ವಿಶೇಷ ಭತ್ಯೆ ಹಾಗೂ ವೃತ್ತಿ ತೆರಿಗೆಯಿಂದ ವಿನಾಯತಿ - ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ನಾನು ಗ್ರೂಪ್ ಡಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ . ನನ್ನ ಪತ್ನಿಯು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ . ನಮಗೆ ಒಂದು ಹೆಣ್ಣು ಮಗುವಿದೆ . ನಾನು ಕುಟುಂಬ ಯೋಜನೆ ಅನುಸರಣೆಗೆ ವಿಶೇಷ ಭತ್ಯೆ ಹಾಗೂ ವೃತ್ತಿ ತೆರಿಗೆಯಿಂದ ವಿನಾಯ್ತಿ ಪಡೆದಿರುತ್ತೇನೆ . ನನ್ನದು ಈಗಾಗಲೇ 25 ವರ್ಷಗಳ ಸೇವೆ ಆಗಿರುವುದರಿಂದ ನಾನು ಸ್ವಯಂ ನಿವೃತ್ತಿ ಪಡೆದರೆ , ಈ ವಿಶೇಷ ಭತ್ಯೆ ಮತ್ತು ವೃತ್ತಿ ತೆರಿಗೆ ವಿನಾಯ್ತಿಯನ್ನು ನನ್ನ ಪತ್ನಿಯು ಪಡೆಯಲು ಕಾನೂನಿನಲ್ಲಿ ಅವಕಾಶವಿದೆಯೇ ?
ದಯವಿಟ್ಟು ಮಾಹಿತಿ ನೀಡಿ . | ಎಸ್.ಗಣೇಶ ಶಿವಮೊಗ್ಗ 01.10.1985 ರ ಸರ್ಕಾರಿ ಆದೇಶ ಸಂಖ್ಯೆ : ಎಫ್ ಡಿ 27 / ಎಸ್‌ಆರ್‌ಎಸ್ / 85 ರಂತೆ ಪತಿ - ಪತ್ನಿ , ಯಾರ ವಾರ್ಷಿಕ ವೇತನ ಬಡ್ತಿ ಹೆಚ್ಚಿಗೆ ಇರುತ್ತದೆಯೋ ಅವರಿಗೆ ಈ ವಿಶೇಷ ಭತ್ಯೆಯನ್ನು ಮಂಜೂರು ಮಾಡಲು ಅವಕಾಶ ಇರುತ್ತದೆ . ಆದರೆ , ನೀವು ಸ್ವಯಂ ನಿವೃತ್ತಿ ಪಡೆದರೆ ನಿಮ್ಮ ಭತ್ಯೆಗೆ ಈ ವಿಶೇಷ ಭತ್ಯೆ ಮತ್ತು ವೃತ್ತಿ ತೆರಿಗೆ ವಿನಾಯ್ತಿ ವರ್ಗಾಯಿಸಲು ಅವಕಾಶವಿರುವುದಿಲ್ಲ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು 24 ' ಪುಸ್ತಕ ನೋಡಬಹುದು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.



Comments
Post a Comment