ಷಕರಿಗೆ ತೊಂದರೆ ಆಗುವುದಿಲ್ಲ.. ಅದನ್ನು ಸಾಮಾನ್ಯ ವರ್ಗಾವಣೆಯಿಂದ ಬೇರ್ಪಡಿಸಿ ಕೌನ್ಸೆಲಿಂಗ್ ಪ್ರಕ್ರಿಯೆಗೆ ಚಾಲನೆ ಕೊಡಿಸಿ ಸರ್... 2 ವರ್ಷ ಕಳೆದರೂ ವರ್ಗಾವಣೆ ಇಲ್ಲದಂತಾಗಿದೆ.... ಸವಿನಯ ಪ್ರಾರ್ಥನೆ ಸರ್
ಇಂತಿ ನಿಮ್ಮ ಅಭಿಮಾನಿ ನೌಕರ
ಬಸವರಾಜ ಕೆ. ಸಿ.
ಸ. ಶಿ
ಗಂಗಾವತಿ