2021-22ನೇ ಸಾಲಿನಲ್ಲಿ ಸರ್ಕಾರಿ ಸೇವೆಗೆ ಸೇರುವ ಎಲ್ಲಾ ಅಧಿಕಾರಿ / ನೌಕರರ ಸೇವಾ ವಹಿಯನ್ನು Electronic Service Register ( ESR ) ನಲ್ಲಿ ಅನುಷ್ಠಾನಗೊಳಿಸುವ ಕುರಿತು .
2021-22ನೇ ಸಾಲಿನಲ್ಲಿ ಸರ್ಕಾರಿ ಸೇವೆಗೆ ಸೇರುವ ಎಲ್ಲಾ ಅಧಿಕಾರಿ / ನೌಕರರ ಸೇವಾ ವಹಿಯನ್ನು Electronic Service Register ( ESR ) ನಲ್ಲಿ ಅನುಷ್ಠಾನಗೊಳಿಸುವ ಕುರಿತು .
ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಗಳಲ್ಲಿ , ಹೆಚ್.ಆರ್.ಎಂ.ಎಸ್ 2.0 ಯೋಜನೆಯ ಭಾಗವಾಗಿರುವ Electronic Services Register ( ESR ) Application ನಲ್ಲಿ 2021-22ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ / ನೌಕರರ ಸೇವಾ ವಹಿಯನ್ನು " ವಿದ್ಯುನ್ಮಾನ ಸೇವಾ ವಹಿ ” ( ESR ) ನಲ್ಲಿಯೇ ಅನುಷ್ಠಾನಗೊಳಿಸುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ . ಅದರಂತೆ ಪರಿಶೀಲಿಸಿ , ಈ ಕೆಳಕಂಡ ಆದೇಶವನ್ನು ಹೊರಡಿಸಿದೆ . ಸರ್ಕಾರಿ ಆದೇಶ ಸಂಖ್ಯೆ : ಆಇ 3 ಸನತಿ 2021 ಬೆಂಗಳೂರು , ದಿನಾಂಕ : 18/09/2021 2021-22ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲ ಅಧಿಕಾರಿ / ನೌಕರರುಗಳ ಸೇವಾ ವಹಿಯನ್ನು " ವಿದ್ಯುನ್ಮಾನ ಸೇವಾ ವಹಿ " ( Electronic Service Register ( ESR ) ನಲ್ಲಿಯೇ ಅನುಷ್ಠಾನಗೊಳಿಸತಕ್ಕದ್ದು , ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಗಳು ಸೂಕ್ತ ಕ್ರಮವನ್ನು ಕೈಗೊಳ್ಳತಕ್ಕದ್ದು . ಈ ಕುರಿತು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಿಗೆ ಪ್ರತ್ಯೇಕವಾಗಿ ಸೂಕ್ತ ತಿದ್ದುಪಡಿ ತರಲಾಗುವುದು . ಎಂದು ಆದೇಶೀಸಲಾಗಿದೆ.

Comments
Post a Comment