ಪರಿವಾರ ಜಾತಿಯನ್ನು ಪರಿಶಿಷ್ಟ ಪಂಗಡ ಗುಂಪಿಗೆ ಸೇರಿರುವ ಬಗ್ಗೆ ಪ್ರಮಾಣಪತ್ರವನ್ನು ಸೇವಾ ದಾಖಲೆಗಳಲ್ಲಿ ನಮೂದಿಸುವ ಬಗ್ಗೆ. ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕನಾಗಿ ಪರಿವಾರ ಜಾತಿ ಪ್ರವರ್ಗ 1 ನೇ ಕೈಗೊಳ್ಳುವವರೆವಿಗೂ ಗುಂಪಿನಲ್ಲಿ ಆಯ್ಕೆಯಾಗಿ 2007 ರಿಂದ ಕರ್ತವ್ಯ ಹೊರಡಿಸುವವರೆಗೂ ನಿರ್ವಹಿಸುತ್ತಿದ್ದೇನೆ . 20.03.2020 ರಂದು ಕೇಂದ್ರ ಸರ್ಕಾರವು ಪರಿವಾರ ಜಾತಿಯನ್ನು ಪರಿಶಿಷ್ಟ ಪಂಗಡ ಗುಂಪಿಗೆ ಸೇರಿಸಿ ಅಧಿಸೂಚನೆ ಹೊರಡಿಸಿದೆ . ನಾನು ಇದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಪಡೆದು ನಮ್ಮ ಕಚೇರಿಗೆ ಸೇವಾ ದಾಖಲೆಗೆ ನಮೂದಿಸಲು ವಿನಂತಿಸಿದರೂ ಪ್ರಯೋಜನವಾಗಿರುವುದಿಲ್ಲ . ಮುಂದೇನು ಮಾಡಬೇಕು ತಿಳಿಯುತ್ತಿಲ್ಲ . ದಯವಿಟ್ಟು ಇದರ ಬಗ್ಗೆ ಸೂಕ್ತ ಸಲಹೆ ನೀಡುವಿರಾ ? | ಎಂ.ಕುಮಾರ್ ಮೈಸೂರು ಜಿಲ್ಲೆ
ಕೇಂದ್ರ ಸರ್ಕಾರವು ತನ್ನ ಜಾತಿ ಪಟ್ಟಿಯಲ್ಲಿ ಪರಿವಾರ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ , ಅಧಿಸೂಚನೆ ಹೊರಡಿಸಿದೆಯೇನೋ ನಿಜ . ಆದರೆ ರಾಜ್ಯ ಸರ್ಕಾರವು ಈ ಜಾತಿಯನ್ನು ತನ್ನ ಜಾತಿ ಪಟ್ಟಿಯಲ್ಲಿ ಪರಿವಾರ ಜಾತಿಯು ಪರಿಶಿಷ್ಟ ಪಂಗಡಕ್ಕೆ ಸೇರಿದೆ ಎಂದು ತೀರ್ಮಾನ ಮಾಡಿಲ್ಲ . ರಾಜ್ಯ ಸರ್ಕಾರ ಆ ತೀರ್ಮಾನ ಕೈಗೊಳ್ಳುವವರೆವಿಗೂ ಹಾಗೂ ಸೂಕ್ತ ಆದೇಶವನ್ನು ಹೊರಡಿಸುವವರೆಗೂ ಸೇವಾ ದಾಖಲೆಗಳಲ್ಲಿ ನಮೂದಿಸಲು ಆಗುವುದಿಲ್ಲ . ಆದುದರಿಂದ ನೀವು ರಾಜ್ಯ ಸರ್ಕಾರವು ಈ ಬಗ್ಗೆ ಆದೇಶ ಹೊರಡಿಸುವಂತೆ ಪ್ರಯತ್ನಿಸಬೇಕು . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ “ ಕರ್ನಾಟಕ ಸೇವಾ ಕಾನೂನು ಕೈಪಿಡಿ ' ಪುಸ್ತಕವನ್ನು ನೋಡಬಹುದು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.



Comments
Post a Comment