Skip to main content

Posts

Showing posts from September, 2021

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

HRMS-K2 ಸಲಹೆ -58 ಗಳಿಕೆ ರಜೆ ಬಿಲ್ಲನ್ನು ತಯಾರಿಸುವ ಬಗ್ಗೆ.

HRMS-K2 ಸಲಹೆ -58  ಗಳಿಕೆ ರಜೆ ಬಿಲ್ಲನ್ನು ತಯಾರಿಸುವ ಬಗ್ಗೆ.  HRMS n ಸರ್ವಿಸ್ ರಿಜಿಸ್ಟರ್ ನಲ್ಲಿ Leave encashment select ಮಾಡುವುದು. Kgid no ಹಾಕಿದ ನಂತರ ಪರದೆಯಲ್ಲಿ  ಮಂಜೂರಾತಿ ಆದೇಶ ಸಂಖ್ಯೆ ಮತ್ತು ದಿನಾಂಕವನ್ನು entry ಮಾಡಬೇಕು 15 ದಿನಗಳ ಗಳಿಕೆ ರಜೆ ನಗದಿಕರಣಕ್ಕಾಗಿ  ಅದ್ಯಾರ್ಪಿಸಿರುವ ದಿನಾಂಕವನ್ನು ನಮೂದಿಸಬೇಕು. Remarks ನಲ್ಲಿ ಯಾವ ಬ್ಲಾಕ್ ಅವಧಿ ಎಂದು  ನಮೂದಿಸಬೇಕು ಮಂಜೂರಾತಿ ಆದೇಶವನ್ನು ಪಿಡಿಎಫ್ ನಲ್ಲಿ scan ಮಾಡಿ upload ಮಾಡಿ approved ಮಾಡುವುದು. ನಂತರ arrears menu ವಿಗೆ ಬಂದು arrears generate select madi Kgid no ಹಾಕಿದ ನಂತರ arrears typeನಲ್ಲಿ encashment select ಮಾಡಿ get details ಮೇಲೆ ಕ್ಲಿಕ್ ಮಾಡುವುದು. ನಂತರ ನಾವು ಎಂಟ್ರಿ ಮಾಡಿದ ಬ್ಲಾಕ್ ಅವದಿ ಸೆಲೆಕ್ಟ್ ಮಾಡಿ generate arrears ಮೇಲೆ click ಮಾಡಬೇಕು. ನಂತರ leave encashment before approvel ge view report print ತೆಗೆದುಕೊಳ್ಳಬೇಕು ನಂತರ send approve arrears  Bill to k2 select madi Kgid no ಹಾಕಿ month, year,  head of account , est no ನಮೂದಿಸಿ get ಮೇಲೆ ಕ್ಲಿಕ್ ಮಾಡಿ  send to k2 ಮಾಡುವುದು. ಮುಖ್ಯವಾಗಿ ಗಮನಿಸಬೇಕಾದ ಅಂಶಗಳು 1.ಜನವರಿ ಅಥವಾ ಜುಲೈ ಮಾಹೆಯಲ್ಲಿ  ಗಳಿಕೆ ರಜೆ ನಗದಿಕರಣಕ್ಕಾಗಿ  ಅದ್ಯಾರ್...

ಪದೋನ್ನತಿ ಹೊಂದಲು ಜನರಲ್ - ಲಾ ಭಾಗ -1 ಮತ್ತು 2 ರ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಅವಶ್ಯಕವೇ? ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ

ಪದೋನ್ನತಿ ಹೊಂದಲು ಜನರಲ್ - ಲಾ ಭಾಗ -1 ಮತ್ತು 2 ರ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಅವಶ್ಯಕವೇ -  ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ ನಾನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದು , ಕಛೇರಿ ಅಧೀಕ್ಷಕರ ಹುದ್ದೆಗೆ ಪದೋನ್ನತಿ ನೀಡಲು ಜನರಲ್ - ಲಾ ಭಾಗ -1 ಮತ್ತು 2 ರಲ್ಲಿ ಉತ್ತೀರ್ಣರಾಗಿರಬೇಕೆಂದು ತಿಳಿಸಿ , ನನ್ನ ಬಡ್ತಿಯನ್ನು ತಡೆಹಿಡಿದಿದ್ದಾರೆ . ಆದುದರಿಂದ ಅಧೀಕ್ಷಕರ ಹುದ್ದೆಗೆ ಪದೋನ್ನತಿ ಹೊಂದಲು ಜನರಲ್ - ಲಾ ಭಾಗ -1 ಮತ್ತು 2 ರ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಅವಶ್ಯಕವೇ ? | ಮಹೇಶ್ ಕುಮಾರ್ ಬೆಂಗಳೂರು  1974 ರ ಕರ್ನಾಟಕ ಸರ್ಕಾರಿ ಸೇವಾ ( ಕನ್ನಡ ಭಾಷೆ ಷೆಡ್ಯೂಲ್‌ನಲ್ಲಿ ಎಲ್ಲಾ ಇಲಾಖೆಗಳ ನೌಕರರು ಮತ್ತು ಸೇವಾ ಪರೀಕ್ಷೆಗಳು ) ನಿಯಮಾವಳಿಯ ಯಾವ ಯಾವ ಇಲಾಖಾ ಪರೀಕ್ಷೆಗಳಲ್ಲಿ ಅವರವರ ಹುದ್ದೆಗೆ ತಕ್ಕಂತೆ ತೇರ್ಗಡೆಯಾಗಬೇಕೆಂಬ ಸೂಚನೆಯನ್ನು ನೀಡಲಾಗಿದೆ . ಅದರಂತೆ ನೀವು ಕಛೇರಿಯ ಅಧೀಕ್ಷಕರ ಹುದ್ದೆಗೆ ಜನರಲ್ಲಾ ಭಾಗ -1 ತೇರ್ಗಡೆಯಾದರೆ ಸಾಕು , ಆದರೆ ಮುಂದಿನ ಗ್ರೂಪ್ - ಎ ಹುದ್ದೆಯವರಿಗೆ ಪದೋನ್ನತಿ ಹೊಂದಲು ಜನರಲ್ - ಲಾ ಭಾಗ -2 ಕಡ್ಡಾಯವಾಗಿರುತ್ತದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಪುಸ್ತಕ ಕೈಪಿಡಿ ನೋಡಬಹುದು . KCSR Book Kanna...

HRMS-K2 ಸಲಹೆ-55ಸ್ಥಗಿತ ವೇತನ ಬಡ್ತಿ staganation increment

HRMS-K2 ಸಲಹೆ-55 ಸ್ಥಗಿತ ವೇತನ ಬಡ್ತಿ staganation increment ನೌಕರನ ಮೂಲ ವೇತನವು ಆ ವೇತನ-ಶ್ರೇಣಿಯ ಗರಿಷ್ಠ ಮಿತಿಯನ್ನು ತಲುಪಿದಾಗ ಸರ್ಕಾರವು ಸ್ಥಗಿತ ಬಡ್ತಿಯನ್ನು ಸೇವಾವಧಿಯಲ್ಲಿ ಗರಿಷ್ಠ 8 ಬಾರಿ ನೀಡುತ್ತದೆ.  ಮೇಲಿನ ಅಧಿಕಾರಿಗಳಲ್ಲಿ ಮಂಜೂರಾತಿ ಆದೇಶವನ್ನು ಪಡೆದುಕೊಂಡು Payrole ನಲ್ಲಿ effect stagnation increment select ಮಾಡಿ ಕೆ.ಜಿ.ಐ.ಡಿ ಸಂಖ್ಯೆ: ನಮೂದಿಸಿ. • ಸ್ಥಗಿತಗೊಂಡ ಬಡ್ತಿಯ ಮೊತ್ತ ಸ್ಥಗಿತಗೊಂಡ ಎಲ್ಲಾ ಬಡ್ತಿಗಳ ಒಟ್ಟು ಮೊತ್ತ ನಮೂದಿಸಿ ಮತ್ತು ಮಂಜೂರಾತಿ ಆದೇಶ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸಬೇಕು.  ಎಲ್ಲಾವುಗಳನ್ನು ಭರ್ತಿ ಮಾಡಿ   approved ಮಾಡುವುದು.

ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಲಾಗಿನ್ ಆಗುವ ಬಗ್ಗೆ

ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಲಾಗಿನ್ ಆಗುವ ಬಗ್ಗೆ

2020-21 ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ GPF Statement ಬಿಡುಗಡೆಯಾಗಿದ್ದು ಈ ಕೆಳಗಿನ ಲಿಂಕ್ ಬಳಸಿ ಸ್ಟೇಟಮೆಂಟ್ ಡೌನ್‌ಲೋಡ್ ಮಾಡಬಹುದು.

 2020-21 ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ GPF Statement ಬಿಡುಗಡೆಯಾಗಿದ್ದು ಈ ಕೆಳಗಿನ ಲಿಂಕ್ ಬಳಸಿ ಸ್ಟೇಟಮೆಂಟ್ ಡೌನ್‌ಲೋಡ್ ಮಾಡಬಹುದು http://agkar.cag.gov.in/agogpf/gpflogin.aspx

HRMS - K2 ಸಲಹೆ-52ಸಲಹೆ-51 continued partial pay/Split salary ಬಗ್ಗೆ

HRMS - K2 ಸಲಹೆ-52 ಸಲಹೆ-51 continued  partial pay/Split salary  ಬಗ್ಗೆ ಅಧಿಕಾರಿ ಅಥವಾ ಸಿಬ್ಬಂದಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ   ದಿನಕ್ಕೆ HRMS ನಲ್ಲಿ Transfer   ಮಾಡಿ ಕೊಳ್ಳಬೇಕು. arrears ಮೆನುಗೆ ಹೋಗಿ  partial pay ಮಾಡಬೇಕು. In case joining time or waiting period salary for some fraction number of days has to be generated then Split salary option  ತೆಗೆದುಕೊಳ್ಳಬೇಕು.ನಂತರ add  attendance ನಲ್ಲಿ  paid days  ಮತ್ತು  unpaid ದಿನಗಳನ್ನು entry ಮಾಡಿ  split salary  generate   ಮಾಡುವುದು.  ನಂತರ Arrears Menu  ಹೋಗಿ Select the Split Salary Type, Month, Year, From Date, End Date.ಹಾಕಿ approve ಮಾಡಿ send to K2.

KPSC: 2020 ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯ Results ಇದೀಗ ಪ್ರಕಟವಾಗಿದೆ.

KPSC: 2020 ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯ Results ಇದೀಗ ಪ್ರಕಟವಾಗಿದೆ. Results ಡೌನ್‌ಲೋಡ್ ಮಾಡಲು 👇 ಕ್ಲಿಕ್ ಮಾಡಿ. https://drive.google.com/file/d/1hd4w1VfXal_FFDJMEypzYsY0uqByTScv/view?usp=sharing

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವಲಂಬಿತರಿಗೆ ಉಚಿತ ಚಿಕಿತ್ಸೆ ನೀಡುವ “ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ” ಅನುಷ್ಠಾನಗೊಳಿಸಲು ಕಡ್ಡಾಯವಾಗಿ Online ನಲ್ಲಿ ಮಾಹಿತಿ ನೀಡುವ ಬಗ್ಗೆ

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವಲಂಬಿತರಿಗೆ ಉಚಿತ ಚಿಕಿತ್ಸೆ ನೀಡುವ “ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ” ಅನುಷ್ಠಾನಗೊಳಿಸಲು ಕಡ್ಡಾಯವಾಗಿ Online ನಲ್ಲಿ ಮಾಹಿತಿ ನೀಡುವ ಬಗ್ಗೆ.   ಮಾನ್ಯ ರಾಜ್ಯ ಸರ್ಕಾರಿ ನೌಕರರ ಬಂಧುಗಳೇ,       ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವಲಂಬಿತರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ      “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” ಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿದ್ದು, ಇದರ ಸಮಗ್ರ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ರಾಜ್ಯ ಸರ್ಕಾರಿ ನೌಕರರು-ಅಧಿಕಾರಿಗಳ ನಿಖರ ಮಾಹಿತಿಯನ್ನು Online ಮೂಲಕ ಕ್ರೂಢೀಕರಿಸಿ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗುವುದು.      ಆದ್ದರಿಂದ ದಿನಾಂಕ: 30-09-2021 ರೊಳಗೆ ಈ ಕೆಳಕಂಡ ಲಿಂಕ್ ಬಳಸಿ ತಮ್ಮ ಮಾಹಿತಿಯನ್ನು Online ಮೂಲಕ ಕಡ್ಡಾಯವಾಗಿ ಸಲ್ಲಿಸಲು ಕೋರಿದೆ.  https://bit.ly/cashlesshealth -:: ವಿಶೇಷ ಸೂಚನೆ ::- 01. KGID ಸಂಖ್ಯೆ ಹೊಂದಿರುವ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರಾಗಿರುವ ರಾಜ್ಯ ಸರ್ಕಾರದ ಖಾಯಂ ಸರ್ಕಾರಿ ನೌಕರರು / ಅಧಿಕಾರಿಗಳು ಮಾತ್ರ ಮಾಹಿತಿ ಸಲ್ಲಿಸುವುದು. 02. ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಆರೋಗ್ಯ ಯೋಜನೆ ಜಾರಿಯಲ್ಲಿರುವುದರಿಂದ ಈ ಇಲ...

ಅಂತರ್ ಜಿಲ್ಲಾ ವರ್ಗಾವಣೆ ಬಯಸುವ ಪ್ರಾಥಮಿಕ ಶಾಲಾ ಶಿಕ್ಷಕರ ಕ್ರೂಢೀಕೃತ ಮಾಹಿತಿಯನ್ನು ಮಾನ್ಯ ಶಿಕ್ಷಣ ಸಚಿವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಲ್ಲಿಕೆ.

ಅಂತರ್ ಜಿಲ್ಲಾ ವರ್ಗಾವಣೆ ಬಯಸುವ ಪ್ರಾಥಮಿಕ ಶಾಲಾ ಶಿಕ್ಷಕರ  ಕ್ರೂಢೀಕೃತ ಮಾಹಿತಿಯನ್ನು ಮಾನ್ಯ ಶಿಕ್ಷಣ ಸಚಿವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಲ್ಲಿಕೆ. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ದಿನಾಂಕ: 01-09-2021ರಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂತರ್  ಜಿಲ್ಲಾ ವರ್ಗಾವಣೆ ಬಯಸುವ ಪ್ರಾಥಮಿಕ ಶಾಲಾ ಶಿಕ್ಷಕರ ನಿಖರ ಹಾಗೂ ವಾಸ್ತವ ಮಾಹಿತಿಯನ್ನು ಸಲ್ಲಿಸಲು ಸೂಚನೆ ನೀಡಿದ್ದರ ಮೇರೆಗೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಈ ಕೆಳಕಂಡ ಅಂಶಗಳ ಹಿನ್ನಲೆಯಲ್ಲಿ ನಿಖರ ಹಾಗೂ ವಾಸ್ತವ ಮಾಹಿತಿಯನ್ನು ಸಂಗ್ರಹಿಸಿ ಅನುಬಂಧವಾರು ಸಲ್ಲಿಸಿರುವ ಮಾಹಿತಿಯನ್ನಾಧರಿಸಿ “ಒಂದು ಬಾರಿಗೆ” ಸೀಮಿತವಾಗಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಲು ಕೋರಿ ಅಂಕಿ-ಅಂಶಗಳ ಮಾಹಿತಿಯನ್ನು ತಮಗೆ ಸಲ್ಲಿಸಿದೆ. ` 1. ಶಿಕ್ಷಕರು ಮಾನಸಿಕ ನೆಮ್ಮದಿಯಿಂದ ಇದ್ದರೆ ಮಾತ್ರ ತರಗತಿ ಬೋಧನೆ ಹಾಗೂ ಕಲಿಕೆ ಗುಣಮಟ್ಟದಿಂದ ಕೂಡಿರುತ್ತದೆ ಎಂಬ ಶೈಕ್ಷಣಿಕ ಮನೋವಿಜ್ಞಾನಿಗಳ ಮಾತಿನಂತೆ ಕಳೆದ 10-15 ವರ್ಷಗಳಿಂದ ತಮ್ಮ ಕುಟುಂಬದಿಂದ ದೂರವಿರುವ ಅಂತರ್ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ವರ್ಗಾವಣೆ ನಿಯಮಗಳ ನ್ಯೂನತೆಯಿಂದ ಮಾನಸಿಕ ಸ್ವಾಸ್ಥ್ಯ ವನ್ನು ಕಳೆದುಕೊಂಡಿರುತ್ತಾರೆ. ಹಾಗಾಗಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಸಕ್ತ ಸಾಲಿನಲ್ಲಿ ಪಶ್ಚಿಮ ಬಂಗಾಳದ ಮ...

ಅಂತರ್ ಜಿಲ್ಲಾ ವರ್ಗಾವಣೆ ಬಯಸುವ ಪ್ರೌಢ ಶಾಲಾ ಶಿಕ್ಷಕರ ಕ್ರೂಢೀಕೃತ ಮಾಹಿತಿಯನ್ನು ಮಾನ್ಯ ಶಿಕ್ಷಣ ಸಚಿವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಲ್ಲಿಕೆ.

 ಅಂತರ್ ಜಿಲ್ಲಾ ವರ್ಗಾವಣೆ ಬಯಸುವ ಪ್ರೌಢ ಶಾಲಾ ಶಿಕ್ಷಕರ  ಕ್ರೂಢೀಕೃತ ಮಾಹಿತಿಯನ್ನು ಮಾನ್ಯ ಶಿಕ್ಷಣ ಸಚಿವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಲ್ಲಿಕೆ. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೌಢ ಶಾಲಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ದಿನಾಂಕ: 01-09-2021ರಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂತರ್  ಜಿಲ್ಲಾ ವರ್ಗಾವಣೆ ಬಯಸುವ ಪ್ರೌಢ ಶಾಲಾ ಶಿಕ್ಷಕರ ನಿಖರ ಹಾಗೂ ವಾಸ್ತವ ಮಾಹಿತಿಯನ್ನು ಸಲ್ಲಿಸಲು ಸೂಚನೆ ನೀಡಿದ್ದರ ಮೇರೆಗೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಈ ಕೆಳಕಂಡ ಅಂಶಗಳ ಹಿನ್ನಲೆಯಲ್ಲಿ ನಿಖರ ಹಾಗೂ ವಾಸ್ತವ ಮಾಹಿತಿಯನ್ನು ಸಂಗ್ರಹಿಸಿ ಅನುಬಂಧವಾರು ಸಲ್ಲಿಸಿರುವ ಮಾಹಿತಿಯನ್ನಾಧರಿಸಿ “ಒಂದು ಬಾರಿಗೆ” ಸೀಮಿತವಾಗಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಲು ಕೋರಿ ಅಂಕಿ-ಅ0ಶಗಳ ಮಾಹಿತಿಯನ್ನು ತಮಗೆ ಸಲ್ಲಿಸಿದೆ. 1. ಶಿಕ್ಷಕರು ಮಾನಸಿಕ ನೆಮ್ಮದಿಯಿಂದ ಇದ್ದರೆ ಮಾತ್ರ ತರಗತಿ ಬೋಧನೆ ಹಾಗೂ ಕಲಿಕೆ ಗುಣಮಟ್ಟದಿಂದ ಕೂಡಿರುತ್ತದೆ ಎಂಬ ಶೈಕ್ಷಣಿಕ ಮನೋವಿಜ್ಞಾನಿಗಳ ಮಾತಿನಂತೆ ಕಳೆದ 10-15 ವರ್ಷಗಳಿಂದ ತಮ್ಮ ಕುಟುಂಬದಿAದ ದೂರವಿರುವ ಅಂತರ್ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ವರ್ಗಾವಣೆ ನಿಯಮಗಳ ನ್ಯೂನತೆಯಿಂದ ಮಾನಸಿಕ ಸ್ವಾಸ್ಥö್ಯವನ್ನು ಕಳೆದುಕೊಂಡಿರುತ್ತಾರೆ. ಹಾಗಾಗಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಸಕ್ತ ಸಾಲಿನಲ್ಲಿ ಪಶ್ಚಿಮ ಬಂಗಾಳದ ಮಾದರಿಯ...

ಕಂಪ್ಯೂಟರ್ ಸಾಕ್ಷರತ ಪರೀಕ್ಷೇಗಳ ಪರೀಕ್ಷಾ ಕೇಂದ್ರಗಳು ಹಾಗೂ ಪರೀಕ್ಷಾ ದಿನಾಂಕಗಳು.

ಕಂಪ್ಯೂಟರ್ ಸಾಕ್ಷರತ ಪರೀಕ್ಷೇಗಳ ಪರೀಕ್ಷಾ ಕೇಂದ್ರಗಳು ಹಾಗೂ ಪರೀಕ್ಷಾ ದಿನಾಂಕಗಳು. Dist Date Center Name Chikkaballapura 24-Sep S J C Institute of Technology P.B, No. 20, BB Rd, Chikkaballapur, Karnataka 562101 Chikkaballapura Karnataka Chikkamagaluru 24-Sep Adichunchanagiri Institute of Technology KM Road, Chickmagaluru, Karnataka Chikmagalur Karnataka Kodagu 24-Sep coorg institute of technology 11,Halligattu,Ponnampet Kodagu 571216 Kodagu Karnataka Raichuru 24-Sep   Imak technologies 2 ND floor Mahammediya complex, behind vegetable market, Raichur, Karnataka 584101 Raichur Karnataka Hassana 25-Sep   Rajeev Polytechnic Bangalore-Mangalore Bypass Road,Industrial Area,Adjacent to HPCL,Hassan-573201 Hassan Karnataka Koppala 25-Sep ...

ದಿನಕ್ಕೊಂದು ಸಲಹೆ-49 Re appointment out -ಹುದ್ದೆಯಿಂದ ಮತ್ತೊಂದು ಹುದ್ದೆಗೆ ಇಲಾಖಾ ಅನುಮತಿ ಪಡೆದು ಮತ್ತೊಂದು ಹುದ್ದೆಗೆ ನೇಮಕಾತಿ ಹೊಂದಿ, ಹಾಲಿ ಹುದ್ದೆಯಿಂದ ವಿಮುಕ್ತಿಹೊಂದಿದ ನೌಕರರನ್ನು Transfer ಮೆನುವನಲ್ಲಿನ

ದಿನಕ್ಕೊಂದು ಸಲಹೆ-49 Re appointment out ಯಾವುದೇ ನೌಕಕರು ಈಗಿರುವ ಹುದ್ದೆಯಿಂದ ಮತ್ತೊಂದು ಹುದ್ದೆಗೆ ಇಲಾಖಾ ಅನುಮತಿ ಪಡೆದು ಮತ್ತೊಂದು ಹುದ್ದೆಗೆ ನೇಮಕಾತಿ ಹೊಂದಿ, ಹಾಲಿ ಹುದ್ದೆಯಿಂದ ವಿಮುಕ್ತಿಹೊಂದಿದ ನೌಕರರನ್ನು Transfer ಮೆನುವನಲ್ಲಿನ appointment inservice out ನಲ್ಲಿ Reappointment ಆಯ್ಕೆಮಾಡಿ SAVE/APPROVE ಮಾಡುವುದು (ಈ ಪ್ರಕರಣಗಳಲ್ಲಿ ಯಾವುದೇ ಕಾರಣಕ್ಕೂ EXIT OR TRANSFER OUT ಮಾಡಬಾರದು) appointment inservice OUT ಮಾಡಲಾದ ನೌಕರರನ್ನು appointment inservice in ಮಾಡಿಕೊಳ್ಳುವಾಗ PROBETIONARY ಎಂದು ಆಯ್ಕೆ ಮಾಡಿ APPROVE ಮಾಡುವುದು. ರಾಜ್ಯ ಸರ್ಕಾರಿ ನೌಕರರ ಸೇವಾಸೌಲಭ್ಯಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.➡  ksgea news service

ಸ್ವಯಂಚಾಲಿತ ವೇತನ ಬಡ್ತಿ- ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ

ಸ್ವಯಂಚಾಲಿತ ವೇತನ ಬಡ್ತಿ-  ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ ನಾನು 2007 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದ್ದು ನನ್ನ ಈಗಿನ ಮೂಲ ವೇತನ ರೂ .35150 ಆಗಿದ್ದು ಅಲ್ಪ ಸಂಖ್ಯಾತ ಇಲಾಖೆಯ ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಉರ್ದು ಸಹ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದು ಅದರ ವೇತನ ಶ್ರೇಣಿ ರೂ.33450-62600 ಆಗಿದೆ . ನನಗೆ ಆರ್ಥಿಕ ಮತ್ತು ಸೇವಾ ಸೌಲಭ್ಯ ದೊರಕುತ್ತದೆಯೇ ? ದಿನಾಂಕ : 5-1-2022ಕ್ಕೆ 15 ವರ್ಷದ ಸ್ವಯಂಚಾಲಿತ ವೇತನ ಬಡ್ತಿ ಲಭ್ಯವಾಗುತ್ತದೆಯೇ ? ಆಗ ನನ್ನ ಮೂಲವೇತನ ಎಷ್ಟಾಗುತ್ತದೆ ? - ಐ.ಎ. ಮಸೂತಿ ಬೀದರ್ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252 ( ಬಿ ) ನೀವು ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಯಿಂದ ಕರ್ನಾಟಕ ರಂತೆ ಕರ್ತವ್ಯದಿಂದ ಬಿಡುಗಡೆಗೊಂಡು ಹೊಸ ಹುದ್ದೆಗೆ ಹಾಜರಾಗಬೇಕು . ಆಗ ರಜೆ , ವೇತನ ರಕ್ಷಣೆ , ಸೇವಾವಧಿ ಪರಿಗಣನೆಯಾಗುತ್ತದೆ . ನೀವು ಹೊಸ ಹುದ್ದೆಗೆ ಕರ್ತವ್ಯಕ್ಕೆ ಹಾಜರಾದ ಮೇಲೆ ಹಳೆಯ ಹುದ್ದೆಯ ವೇತನ ಶ್ರೇಣಿ ಯಲ್ಲಿ 05-01-2022ರ ವರೆಗೆ ಮುಂದುವರಿದು , 15 ವರ್ಷದ ಕಾಲಮಿತಿ ಬಡ್ತಿಯನ್ನು ಪಡೆಯಬೇಕು . ನಂತರ ನಿಯಮ 42 - ಬಿ ( 4 ) ಹಾಗೂ ನಿಯಮ 41 - ಐ ಪ್ರಕಾರ ವೇತನ ನಿಗದಿಕರಣಗೊಳಿಸಬೇಕು . ಆಗ ನಿಮ್ಮ ಮೂಲವೇತನ ರೂ .36950 ಆಗುತ್ತದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವ...

ಕರ್ತವ್ಯನಿರತ ದಕ್ಷಿಣ ಕನ್ನಡ ಜಿಲ್ಲಾ ಡಯಟ್ ಕಛೇರಿಯ ಮಹಿಳಾ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವ ಬಗ್ಗೆ .

ಕರ್ತವ್ಯನಿರತ ದಕ್ಷಿಣ ಕನ್ನಡ ಜಿಲ್ಲಾ ಡಯಟ್ ಕಛೇರಿಯ ಮಹಿಳಾ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವ ಬಗ್ಗೆ . ವಿಷಯಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ( ಡಯಟ್ ) ಕರ್ತವ್ಯನಿರತ ಲಿಪಿಕ ವೃಂದದ ಮಹಿಳಾ ಸಿಬ್ಬಂದಿಗಳಾದ ನಿರ್ಮಲಾ , ರೀನಾರಾಯ್ ಹಾಗೂ ಗುಣವತಿ ಎಂಬುವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ . ಈ ಹಲ್ಲೆಯಿಂದ ನೌಕರರು ಆತಂಕಕ್ಕೆ ಗುರಿಯಾಗಿದ್ದು , ಮುಕ್ತ ವಾತಾವರಣದಲ್ಲಿ ಸರ್ಕಾರಿ ಕೆಲಸ ನಿರ್ವಹಿಸಲು ಕಷ್ಟಸಾಧ್ಯವಾದ ಪರಿಸ್ಥಿತಿ ಉದ್ಭವಿಸಿರುತ್ತದೆ . ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ರೀತ್ಯ ಕ್ರಮ ಜರುಗಿಸುವ ಮೂಲಕ ಸರ್ಕಾರಿ ನೌಕರರು ಮುಕ್ತ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಲು ಮಾನ್ಯ ಗೃಹ ಸಚಿವರಿಗೆ  ರಾಜ್ಯಾಧ್ಯಕ್ಷರಾದ  ಸಿ.ಎಸ್.ಷಡಾಕ್ಷರಿ ರವರು   ಕೋರಿದರು.

2021-22ನೇ ಸಾಲಿನಲ್ಲಿ ಸರ್ಕಾರಿ ಸೇವೆಗೆ ಸೇರುವ ಎಲ್ಲಾ ಅಧಿಕಾರಿ / ನೌಕರರ ಸೇವಾ ವಹಿಯನ್ನು Electronic Service Register ( ESR ) ನಲ್ಲಿ ಅನುಷ್ಠಾನಗೊಳಿಸುವ ಕುರಿತು .

2021-22ನೇ ಸಾಲಿನಲ್ಲಿ ಸರ್ಕಾರಿ ಸೇವೆಗೆ ಸೇರುವ ಎಲ್ಲಾ ಅಧಿಕಾರಿ / ನೌಕರರ ಸೇವಾ ವಹಿಯನ್ನು Electronic Service Register ( ESR ) ನಲ್ಲಿ ಅನುಷ್ಠಾನಗೊಳಿಸುವ ಕುರಿತು . ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಗಳಲ್ಲಿ , ಹೆಚ್.ಆರ್.ಎಂ.ಎಸ್ 2.0 ಯೋಜನೆಯ ಭಾಗವಾಗಿರುವ Electronic Services Register ( ESR ) Application ನಲ್ಲಿ 2021-22ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ / ನೌಕರರ ಸೇವಾ ವಹಿಯನ್ನು " ವಿದ್ಯುನ್ಮಾನ ಸೇವಾ ವಹಿ ” ( ESR ) ನಲ್ಲಿಯೇ ಅನುಷ್ಠಾನಗೊಳಿಸುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ . ಅದರಂತೆ ಪರಿಶೀಲಿಸಿ , ಈ ಕೆಳಕಂಡ ಆದೇಶವನ್ನು ಹೊರಡಿಸಿದೆ . ಸರ್ಕಾರಿ ಆದೇಶ ಸಂಖ್ಯೆ : ಆಇ 3 ಸನತಿ 2021 ಬೆಂಗಳೂರು , ದಿನಾಂಕ : 18/09/2021 2021-22ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲ ಅಧಿಕಾರಿ / ನೌಕರರುಗಳ ಸೇವಾ ವಹಿಯನ್ನು " ವಿದ್ಯುನ್ಮಾನ ಸೇವಾ ವಹಿ " ( Electronic Service Register ( ESR ) ನಲ್ಲಿಯೇ ಅನುಷ್ಠಾನಗೊಳಿಸತಕ್ಕದ್ದು , ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಗಳು ಸೂಕ್ತ ಕ್ರಮವನ್ನು ಕೈಗೊಳ್ಳತಕ್ಕದ್ದು . ಈ ಕುರಿತು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಿಗೆ ಪ್ರತ್ಯೇಕವಾಗಿ ಸೂಕ್ತ ತಿದ್ದುಪಡಿ ತರಲಾಗುವುದು . ಎಂದು ಆದೇಶೀಸಲಾಗಿ...

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers