ಸ್ವಯಂಚಾಲಿತ ವೇತನ ಬಡ್ತಿ- ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ಸ್ವಯಂಚಾಲಿತ ವೇತನ ಬಡ್ತಿ- ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ನಾನು 2007 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದ್ದು ನನ್ನ ಈಗಿನ ಮೂಲ ವೇತನ ರೂ .35150 ಆಗಿದ್ದು ಅಲ್ಪ ಸಂಖ್ಯಾತ ಇಲಾಖೆಯ ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಉರ್ದು ಸಹ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದು ಅದರ ವೇತನ ಶ್ರೇಣಿ ರೂ.33450-62600 ಆಗಿದೆ . ನನಗೆ ಆರ್ಥಿಕ ಮತ್ತು ಸೇವಾ ಸೌಲಭ್ಯ ದೊರಕುತ್ತದೆಯೇ ? ದಿನಾಂಕ : 5-1-2022ಕ್ಕೆ 15 ವರ್ಷದ ಸ್ವಯಂಚಾಲಿತ ವೇತನ ಬಡ್ತಿ ಲಭ್ಯವಾಗುತ್ತದೆಯೇ ? ಆಗ ನನ್ನ ಮೂಲವೇತನ ಎಷ್ಟಾಗುತ್ತದೆ ? - ಐ.ಎ. ಮಸೂತಿ ಬೀದರ್
ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252 ( ಬಿ ) ನೀವು ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಯಿಂದ ಕರ್ನಾಟಕ ರಂತೆ ಕರ್ತವ್ಯದಿಂದ ಬಿಡುಗಡೆಗೊಂಡು ಹೊಸ ಹುದ್ದೆಗೆ ಹಾಜರಾಗಬೇಕು . ಆಗ ರಜೆ , ವೇತನ ರಕ್ಷಣೆ , ಸೇವಾವಧಿ ಪರಿಗಣನೆಯಾಗುತ್ತದೆ . ನೀವು ಹೊಸ ಹುದ್ದೆಗೆ ಕರ್ತವ್ಯಕ್ಕೆ ಹಾಜರಾದ ಮೇಲೆ ಹಳೆಯ ಹುದ್ದೆಯ ವೇತನ ಶ್ರೇಣಿ ಯಲ್ಲಿ 05-01-2022ರ ವರೆಗೆ ಮುಂದುವರಿದು , 15 ವರ್ಷದ ಕಾಲಮಿತಿ ಬಡ್ತಿಯನ್ನು ಪಡೆಯಬೇಕು . ನಂತರ ನಿಯಮ 42 - ಬಿ ( 4 ) ಹಾಗೂ ನಿಯಮ 41 - ಐ ಪ್ರಕಾರ ವೇತನ ನಿಗದಿಕರಣಗೊಳಿಸಬೇಕು . ಆಗ ನಿಮ್ಮ ಮೂಲವೇತನ ರೂ .36950 ಆಗುತ್ತದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕವನ್ನು ನೋಡಬಹುದು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.



Comments
Post a Comment