ಅನುಕಂಪ ಆಧಾರದ ನೇಮಕಾತಿ ಪ್ರಸ್ತಾವನೆಗಳನ್ನು ಶೀಘ್ರವೇ ಪೂರ್ಣಗೊಳಿಸಲು ಸರ್ಕಾರದಿಂದ ಆದೇಶ.- ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,
ಕೋವಿಡ್-19ರಿಂದ ಸ್ಥಗಿತಗೊಂಡಿದ್ದ ಅನುಕಂಪ ಆಧಾರದ ನೇಮಕಾತಿ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ಶೀಘ್ರವೇ ನೇಮಕಾತಿ ನೀಡಲು ಸರ್ಕಾರದಿಂದ ಆದೇಶ.- ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,
ರಾಜ್ಯದಲ್ಲಿ ಕೋವಿಡ್ -19 ನಿಂದ ಉಂಟಾದ ಪರಿಸ್ಮಿತಿಯನ್ನು ನಿಭಾಯಿಸಿ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ , ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್‌ಲಾಗ್ ಹುದ್ದೆಗಳೂ ಸೇರಿದಂತೆ ಎಲ್ಲಾ ನೇರ ನೇಮಕಾತಿ ಹುದ್ದೆ ಗಳನ್ನು ಭರ್ತಿ ಮಾಡುವುದನ್ನು ಸರ್ಕಾರದಿಂದ ತಡೆಹಿಡಿಯಲಾಗಿತ್ತು.
ಅದರೆ ರಾಜ್ಯದ ವಿವಿಧ ಇಲಾಖೆಗಳಿಂದ ಅನುಕಂಪ ಆಧಾರದ ನೇಮಕಾತಿಗಳಿಗೆ ಸಂಬಂಧಿಸಿದಂತೆ ತಡೆಹಿಡಿಯಲಾದ ಅದೇಶವು ಅನ್ವಯವಾಗುವುದೇ ? ಎಂಬ ಬಗ್ಗೆ ಸ್ಪಷ್ಟಿಕರಣ ಕೊರಿ ಹಲವಾರು ಪ್ರಸ್ತಾವನೆಗಳು ಸ್ವೀಕೃತಗೊಂಡಿರುತ್ತವೆ . ಅವುಗಳನ್ನು ಪರಿಶೀಲಿಸಿ ,
" ಅನುಕಂಪ ಆಧಾರದ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ನೇಮಕಾತಿ ಆದೇಶ ನೀಡಲು ಸುತೋಲೆ ಸಂಖ್ಯೆ : ಆಇ 03 ಬಿಇಎಂ 2020 , ದಿನಾಂಕ : 06.07.2020 ರಿಂದ ವಿನಾಯಿತಿ ನೀಡಲು ಕೆಳಕಂಡ ಷರತ್ತಿಗೆ ಒಳಪಟ್ಟು ಸಹಮತಿ ನೀಡಲಾಗಿದೆ .
ಷರತ್ತುಗಳು : 1. ಹುದ್ದೆ ಭರ್ತಿಗೆ ತಗಲುವ ವೆಚ್ಚವನ್ನು 2020-21ನೇ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ ಅನುದಾನದಿಂದಲೇ ಭರಿಸುವುದು .
2. ಈ ಉದ್ದೇಶಕ್ಕಾಗಿ 2020-21ನೇ ಸಾಲಿನ ಆಯವ್ಯಯದಲ್ಲಿ ಹೆಚ್ಚುವರಿ ಒದಗಿಸಲು ಬರುವುದಿಲ್ಲ .
ಎಂದು ಡಾ . ಏಕ್ ರೂಪ್ , ಸರ್ಕಾರದ ಕಾರ್ಯದರ್ಶಿ ( ಆ & ಸಂ ) ಆರ್ಥಿಕ ಇಲಾಖೆರವರು ದಿನಾಂಕ 12.01.2021ರಂದು ಆದೇಶಿರುತ್ತಾರೆ.
ಈ ಆದೇಶ ಹೊರಡಿಸಿ ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಿದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಇದಕ್ಕಾಗಿ ಸಹಕರಿಸಿದ ಎಲ್ಲಾ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು.


Comments
Post a Comment