2021 ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಪಡಿಸಿರುವ ಆದೇಶವನ್ನು ಪುನರ್ ಪರಿಶೀಲಿಸಿ ಗಳಿಕೆ ರಜೆ ನಗದೀಕರಣ ಅವಕಾಶವನ್ನು ಕಲ್ಪಿಸುವ ಬಗ್ಗೆ
2021 ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಪಡಿಸಿರುವ ಆದೇಶವನ್ನು ಪುನರ್ ಪರಿಶೀಲಿಸಿ ಗಳಿಕೆ ರಜೆ ನಗದೀಕರಣ ಅವಕಾಶವನ್ನು ಕಲ್ಪಿಸುವ ಬಗ್ಗೆ.

2021 ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಪಡಿಸಿರುವ ಆದೇಶವನ್ನು ಪುನರ್ ಪರಿಶೀಲಿಸಿ ಗಳಿಕೆ ರಜೆ ನಗದೀಕರಣ ಅವಕಾಶವನ್ನು ಕಲ್ಪಿಸುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ನಿಯೋಗವು ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ, ಆರ್ಥಿಕ ಇಲಾಖೆಯರವರನ್ನು ಭೇಟಿ ಮಾಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಸ್ತ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಸಂಸ್ಥೆಯಾಗಿ ನೌಕರರ ಹಿತಾಸಕ್ತಿ ಜೊತೆಗೆ ಸರ್ಕಾರದ ಪ್ರಗತಿಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಗುರುತರ ಜವಾಬ್ದಾರಿಯನ್ನು ಹೊಂದಿದ್ದು , ಪ್ರಸ್ತುತ ರಾಜ್ಯದಲ್ಲಿ ಖಾಲಿಯಿರುವ ಸುಮಾರು 2.25 ಲಕ್ಷ ಹುದ್ದೆಗಳ ಕಾರ್ಯಭಾರದ ಒತ್ತಡವನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ನಿರ್ವಹಿಸುತ್ತಿದ್ದಾರೆ .

ಅಲ್ಲದೇ ಸಂಘವು ಸಾಮಾಜಿಕ ಕಾಳಜಿಯನ್ನು ಸಹಾ ಹೊಂದಿದ್ದು , ಕಳೆದ ಸಾಲಿನಲ್ಲಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಉದ್ಭವಿಸಿದ ಕೋವಿಡ್ -19 ಸಾಂಕ್ರಾಮಿಕ ರೋಗ ನಿಯಂತ್ರಣ ಸಂದರ್ಭದಲ್ಲಿ ಸರ್ಕಾರವು ಎದುರಿಸಿದ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದರ ಜೊತೆಗೆ 02 ಕಂತುಗಳ ತುಟ್ಟಿಭತ್ಯೆ ಹಾಗೂ 2020 ನೇ ಸಾಲಿನ ಗಳಿಕೆ ರಜೆ ನಗದೀಕರಣ ಬಾಬ್ತು ನ್ನು ಸಹಾ ಬಿಟ್ಟುಕೊಟ್ಟಿರುತ್ತಾರೆ . ಪ್ರಸ್ತುತ ರಾಜ್ಯದಲ್ಲಿ ಕೋವಿಡ್ -19 ಸಾಂಕ್ರಮಿಕ ರೋಗ ನಿಯಂತ್ರಣಕ್ಕೆ ಬರುತ್ತಿದ್ದು , ಸರ್ಕಾರವು ಸಹ ಆರ್ಥಿಕವಾಗಿ ಸದೃಡತೆ ಕಡೆಗೆ ಸಾಗುತ್ತಿದ್ದು , ಇಂತಹ ಸಂದರ್ಭದಲ್ಲಿ ಸರ್ಕಾರವು ಆದೇಶ ಸಂಖ್ಯೆ : ಆಇ 7 ( ಇ ) ಸೇನಿಸೇ 2020 ದಿನಾಂಕ : 04-01-2021 ಆದೇಶದನ್ವಯ ರಾಜ್ಯ ಸರ್ಕಾರಿ ನೌಕರರ 2021 ನೇ ಸಾಲಿನ ಅವಧಿಯ ಗಳಿಕೆ ರಜೆಯನ್ನು ಅದ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಪಡಿಸಿರುವುದು ರಾಜ್ಯ ಸರ್ಕಾರಿ ನೌಕರರಲ್ಲಿ ತೀವ್ರ ಅಸಮಾಧಾನವನ್ನು ಮೂಡಿಸಿರುತ್ತದೆ . ಅಲ್ಲದೆ ಪ್ರಸ್ತುತ ರಾಜ್ಯದ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರದ ಮುಂದೆ ಮಂಡಿಸಿರುವ ಪ್ರಮುಖ ಬೇಡಿಕೆಗಳಾದ ಎನ್.ಪಿ.ಎಸ್ . ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು , ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ , ಭತ್ಯೆ ನೀಡುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಬಗ್ಗೆ ಸಂಘವು ಸೌಮ್ಯ ನಿಲುವನ್ನು ತಳೆದಿರುವುದನ್ನು ತಾವು ಮನಗಂಡಿರುತ್ತೀರಿ .

ವಾಸ್ತವವಾಗಿ ಕೇಂದ್ರ ಸರ್ಕಾರಿ ನೌಕರರು ಹಾಗೂ ನರ - ಹೊರ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳಿಗೆ ತುಲನೆ ಮಾಡಿದಲ್ಲಿ ರಾಜ್ಯ ಸರ್ಕಾರಿ ನೌಕರರು ಅಘಾದವಾದ ಅಂತರದಿಂದ ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುವುದನ್ನು ತಮ್ಮ ಆದ್ಯ ಗಮನಕ್ಕೆ ಬರಬಯಸುತ್ತೇವೆ . ಅಲ್ಲದೆ , ರಾಜ್ಯ ಸರ್ಕಾರಿ ನೌಕರರು ಅದರಲ್ಲೂ ' ಸಿ ' ಮತ್ತು ' ಡಿ ' ದರ್ಜೆ ನೌಕರರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಹಿನ್ನಲೆಯಲ್ಲಿ ಶಾಲಾ - ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಗಳಿಕೆ ರಜೆ ನಗದೀಕರಣವನ್ನೇ ಅವಲಂಬಿಸಿರುವುದರ ಜೊತೆಗೆ ಕೋವಿಡ್ -19 ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಸನ್ನಿವೇಶದಲ್ಲಿ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಪಡಿಸಿರುವುದು ರಾಜ್ಯ ಸರ್ಕಾರಿ ನೌಕರರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಪಡಿಸಿದಂತಾಗಿರುತ್ತದೆ .

ಅಲ್ಲದೆ ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಣಕ್ಕೆ ಬಂದಿದ್ದು , ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತಿರುವುದರಿಂದ ಪ್ರಸ್ತುತ ಸರ್ಕಾರವು ಉಲ್ಲೇಖಿತ ಆದೇಶದನ್ವಯ ರಾಜ್ಯ ಸರ್ಕಾರಿ ನೌಕರರ 2021 ನೇ ಸಾಲಿನ ಅವಧಿಯ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಪಡಿಸಿರುವ ಆದೇಶವನ್ನು ಪುನರ್ ಪರಿಶೀಲಿಸಿ ಎಲ್ಲಾ ವೃಂದದ ನೌಕರರಿಗೆ 2021 ನೇ ಸಾಲಿನ ಅವಧಿಯ ಗಳಿಕೆ ರಜೆಯನ್ನು ಆದ್ಯರ್ಪಿಸಿ ನಗದೀಕರಣ ಪಡೆಯುವ ಅವಕಾಶವನ್ನು ಕಲ್ಪಿಸಿ ಮಾರ್ಪಾಡು ಆದೇಶ ಹೊರಡಿಸಲು ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ ಇವರಿಗೆ ಮನವಿ ಸಲ್ಲಿಸಲಾಯಿತು.
x
Comments
Post a Comment