ಅಮಾನತು ನಿಯಮಾವಳಿ ಏನು ?
ನಾನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬೆಂಗಳೂರು ಮಹಾನಗರ ಪಾಲಿಕೆಗೆ ನಿಯೋಜನೆ ಮೇರೆಗೆ ಆರೋಗ್ಯ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ 2019 ರ ಜು .5 ರಿಂದ ಬಿಬಿಎಂಪಿ ಆಯುಕ್ತರು ನನ್ನನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ . ಇದು ನಿಯಮಾವಳಿ ರೀತ್ಯ ಸರಿಯೇ ? ನನ್ನ ಮಾತೃ ಇಲಾಖೆ ಅನುಮತಿ ಬೇಕಿಲ್ಲವೇ ? | ರಾಜೇಶ್ ಬೆಂಗಳೂರು
ಕರ್ನಾಟಕ ಸರ್ಕಾರಿ ಸೇವಾ ( ಸಿಸಿಎ ) ನಿಯಮಾವಳಿಯ ನಿಯಮ 15 ( 2 ) ( ಬಿ ) ( ಜಿಜಿ ) ರ ಮೇರೆಗೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಬಿ , ಸಿ ಮತ್ತು ಡಿ ಗುಂಪಿನ ಸರ್ಕಾರಿ ನೌಕರನನ್ನು ಮಾತೃ ಇಲಾಖೆಯ ಪೂರ್ವಾನುಮೋದನೆ ಇಲ್ಲದೆ ಪಾಲಿಕೆ ಆಯುಕ್ತರು ಅಮಾನತು ಮಾಡಬಹುದು . ಹಾಗಾಗಿ ಪಾಲಿಕೆ ಆಯುಕ್ತರು ಕೈಗೊಂಡ ಕ್ರಮ ನಿಯಮಬದ್ಧವಾಗಿರುತ್ತದೆ . ಹೆಚ್ಚಿನ ವಿವರಗಳಿಗೆ ಎಂ.ಉಮೇಶ್ ಅವರ ' ಸಿಸಿಎ ನಿಯಮಾವಳಿ ಸಮಗ್ರ ಕೈಪಿಡಿ ' ಪುಸ್ತಕ ನೋಡಬಹುದು.



Comments
Post a Comment