ಸರ್ಕಾರಿ ನೌಕರರ ನಿವೃತ್ತಿಗೆ 33 ವರ್ಷಗಳ ಸೇವೆ ಅಥವಾ 60 ವರ್ಷ ವಯಸ್ಸು ಪರಿಗಣನೆ ಬಗ್ಗೆ ಸ್ಪಷ್ಟಿಕರಣ. - ಶ್ರೀ ಸಿ.ಎಸ್.ಷಡಾಕ್ಷರಿ.
ಸರ್ಕಾರಿ ನೌಕರರ ನಿವೃತ್ತಿಗೆ 33 ವರ್ಷಗಳ ಸೇವೆ ಅಥವಾ 60 ವರ್ಷ ವಯಸ್ಸು ಪರಿಗಣನೆ ಬಗ್ಗೆ ಸ್ಪಷ್ಟಿಕರಣ.
ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ 33 ವರ್ಷಗಳ ಸೇವೆ ಅಥವಾ 60 ವರ್ಷ ವಯಸ್ಸು ಯಾವುದು ಮೊದಲೋ ಅದನ್ನು ಪರಿಗಣಿಸಿ , ಸೇವಾ ನಿವೃತ್ತಿಗೊಳಿಸುವ ಬಗ್ಗೆ ನೌಕರರಲ್ಲಿ ಉಹಾಪೋಹಗಳು ಹಬ್ಬಿ ನೌಕರರು ಗೊಂದಲಕ್ಕೀಡಾಗಿರುವುದನ್ನು ಸಂಘವು ಗಮನಿಸಿರುತ್ತದೆ . ವಾಸ್ತವವಾಗಿ ಇಂತಹ ಯಾವುದೇ ಪ್ರಸ್ತಾವನೆಗಳು ಸರ್ಕಾರ ಅಥವಾ ಸಂಘದ ಮುಂದೆ ಇರುವುದಿಲ್ಲ . ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರ ಹಕ್ಕು ಬಾಧ್ಯತೆಗಳ ರಕ್ಷಣೆಯಲ್ಲಿ ಬದ್ಧತೆಯನ್ನು ಹೊಂದಿದ್ದು , ನೌಕರರ ನಿವೃತ್ತಿ ವಯಸ್ಸಿನ ಬಗ್ಗೆ ಉಂಟಾಗಿರುವ ಉಹಾಪೋಹಗಳಿಗೆ ನೌಕರರು ಕಿವಿಗೊಡಬಾರದಾಗಿ ಸಂಘವು ಮನವಿ ಮಾಡುತ್ತದೆ .- ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು ಎಂದು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
Comments
Post a Comment