ಪದೋನ್ನತಿ ಹೊಂದಲು ಜನರಲ್ - ಲಾ ಭಾಗ -1 ಮತ್ತು 2 ರ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಅವಶ್ಯಕವೇ? ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ಪದೋನ್ನತಿ ಹೊಂದಲು ಜನರಲ್ - ಲಾ ಭಾಗ -1 ಮತ್ತು 2 ರ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಅವಶ್ಯಕವೇ- ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ನಾನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದು , ಕಛೇರಿ ಅಧೀಕ್ಷಕರ ಹುದ್ದೆಗೆ ಪದೋನ್ನತಿ ನೀಡಲು ಜನರಲ್ - ಲಾ ಭಾಗ -1 ಮತ್ತು 2 ರಲ್ಲಿ ಉತ್ತೀರ್ಣರಾಗಿರಬೇಕೆಂದು ತಿಳಿಸಿ , ನನ್ನ ಬಡ್ತಿಯನ್ನು ತಡೆಹಿಡಿದಿದ್ದಾರೆ . ಆದುದರಿಂದ ಅಧೀಕ್ಷಕರ ಹುದ್ದೆಗೆ ಪದೋನ್ನತಿ ಹೊಂದಲು ಜನರಲ್ - ಲಾ ಭಾಗ -1 ಮತ್ತು 2 ರ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಅವಶ್ಯಕವೇ ?
| ಮಹೇಶ್ ಕುಮಾರ್ ಬೆಂಗಳೂರು
1974 ರ ಕರ್ನಾಟಕ ಸರ್ಕಾರಿ ಸೇವಾ ( ಕನ್ನಡ ಭಾಷೆ ಷೆಡ್ಯೂಲ್‌ನಲ್ಲಿ ಎಲ್ಲಾ ಇಲಾಖೆಗಳ ನೌಕರರು ಮತ್ತು ಸೇವಾ ಪರೀಕ್ಷೆಗಳು ) ನಿಯಮಾವಳಿಯ ಯಾವ ಯಾವ ಇಲಾಖಾ ಪರೀಕ್ಷೆಗಳಲ್ಲಿ ಅವರವರ ಹುದ್ದೆಗೆ ತಕ್ಕಂತೆ ತೇರ್ಗಡೆಯಾಗಬೇಕೆಂಬ ಸೂಚನೆಯನ್ನು ನೀಡಲಾಗಿದೆ . ಅದರಂತೆ ನೀವು ಕಛೇರಿಯ ಅಧೀಕ್ಷಕರ ಹುದ್ದೆಗೆ ಜನರಲ್ಲಾ ಭಾಗ -1 ತೇರ್ಗಡೆಯಾದರೆ ಸಾಕು , ಆದರೆ ಮುಂದಿನ ಗ್ರೂಪ್ - ಎ ಹುದ್ದೆಯವರಿಗೆ ಪದೋನ್ನತಿ ಹೊಂದಲು ಜನರಲ್ - ಲಾ ಭಾಗ -2 ಕಡ್ಡಾಯವಾಗಿರುತ್ತದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಪುಸ್ತಕ ಕೈಪಿಡಿ ನೋಡಬಹುದು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.



Comments
Post a Comment