ಏಪ್ರಿಲ್ 21 ರಂದು" ರಾಜ್ಯ ಸರ್ಕಾರಿ ನೌಕರರ ದಿನಾಚರಣೆ" ಸರ್ಕಾರದಿಂದ ಆದೇಶ.- ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,
ಸರ್ಕಾರ ಪ್ರತಿ ವರ್ಷ ಏಪ್ರಿಲ್ 21 ರಂದು ನಾಗರೀಕ ಸೇವಾ ದಿನ " ವನ್ನು " ರಾಜ್ಯ ಸರ್ಕಾರಿ ನೌಕರರ ದಿನಾಚರಣೆ " ಯನ್ನಾಗಿ ಆಚರಿಸಲು ಹಾಗೂ ಈಗಾಗಲೇ ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಪ್ರತಿ ವರ್ಷ “ ಗಣರಾಜ್ಯೋತ್ಸವ ದಿನ " ದಂದು ನೀಡುತ್ತಿರುವ , " ಸರ್ವೋತ್ತಮ ಸೇವಾ ಪ್ರಶಸ್ತಿ ” ಯನ್ನು ಏಪ್ರಿಲ್ 21 ರ " ರಾಜ್ಯ ಸರ್ಕಾರಿ ನೌಕರರ ದಿನಾಚರಣೆ " ಯಂದು ನಿಗಧಿತ ಶಿಷ್ಟಾಚಾರವನ್ನು ಅನುಸರಿಸಿ ಪ್ರದಾನ ಮಾಡಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ .
ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರತೀ ವರ್ಷ “ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ” ಆಚರಿಸಲು ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಹಾತ್ವಾಕಾಂಕ್ಷೆಯ ಬೇಡಿಕೆಯಾದ ಪ್ರತೀ ವರ್ಷ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನು ಆಚರಿಸುವ ಬೇಡಿಕೆಗೆ ಮಾನ್ಯ ಮುಖ್ಯಮಂತ್ರಿಗಳು ಸ್ಪಂದಿಸಿ , ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲೂ ಸಹ ಪ್ರತೀ ವರ್ಷ ಏಪ್ರಿಲ್ -21 ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನು ರಾಜ್ಯ ಮತ್ತು ಜಿಲ್ಲಾ ಹಂತದಲ್ಲಿ ಆಚರಿಸಲು ಇಂದು ಆದೇಶ ಹೊರಡಿಸಿದೆ . ದಿನಾಚರಣೆ ದಿನದಂದು ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯ ಸರ್ಕಾರಿ ನೌಕರರಿಗೆ ' ಸರ್ವೋತ್ತಮ ಸೇವಾ ಪ್ರಶಸ್ತಿ ' ಗಳನ್ನು ರಾಜ್ಯ ಹಾಗೂ ಜಿಲ್ಲಾ ಹಂತಗಳಲ್ಲಿ ನೀಡಲು ಮಾನ್ಯ ಮುಖ್ಯಮಂತ್ರಿಗಳು ಸೂಚನೆ ನೀಡಿ ಆದೇಶ ಹೊರಡಿಸಿರುತ್ತಾರೆ .
ರಾಜ್ಯದ ಸಮಸ್ತ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳ ಬಹಳ ವರ್ಷದ ಬೇಡಿಕೆಗೆ ಸ್ಪಂದಿಸಿ ಆದೇಶ ಹೊರಡಿಸಿರುವ ಸನ್ಮಾನ್ಯ ಮುಖ್ಯಮಂತ್ರಿಗಳು , ಸಚಿವ ಸಂಪುಟದ ಎಲ್ಲಾ ಸಚಿವರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಸಂಘವು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತದೆ . ವಂದನೆಗಳೊಂದಿಗೆ , ತಮ್ಮ ವಿಶ್ವಾಸಿ , ( ಸಿ.ಎಸ್.ಷಡಾಕ್ಷರಿ ) ರಾಜ್ಯಾಧ್ಯಕ್ಷರು
ರಾಜ್ಯ ಸರ್ಕಾರದ ವತಿಯಿಂದ " ನಾಗರಿಕ ಸೇವಾ ದಿನ " ವನ್ನು " ರಾಜ್ಯ ಸರ್ಕಾರಿ ನೌಕರರ ದಿನ " ವನ್ನಾಗಿ ಆಚರಿಸುವ ಬಗ್ಗೆ .
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮನವಿಯನ್ನು ಸಲ್ಲಿಸಿ , ಕರ್ನಾಟಕ ಸರ್ಕಾರವು ರಾಜ್ಯದ ನಾಡು , ನುಡಿ , ನೆಲ , ಜಲ , ಸಂಸ್ಕೃತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನೀಡುವ ಕೊಡುಗೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ , ಗಣ್ಯರ ನೆನಪಿಗಾಗಿ ದಿನಾಚರಣೆ ಹಾಗೂ ಜಯಂತಿಗಳನ್ನು ಆಚರಿಸುತ್ತಾ ಬಂದಿದೆ . ಅದೇ ರೀತಿ ಕಾರ್ಯಾಂಗದ ಆಧಾರ ಸ್ತಂಭವಾಗಿರುವ ರಾಜ್ಯ ಸರ್ಕಾರಿ ನೌಕರರನ್ನು ಪ್ರೋತ್ಸಾಹಿಸುವ ಹಾಗೂ ಕರ್ತವ್ಯದಲ್ಲಿ ಒತ್ತಡ ನಿವಾರಿಸಿ , ಕ್ರಿಯಾಶೀಲತೆ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಆಚರಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರ ದಿನಾಚರಣೆ ಯಂತೆಯೇ ರಾಜ್ಯದಲ್ಲೂ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನು ಪ್ರತಿ ವರ್ಷ ನಿಗಧಿತ ದಿನಾಂಕದಂದು ಆಚರಿಸುವಂತೆ ಮತ್ತು ಆ ದಿನದಂದು ಅಪ್ರತಿಮ ಸಾಧನೆಗೈದ ರಾಜ್ಯ ಸರ್ಕಾರಿ ನೌಕರರಿಗೆ ಈಗಾಗಲೇ ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ದಿನ " ದಂದು ನೀಡುತ್ತಿರುವ " ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಂದು ಪ್ರಧಾನ ಮಾಡುವಂತೆ ಮನವಿ ಸಲ್ಲಿಸಿರುತ್ತಾರೆ . ಕೇಂದ್ರ ಸರ್ಕಾರವು ಭಾರತೀಯ ಆಡಳಿತ ಸೇವೆಗೆ ಸೇರಿದವರನ್ನು ಅಂದಿನ ಕೇಂದ್ರದ ಪ್ರಥಮ ಗೃಹ ಸಚಿವರಾದ ಸರ್ದಾರ್ ವಲ್ಲಭ ಭಾಯ್ ಪಾಟೀಲ್ ರವರು 1947 ರ ಏಪ್ರಿಲ್ 21 ರಂದು ಆಡಳಿತ ಸೇವೆಗೆ ಸೇರಿದ ಪ್ರೊಬೆಷನರ್ ಅಧಿಕಾರಿಗಳನ್ನುದ್ದೇಶಿಸಿ ಭಾಷಣ ಮಾಡಿದ ದಿನವನ್ನು ಕೇಂದ್ರ ಸರ್ಕಾರವು “ ಸಿವಿಲ್ ಸರ್ವೀಸ್ ಡೇ ಯನ್ನಾಗಿ ಆಚರಣೆ ಮಾಡಲಾಗುತ್ತಿದೆ . ಈ ಬಗ್ಗೆ ಪರಿಶೀಲಿಸಲಾಗಿ , ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯು ರಾಜ್ಯ ಸರ್ಕಾರದ ಕಾರ್ಯಾಂಗದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳೂ ಸೇರಿದಂತೆ ರಾಜ್ಯ ಮಟ್ಟದ / ಜಿಲ್ಲಾ ಮಟ್ಟದ / ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿ / ನೌಕರರನ್ನು ಒಳಗೊಂಡು ದಿನಾಚರಣೆಯನ್ನು ಆಚರಿಸಲು ಉದ್ದೇಶಿಸಲಾಗಿದೆ . ಆದ್ದರಿಂದ ಕೇಂದ್ರ ಸರ್ಕಾರದ ಮಾದರಿಯನ್ನಯ ರಾಜ್ಯದಲ್ಲಿ " ನಾಗರಿಕ ಸೇವಾ ದಿನ " ವನ್ನು ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ” ಯನ್ನಾಗಿ ಪ್ರತಿ ವರ್ಷ ಏಪ್ರಿಲ್ 21 ರಂದು ನಿಗಧಿ ಪಡಿಸಿ ವಿವಿಧ ಕಾರ್ಯಕ್ರಮಗಳ ಮೂಲಕ ದಿನಾಚರಣೆಯನ್ನು ಆಚರಿಸಿ , ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಈಗಾಗಲೇ ಪ್ರತಿ ವರ್ಷ ವಿವಿಧ ಹಂತಗಳಲ್ಲಿ ಜನವರಿ 26 ಗಣರಾಜ್ಯೋತ್ಸವ ದಿನ " ದಂದು ನೀಡುತ್ತಿರುವ “ ಸರ್ವೋತ್ತಮ ಸೇವಾ ಪ್ರಶಸ್ತಿ " ಯನ್ನು " ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಂದು ನೀಡುವುದರ ಮೂಲಕ ಅವಿಸ್ಮರಣೀಯ ಗೊಳಿಸಲು ತೀರ್ಮಾನಿಸಿದೆ .ಮೇಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ , ಸನ್ಮಾನ್ಯ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ರೀತಿಯಲ್ಲಿ ರಾಜ್ಯದಲ್ಲೂ ಸಹ ಪ್ರತಿ ವರ್ಷ ಏಪ್ರಿಲ್ 21 ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನು ರಾಜ್ಯ ಮತ್ತು ಜಿಲ್ಲಾ ಹಂತದಲ್ಲಿ ಆಚರಿಸಲು ಒಪ್ಪಿರುತ್ತಾರೆ ಹಾಗೂ ಅಂದಿನ ದಿನ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯ ಸರ್ಕಾರಿ ನೌಕರರಿಗೆ ಪ್ರಧಾನ ಮಾಡುವ “ ಸರ್ವೋತ್ತಮ ಸೇವಾ ಪ್ರಶಸ್ತಿ ' ಯನ್ನು ವಿವಿಧ ಹಂತಗಳಲ್ಲಿ ನೀಡುವ ಮೂಲಕ ಪ್ರೋತ್ಸಾಹಿಸುವಂತೆ ಸೂಚಿಸಿರುತ್ತಾರೆ . ಮೇಲಿನ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಈ ಕೆಳಗಿನಂತೆ ಆದೇಶಿಸಿದೆ . ಸರ್ಕಾರದ ಆದೇಶದ ಸಂಖ್ಯೆ : ಸಿಆಸುಇಅಸು 33 ಈಕಾಅ 2020 , ಬೆಂಗಳೂರು , ದಿನಾಂಕ : 18.01.2021 .

Comments
Post a Comment