1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು KSGEA News Blogಅನ್ನು ಸಂದರ್ಶಿಸಿದ್ದಾರೆ.- ಎಲ್ಲಾ ಬ್ಲಾಗ್ ಓದುಗರಿಗೆ ಧನ್ಯವಾದಗಳು.
ನನ್ನ ಎಲ್ಲಾ ಆತ್ಮೀಯ KSGEA News ಬ್ಲಾಗ್ ಓದುಗರಿಗೆ ಮತ್ತು YouTube ಚಾನಲ್ ವೀಕ್ಷಕರಿಗೂ ನನ್ನ ಅನಂತ ಅನಂತ ಧನ್ಯವಾದಗಳು.
ಈಗಿನ ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನದ ಸಮಯದಲ್ಲಿ ಎಲ್ಲೊ ರಾಜ್ಯ ಸರ್ಕಾರಿ ನೌಕರರಿಗೆ ತಮ್ಮ ಸೇವಾವಧಿಯಲ್ಲಿ ಅಗತ್ಯವಾದ ಹಲವಾರು ಮಾಹಿತಿಗಳನ್ನು ಪಡೆಯಲು ಹಲವು ಸಮಸ್ಯೆಗಳು ಎದುರಿಸುತ್ತಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಕಳೆದ ಕೆಲ ತಿಂಗಳುಗಳ ಹಿಂದೆ ರಾಜ್ಯ ಸರ್ಕಾರಿ ನೌಕರರಿಗೆ ಅಗತ್ಯವಿರುವ ಹಲವಾರು ವಿಷಯಗಳ, ಸೇವಾ ಸೌಲಭ್ಯಗಳ ಕುರಿತಾದ ವಿಷಯಗಳನ್ನು ಮಾಹಿತಿ ತಂತ್ರಜ್ಞಾನದ ಸಹಾಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದೊಂದಿಗೆ KSGEA News Blog, YouTube Channel ಮತ್ತು Facebook Page ಅನ್ನು ಪ್ರಾರಂಭಿಸಲಾಯಿತು.
ಅದರೆ ಇಷ್ಟು ಕಡಿಮೆ ಸಮಯದಲ್ಲಿ ಈ ಮಾಧ್ಯಮದ ಮೂಲಕ ನೀಡಲಾಗುವ ಮಾಹಿತಿಗಳು ಪಡೆದು ತಾವುಗಳು ನೀಡಿದ ಉತ್ತಮ ಪ್ರತಿಕ್ರಿಯೆಗೆ ನನ್ನ ಅನಂತ ಅನಂತ ಧನ್ಯವಾದಗಳು.
ಈಗಾಗಲೇ KSGEA News Blog ಗೆ 1 ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೌಕರರು ಸಂದರ್ಶಿಸಿದ್ದು, YouTube ಚಾನಲ್ ನಲ್ಲಿ 1 ಸಾವಿರಕ್ಕೂ ಹೆಚ್ಚು ಸದಸ್ಯರು Subscribe ಆಗಿ ತಮಗೆ ಬೇಕಾದ ಎಲ್ಲಾ ರೀತಿಯ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ನಿಮ್ಮ ಈ ಉತ್ತಮ ಪ್ರತಿಕ್ರಿಯೆ ಈ ಮಾಧ್ಯಮದ ಮೂಲಕ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಮಾಹಿತಿಗಳನ್ನು ವಿನಿಮಯ ಮಾಡಲು ನಮ್ಮನ್ನು ಪ್ರೋತ್ಸಾಹಿಸುತ್ತದೆ.
ಈ ಒಂದು ಸಣ್ಣ ಪ್ರಯತ್ನಕ್ಕೆ ಮಾರ್ಗದರ್ಶಕರಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿ ಸರ್ ರವರು, ನಮ್ಮಿಂದ ವಿನಿಮಯ ಮಾಡಲಾಗುವ ಪ್ರತಿಯೊಂದು ವಿಷಯದ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡಿದ್ದು, ತಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್.
ಹಾಗೂ ಈ ಪ್ರಗತಿ ಸಾಧಿಸಲು ತೆರೆಮರೆಯಲ್ಲಿ ಹಲವಾರು ನನ್ನ ಆತ್ಮೀಯ ಪ್ರಮುಖರು ವಿಷಯಗಳನ್ನು ತಿಳಿಸಿಕೊಟ್ಟಿದ್ದು ಇಂದು ಈ ಹಂತವನ್ನು ತಲುಪಲು ಸಾಧ್ಯವಾಗಿದೆ.
ತಮಗೆಲ್ಲ ಮತ್ತೊಮ್ಮೆ ನನ್ನ ಧನ್ಯವಾದಗಳು.
- ಸೈಯದ್ ಜ಼ಬಿ. ಲೆಕ್ಕ ಸಹಾಯಕರು, ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು.
Comments
Post a Comment