ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಆದ್ಯ ಗಮನಕ್ಕೆ - ದಿನಾಂಕ: 01-09-2021 ರಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಿದ ನಂತರ ಪ್ರಾಥಮಿಕ ಶಾಲಾ ಶಿಕ್ಷಕರ ಈ ಕೆಳಕಂಡ ಸಮಸ್ಯೆಗಳನ್ನು ಬಗೆಹರಿಸಲು ನಿರ್ಣಯಿಸಲಾಯಿತು.
ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಆದ್ಯ ಗಮನಕ್ಕೆ
ದಿನಾಂಕ: 01-09-2021 ರಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಿದ ನಂತರ ಪ್ರಾಥಮಿಕ ಶಾಲಾ ಶಿಕ್ಷಕರ ಈ ಕೆಳಕಂಡ ಸಮಸ್ಯೆಗಳನ್ನು ಬಗೆಹರಿಸಲು ನಿರ್ಣಯಿಸಲಾಯಿತು.
1 ಸಾರ್ವಜನಿಕ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ಮಾಡುವ ಬಗ್ಗೆ.
ಶಿಕ್ಷಣ ಇಲಾಖೆಯ ಸಮಗ್ರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಪ್ರಗತಿಯಲ್ಲಿದ್ದು, ಕರಡು ನಿಯಮಗಳನ್ನು ಪ್ರಕಟಿಸುವ ಪೂರ್ವದಲ್ಲಿ ಈ ಸಂಬAಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘಟನೆಗಳೊAದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸಲು ನಿರ್ಣಯಿಸಲಾಯಿತು.
2 ಪದವೀಧರ ಶಿಕ್ಷಕರನ್ನು (6-8ನೇ) ತರಗತಿಗೆ ವಿಲೀನಗೊಳಿಸುವ ಬಗ್ಗೆ.
ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಪದವೀಧರ ಪ್ರಥಮಿಕ ಶಾಲಾ ಶಿಕ್ಷಕರನ್ನು ಜಿ.ಪಿ.ಟಿ ಶಿಕ್ಷಕರನ್ನಾಗಿ ವಿಲೀನಗೊಳಿಸಲು ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅವಕಾಶ ಕಲ್ಪಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘಟನೆಗಳೊAದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸಲು ನಿರ್ಣಯಿಸಲಾಯಿತು.
3 ಗ್ರಾಮೀಣ ಕೃಪಾಂಕ ರಹಿತ/ ಸಹಿತ ಶಿಕ್ಷಕರ ಸಮಸ್ಯೆ ಬಗ್ಗೆ.
ಗ್ರಾಮೀಣ ಕೃಪಾಂಕ ರಹಿತ/ಸಹಿತ ಶಿಕ್ಷಕರ ಬೇಡಿಕೆಯನ್ನು ನ್ಯಾಯಯುತವಾಗಿ ಈಡೇರಿಸುವುದು ಹಾಗೂ ಸರ್ಕಾರವು ಸಲ್ಲಿಸಿರುವ ಮೇಲ್ಮನವಿಯನ್ನು ಹಿಂಪಡೆಯುವ ಮೂಲಕ ಈ ವೃಂದದ ಶಿಕ್ಷಕರಿಗೆ ನ್ಯಾಯ ಕಲ್ಪಿಸಲು ಶೀಘ್ರದಲ್ಲೇ ಕಾನೂನು ತಜ್ಞರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದೆಂದು ನಿರ್ಣಯಿಸಲಾಯಿತು.
4 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರೌಢಶಾಲಾ ಸಹ ಶಿಕ್ಷಕರ ಮುಂಬಡ್ತಿ ಬಗ್ಗೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರೌಢಶಾಲಾ ಸಹ ಶಿಕ್ಷಕರಾಗಿ ಮುಂಬಡ್ತಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದು, ನ್ಯಾಯಾಲಯದ ತೀರ್ಪಿನಂತೆ ಹಿಂಬಡ್ತಿ ಹೊಂದುವ ಆತಂಕದಲ್ಲಿರುವ ಇಂತಹ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದಿಂದ ಉಚ್ಛ ನ್ಯಾಯದಲ್ಲಿ ಮೇಲ್ಮನವಿ ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
5 ಶಿಶುಪಾಲನಾ ರಜೆ ಸೌಲಭ್ಯ ಬಳಸಿಕೊಳ್ಳುವ ಬಗ್ಗೆ.
ಸರ್ಕಾರವು ಶಿಶುಪಾಲನಾ ರಜಾ ಸೌಲಭ್ಯ ಪಡೆಯಲು ಆದೇಶ ಹೊರಡಿಸಿದ್ದು, ಈ ರಜಾ ಸೌಲಭ್ಯವನ್ನು ಸುಲಲಿತವಾಗಿ ಪಡೆಯಲು ಅನುಕೂಲವಾಗುವಂತೆ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೌಖಿಕವಾಗಿ ಈಗಾಗಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ಸೂಚಿಸಲಾಗಿದ್ದು, ಅಧಿಕೃತವಾಗಿ ಮಾನ್ಯ ಆಯುಕ್ತರು ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಿದ್ದು, ಶಿಕ್ಷಕಿಯರು ಅನಿವರ‍್ಯ ಸಂದರ್ಭಗಳಲ್ಲಿ ಈ ರಜೆ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಸೂಚಿಸಿ ನಿರ್ಣಯಿಸಲಾಯಿತು.
6 ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲಾ ಸಹಶಿಕ್ಷಕರಾಗಿ ಮುಂಬಡ್ತಿ ಹೊಂದಿದ ಶಿಕ್ಷಕರ ವೇತನ ನಿಗದಿ ಬಗ್ಗೆ.
ಪ್ರೌಢಶಾಲಾ ಸಹಶಿಕ್ಷಕರಾಗಿ ಮುಂಬಡ್ತಿ ಹೊಂದಿದ ಶಿಕ್ಷಕರಿಗೆ ಒಂದು ವರ್ಷ ಕಳೆದರೂ ವೇತನ ನಿಗದಿಮಾಡದಿರುವ ಪ್ರಕರಣಗಳನ್ನು ಗಮನಿಸಿ ಶೀಘ್ರ ವೇತನ ನಿಗದಿಗೆ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದರು.
7 ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರಾತಿ ಬಗ್ಗೆ.
ಬಿಡುವಿನ ಅವಧಿಯಲ್ಲಿ ಪ್ರಾಥಮಿಕ ಶಾಲೆಗಳ ಬಡ್ತಿ ಮುಖ್ಯ ಶಿಕ್ಷಕರು ಪ್ರತಿದಿನ ನಿರ್ವಹಿಸುವ ಜಾಬ್ ಚಾರ್ಟ್ನ್ನು ಅವಲೋಕಿಸಿ 30 ದಿನಗಳ ಗಳಿಕೆ ರಜೆ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಯಿತು.
8 ಪ್ರಾಥಮಿಕ ಶಾಲಾ ವೃಂದದಿAದ ಶಿಕ್ಷಣ ಸಂಯೋಜಕರ ನೇಮಕದ ಬಗ್ಗೆ.
ಪ್ರತೀ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ 02 ಶಿಕ್ಷಣ ಸಂಯೋಜಕರ ಹುದ್ದೆಗಳು ಪ್ರಾಥಮಿಕ ಶಾಲಾ ವೃಂದದಿAದ ಇದ್ದು, ಇದುವರೆವಿಗೂ ಆ ಹುದ್ದೆಗಳು ರಾಜ್ಯದಾದ್ಯಂತ ಭರ್ತಿಯಾಗಿರುವುದಿಲ್ಲ. ಈ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ನಿರ್ಣಯಿಸಲಾಯಿತು.
9 ಮಕ್ಕಳ ಸಂಖ್ಯೆಯ ಮೇಲೆ ಮುಖ್ಯ ಶಿಕ್ಷಕರ ನೇಮಕ ಮಾಡುವ ಬಗ್ಗೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 60 ಮಕ್ಕಳಿಗೆ ಒಬ್ಬ ಮುಖ್ಯ ಶಿಕ್ಷಕರಿದ್ದು, ಪದವಿಧರೇತರ ಮುಖ್ಯ ಶಿಕ್ಷಕರಿಗೆ 120 ಮಕ್ಕಳಿಗೆ ನಿಗದಿಪಡಿಸಲು ಚರ್ಚಿಸಿ ತೀರ್ಮಾನಿಸಲಾಗುವುದು.
10 ಹಿಂದಿ ಶಿಕ್ಷಕರಿಗೆ ವರ್ಗಾವಣೆ ಕೌನ್ಸಿಲಿಂಗ್‌ನಲ್ಲಿ ಹುದ್ದೆ ಸೃಜನೆ ಮಾಡುವ ಬಗ್ಗೆ.
ಹಿಂದಿ ಶಿಕ್ಷಕರಿಗೆ ವರ್ಗಾವಣೆ ಕೌನ್ಸಿಲಿಂಗ್‌ನಲ್ಲಿ ಹುದ್ದೆ ಸೃಜಿಸಿ ಅವಕಾಶ ಕಲ್ಪಿಸಲು ತೀರ್ಮಾನಿಸಿದ್ದು, ಕಡ್ಡಾಯ ವರ್ಗಾವಣೆ ಮುಗಿದ ನಂತರ ಹುದ್ದೆಗಳನ್ನು ಹೊಂದಾಣಿಕೆ ಮಾಡಿ ವರ್ಗಾವಣೆಯಲ್ಲಿ ಅವಕಾಶ ಕಲ್ಪಿಸಿ ಅನುಕೂಲ ಮಾಡಿಕೊಡಲು ಪ್ರಧಾನ ಕಾರ್ಯದರ್ಶಿಯವರು ಆಯುಕ್ತರಿಗೆ ಸೂಚಿಸಿ ನಿರ್ಣಯಿಸಿದರು.

Comments
Post a Comment