ಪ್ರಾಥಮಿಕ ಶಾಲಾ ಶಿಕ್ಷಕರ ಸಭೆ-ಸಿ.ಎಸ್.ಷಡಾಕ್ಷರಿ
ಪ್ರಾಥಮಿಕ ಶಾಲಾ ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಇಂದು ನಡೆದ ಸಭೆಯಲ್ಲಿ ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಗಮನಕ್ಕೆ ತಂದು ಇಲಾಖಾ ಹಂತದಲ್ಲಿ ಇತ್ಯರ್ಥಪಡಿಸುವಂತೆ ಮನವಿ ಮಾಡಿದರು.
1. 300ಕ್ಕೂ ಹೆಚ್ಚು ಮಕ್ಕಳಿರುವ
ಮಾದರಿ ಪ್ರಾಥಮಿಕ ಶಾಲೆಗಳಿಗೆ ಗ್ರೂಪ್
‘ಡಿ’ ನೌಕರರನ್ನು ನೇಮಕಗೊಳಿಸುವುದು.
2. ಮುಖ್ಯ ಶಿಕ್ಷಕರಿಗೆ 30 ದಿನಗಳ
ಗಳಿಕೆ ರಜೆ ಮಂಜೂರು ಮಾಡುವುದು.
3. ಸಿ.ಆರ್.ಪಿ. ಹುದ್ದೆಗಳನ್ನು ಮೂರು
ವರ್ಷಕ್ಕೊಮ್ಮೆ ಪುನರ್ ನಿಯೋಜಿಸುವುದು.
4. ಒಮ್ಮೆ ಸಿ.ಆರ್.ಪಿ. ಆಗಿ ಸೇವೆ
ಸಲ್ಲಿಸಿದವರು ಮತ್ತೊಮ್ಮೆ ಅವಕಾಶ ನೀಡಬಾರದು.
5. ಸಿ.ಆರ್.ಪಿ/ಬಿ.ಆರ್.ಪಿ. ಹುದ್ದೆಗಳ
ಕಾರ್ಯಭಾರವನ್ನು ಡಯಟ್ ವ್ಯಾಪ್ತಿಗೆ ತರುವುದು.
6. ಹಿರಿಯ ಪ್ರಾಥಮಿಕ ಶಾಲೆಗಳ
ಟಿ.ಜಿ.ಟಿ.
ಶಿಕ್ಷಕರನ್ನು ಪ್ರೌಢ ಶಾಲೆಗಳಿಗೆ ವರ್ಗಾಯಿಸುವುದು.
7. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ
ಬಡ್ತಿ ಪಡೆದ ಶಿಕ್ಷಕರಿಗೆ ಸೇವಾ
ಜೇಷ್ಠತೆಯನ್ನು ಪರಿಗಣಿಸಿ 10,15,20,25, ಮತ್ತು 30 ವರ್ಷಗಳ ಕಾಲಮಿತಿ
ಬಡ್ತಿ ಮಂಜೂರು ಮಾಡುವುದು.
8. ವರ್ಷಕ್ಕೆರಡು ಬಾರಿ ಬಡ್ತಿ ಪ್ರಕ್ರಿಯೆಯನ್ನು
ತಪ್ಪದೇ ನಡೆಸುವುದು.
9. ಎಸ್.ಎಸ್.ಎ.
ಶಿಕ್ಷಕರ ಅನುದಾನವನ್ನು ಸಾಮಾನ್ಯ ಶಿಕ್ಷಕರ ರೀತಿಯಲ್ಲಿ
ಮರು ಸಂಯೋಜಿಸುವುದು.
10. ಪದವಿ ಪಡೆದ ಶಿಕ್ಷಕರನ್ನು
ಪೂರ್ವ ಪರೀಕ್ಷೆಗೊಳಪಡಿಸಿದೆ, ಮಾಧ್ಯಮಿಕ ಶಾಲೆಗೆ (6-8ನೇ
ತರಗತಿ) ಸೇವಾ
ವಿಲೀನಗೊಳಿಸುವುದು.
11. ಶಿಕ್ಷಕರನ್ನು ಮತದಾರರ ಬಿ.ಎಲ್.ಓ. ಕಾರ್ಯದಿಂದ
ವಿಮುಕ್ತಗೊಳಿಸಿ ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ
ಪಾಲ್ಗೊಳ್ಳಲು ಅನುಮಾಡಿಕೊಡುವುದು.
12. ಶಾಲಾ ರಜಾ ಅವಧಿಯಲ್ಲಿ
ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಗಳಿಕೆ ರಜೆ ಸೌಲಭ್ಯವನ್ನು
ಕಲ್ಪಿಸುವುದು.
13. ಕಳೆದ ಸಾಲಿನ ಹೆಚ್ಚುವರಿ/ಕಡ್ಡಾಯ ವರ್ಗಾವಣೆಯಿಂದ ಭಾದಿತ
ಶಿಕ್ಷಕರಿಗೆ ಈ ಬಾರಿ
ಕೌನ್ಸಿಲಿಂಗ್ನಲ್ಲಿ ಪ್ರಥಮ ಆದ್ಯತೆ
ನೀಡುವುದು.
14. ಪ್ರಾಥಮಿಕ ಶಾಲೆಗಳ ಹಿಂದಿ
ಶಿಕ್ಷಕರ ಖಾಲಿ ಹುದ್ದೆಗಳನ್ನು ಹಿಂದಿ
ಶಿಕ್ಷಕರಿಗೇ ಕಾಯ್ದಿರಿಸಿ, ವರ್ಗಾವಣೆ ಕೌನ್ಸಿಲಿಂಗ್ನಲ್ಲಿ
ವರ್ಗಾವಣೆಗೆ ಅವಕಾಶ ಕಲ್ಪಿಸುವುದು.
15. ಗ್ರಾಮೀಣ ಕೃಪಾಂಕ ನೌಕರರ
ಬೇಡಿಕೆಯನ್ನು ನ್ಯಾಯಯುತವಾಗಿ ಪರಿಗಣಿಸುವುದು.
16. ಸರ್ಕಾರದ ಆದೇಶದಂತೆ 60 ಮಕ್ಕಳಿರುವ ರಾಜ್ಯದ
ಎಲ್ಲಾ ಸರ್ಕಾರಿ ಕಿರಿಯ ಪ್ರಾಥಮಿಕ
ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗೆ
ಉನ್ನತೀಕರಿಸಿ ಮುಖ್ಯ ಶಿಕ್ಷರನ್ನು ನೇಮಕಗೊಳಿಸುವುದು.
17. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ
60 ಮಕ್ಕಳಿಗೆ ಒಬ್ಬ ಮುಖ್ಯ ಶಿಕ್ಷಕರಿದ್ದು,
ಪದವಿಧರೇತರ ಮುಖ್ಯ ಶಿಕ್ಷಕರಿಗೆ 120 ಮಕ್ಕಳಿಗೆ
ನಿಗದಿಪಡಿಸುವುದು.
18. ಹಿರಿಯ ಮುಖ್ಯ ಶಿಕ್ಷಕರಿಗೆ
ಜೇಷ್ಠತೆಯ ಆಧಾರದ ಮೇಲೆ ಶಿಕ್ಷಣ
ಸಂಯೋಜಕರ ಹುದ್ದೆಗೆ ಪರಿಗಣಿಸುವುದು.
19. ಇತರೆ ವಿಷಯಗಳು:-
- ಪ್ರಾಥಮಿಕ ಶಾಲಾ ಶಿಕ್ಷಕರ
ದಿನಾಚರಣೆಗೆ ತಾಲ್ಲೂಕು/ ಜಿಲ್ಲಾ ಹಂತಕ್ಕೆ
ಹಾಲಿ ಇರುವ ಸಹಾಯ ಧನವನ್ನು
ಹೆಚ್ಚಿಸುವುದು.
- ವಲಯ/ ತಾಲ್ಲೂಕು / ಜಿಲ್ಲಾ
ಮಟ್ಟದ ಕ್ರೀಡಾಕೂಟದ ಅನುದಾನವನ್ನು ಹೆಚ್ಚಿಸುವುದು.
- ತಾಲ್ಲೂಕು ಮತ್ತು ಜಿಲ್ಲಾ
ಮಟ್ಟದಲ್ಲಿ ಗುರುಭವನ ನಿರ್ಮಾಣ ಹಾಗೂ
ನವೀಕರಣ ಆಗಬೇಕಿದೆ.
- ಟಿ.ಬಿ.ಎಫ್ನಿಂದ ನೀಡುವ
ಪ್ರೋತ್ಸಾಹ ಧನವನ್ನು ರೂ.5000/-ಕ್ಕೆ
ಹೆಚ್ಚಿಸುವುದು.
- ಶಿಕ್ಷಕರು / ನೌಕರರುಗಳು ಮೃತರಾದ ಸಂದರ್ಭದಲ್ಲಿ
ನೀಡುವ ಅಂತ್ಯ ಸಂಸ್ಕಾರ ಸಹಾಯಧನವನ್ನು
ಮೃತರ ಅಂತ್ಯಕ್ರಿಯೆಯ ದಿನದಂದೇ ಮೃತರ ಕುಟುಂಬಕ್ಕೆ
ಇಲಾಖೆಯ ಅಧಿಕಾರಿಗಳಿಂದಲೇ ನೀಡಲು ಆದೇಶ ನೀಡುವುದು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ಹಾಗೂ ಕೇಂದ್ರ ಸಂಘದ ಪಧಾಧಿಕಾರಿಗಳು ಮತ್ತು ವೃಂದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳೂ ಭಾಗವಹಿಸಿ ಮೇಲ್ಕಂಡ ಬೇಡಿಕೆಗಳ ಬಗ್ಗೆ ಮಾನ್ಯ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.
Comments
Post a Comment