ಇಲಾಖಾ ವಿಚಾರಣೆ ವರದಿ ತಡವಾಗಿದಲ್ಲಿ ಮೇಲಾಧಿಕಾರಿಯವರಿಗೆ ಅಫೀಲು ಸಲ್ಲಿಸುವ ಬಗ್ಗೆ - ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ನನ್ನ ಮೇಲೆ 2020 ರ ಅಕ್ಟೋಬರ್ ತಿಂಗಳಲ್ಲಿ ಇಲಾಖೆ ವಿಚಾರಣೆ ನಿಗದಿಪಡಿಸಿ , ಪೂರ್ಣಗೊಳಿಸಿ ಅಂತಿಮ ವರದಿ ನೀಡುವಂತೆ ಇಲಾಖಾ ಮುಖ್ಯಸ್ಥರು ಆದರ 2020 ರ ಡಿಸೆಂಬರ್ ತಿಂಗಳಿನಲ್ಲಿ ನನಗೆ ಪದೋನ್ನತಿ ಇತ್ತು . ನನ್ನ ಈ ಪದೋನ್ನತಿ ಮುಂದೂಡುವ ಉದ್ದೇಶದಿಂದ ವಿಚಾರಣಾಧಿಕಾರಿ ಇಲ್ಲಿಯವರೆಗೆ ವಿಚಾರಣೆ ಮುಗಿಸಿಲ್ಲ . ಮುಂದೆ ನಾನು ಮೇಲಧಿಕಾರಿಯವರಿಗೆ ಅಪೀಲು ಸಲ್ಲಿಸಬಹುದೇ ? ಕೈಲಾಸ್ ಕಲಬುರಗಿ
ಸರ್ಕಾರಿ ನೌಕರನ ವಿರುದ್ಧ ಇಲಾಖಾ ವಿಚಾರಣೆಯನ್ನು ವಿಚಾರಣಾಧಿಕಾರಿ ನಡೆಸಲು ಹಾಗೂ ವರದಿಯನ್ನು ಶಿಸ್ತು ಪ್ರಾಧಿಕಾರಿಗೆ ನಾಲ್ಕು ತಿಂಗಳೊಳಗೆ ಸಲ್ಲಿಸಲು 11-9-2003ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ : ಸಿಆಸುಇ 12 , ಸೇಇವಿ 2003 ರಂತೆ ಕಾಲಮಿತಿ ಯನ್ನು ನಿಗದಿಪಡಿಸಲಾಗಿದೆ . ಇದನ್ನು ಉಲ್ಲಂಘಿ ಸುವ ಅಧಿಕಾರಿಗಳ ಲೋಪದ ಆರೋಪದ ಮೇಲೆ ಶಿಸ್ತಿನ ಕ್ರಮಕ್ಕೆ ಗುರಿಪಡಿಸಬಹುದು . ಆದ್ದರಿಂದ ನೀವು ಈ ಅಂಶಗಳ ಹಿನ್ನೆಲೆಯಲ್ಲಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಬಹುದು . ಹೆಚ್ಚಿನ ವಿವರಗಳಿಗೆ ಎಂ . ಉಮೇಶ್ ಅವರ ಸಿ.ಸಿ , ನಿಯಮಾವಳಿ - ಸಮಗ್ರ ಕೈಪಿಡಿ ಪುಸ್ತಕವನ್ನು ನೋಡಬಹುದು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.



Comments
Post a Comment