ಗಳಿಕೆ ರಜೆ ನಗದೀಕರಣ ಸೌಲಭ್ಯದ ಬಗ್ಗೆ ಸರ್ಕಾರದಿಂದ ಆದೇಶ.- ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,
ಗಳಿಕೆ ರಜೆ ನಗದೀಕರಣ ಸೌಲಭ್ಯದ ಬಗ್ಗೆ ಸರ್ಕಾರದಿಂದ ಆದೇಶ.- ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,
ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 118 ( 2 ) ರ ಸೌಲಭ್ಯ ಪಡೆಯುವ ಸಲುವಾಗಿ , ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ( ಆಯಾ ವರ್ಷದ ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ) 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಅಧ್ಯರ್ಪಿಸಿ , ರಜಾ ವೇತನಕ್ಕೆ ಸಮನಾದ ನಗದೀಕರಣ ಪಡೆಯಬಹುದಾದ ಸೌಲಭ್ಯವನ್ನು ದಿ : 01 / 01 / 2013 ರಿಂದ ಜಾರಿಗೊಳಿಸಲಾಗಿದೆ . ಕೋವಿಡ್ -19 ರ ಹಿನ್ನಲೆಯಲ್ಲಿ ಸರ್ಕಾರವು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನಲೆಯಲ್ಲಿ 2021 ನೇ ಸಾಲಿನ ಕ್ಯಾಲೆಂಡರ್ ವರ್ಷ ದಿನಾಂಕ : 01/01/2021 ರಿಂದ ದಿನಾಂಕ : 31/12/2021 ರವರೆಗಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ಮೇಲೆ ಓದಲಾದ ( 2 ) ರ ಆದೇಶದಲ್ಲಿ ರದ್ದುಗೊಳಿಸಿ ಆದೇಶಿಸಿತ್ತು . ಪ್ರಸಕ್ತ ಸರ್ಕಾರವು 2021 ಅವಧಿಯ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಅವಕಾಶವನ್ನು ಪುನರುಜ್ಜಿವನಗೊಳಿಸಲು ಉದ್ದೇಶಿಸಿದ್ದು , ಈ ಹಿನ್ನೆಲೆಯಲ್ಲಿ ದಿ : 04 / 01 / 2021 ರ ಉಲ್ಲೇಖಿತ ( 2 ) ರಲ್ಲಿನ ಸರ್ಕಾರದ ಆದೇಶವನ್ನು ಹಿಂಪಡೆಯಲಾಗಿದೆ ಮತ್ತು ಈ ಕೆಳಕಂಡಂತೆ ಆದೇಶಿಸಿದೆ . ಸರ್ಕಾರಿ ಆದೇಶ ಸಂಖ್ಯೆ : ಆಇ 7 ( ಇ ) ಸೇನಿಸೇ 2020 ಬೆಂಗಳೂರು , ದಿನಾಂಕ : 28.01.2021
ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ 👇
https://drive.google.com/file/d/1eUtgLjauV2dtYgKqY5Ls-FmIJpV-rDdh/view?usp=drivesdk
Comments
Post a Comment