ರಜೆ ಅವಧಿಯ ವೇತನ ನಗದೀಕರಣ ಹೇಗೆ?
ಅನಾರೋಗ್ಯ ನಿಮಿತ್ತ ನಾನು ಎರಡು ತಿಂಗಳು ವೈದ್ಯಕೀಯ ರಜೆ ತೆಗೆದುಕೊಂಡು ಮತ್ತೆ ಕೆಲಸಕ್ಕೆ ಹಾಜರಾಗಿದ್ದೇನೆ . ರಜೆ ಅವಧಿಯ ವೇತನವನ್ನು ಕೆಲ ಕಾರಣಗಳಿಂದ ನಗದೀಕರಿಸಿರುವುದಿಲ್ಲ . ನನ್ನ ಸೇವೆ 35 ವರ್ಷ ಮುಗಿದಿದ್ದು , ನಿವೃತ್ತಿಯಾಗಲು 8 ತಿಂಗಳು ಬಾಕಿ ಇದೆ . ಹೀಗಿರುವಾಗ ರಜೆ ಅವಧಿಯ ವೇತನವನ್ನು ನಗದೀಕರಿಸಿದರೆ , ನನ್ನ ಸೇವಾ ಅವಧಿಯಲ್ಲಿ 2 ತಿಂಗಳು ಕಡಿಮೆಯಾಗುತ್ತದೆಯೇ ? | ರಾಮೇಗೌಡ ಮೈಸೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 292 ಜಿ ಮೇರೆಗೆ ನಿವೃತ್ತಿ ಉಪದಾನ ಪಡೆಯಲು ಗರಿಷ್ಠ 33 ವರ್ಷ ಸಾಕೆಂದು ದಿನಾಂಕ 4.5.2019 ರ ಸರ್ಕಾರಿ ಅಧಿಕೃತ ಜ್ಞಾಪನ ಸಂಖ್ಯೆ ಎಫ್‌ಡಿ 2 , ಎಸ್‌ಆರ್‌ಎಸ್ 2019 ರ ಮೇರೆಗೆ ಸೂಚಿಸಲಾಗಿದೆ . ಈಗಾಗಲೆ ನೀವು 35 ವರ್ಷ ಸೇವೆ ಸಲ್ಲಿಸಿರುವುದರಿಂದ ನಿಮ್ಮ ಪಿಂಚಣಿಗೆ 30 ವರ್ಷ ಹಾಗೂ ನಿವೃತ್ತಿ ಉಪದಾನಕ್ಕೆ 33 ವರ್ಷಗಳನ್ನು ಪರಿಗಣಿಸಿ ಅದನ್ನು ನಿಯಮಾನುಸಾರ ಲೆಕ್ಕ ಹಾಕಿಸಿ ನೀಡಲಾಗುವುದು . ಆದರೆ , ನೀವು ಎರಡು ತಿಂಗಳ ಈ ಪಿಂಚಣಿ ಸೌಲಭ್ಯಗಳಿಗೆ ಪರಿಗಣನೆ ಆಗುವುದಿಲ್ಲ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕ ನೋಡಬಹುದು . .
ಲೇಖಕರ ಪುಸ್ತಕ ಹಾಗೂ ಸಿ.ಎಲ್.ಟಿ. ಅಣಕು ಪರೀಕ್ಷೆಗಾಗಿ 9902135813 ಗೆ ವಾಟ್ಸ್ ಆಪ್ ಮಾಡಿ ಹಾಗೂ ಶೇ.15% ರಷ್ಟು ರಿಯಾಯಿತಿ ಪಡೆಯಿರಿ.
Comments
Post a Comment