7 ನೇ ವೇತನ ಆಯೋಗ ಶೀಘ್ರ- ವೇತನ ಪರಿಷ್ಕರಣೆ ಸಂಬಂಧ ಶೇ .90 ಕಾರ್ಯ ಮುಕ್ತಾಯವಾಗಿದೆ . ಉಳಿದ ಕೆಲಸ ಮುಗಿಸಲು ಅಧಿಕಾರಿಗಳ ಸಮಿತಿಯಾದರೆ ಸಾಕು , ಬಜೆಟ್‌ಗೆ ಮುನ್ನ ಸಿಎಂ ಕರೆದಾಗ ಮನವಿ ನೀಡುತ್ತೇವೆ ಖಾಲಿ ಹುದ್ದೆ ಇರುವುದರಿಂದ ಒತ್ತಡದಲ್ಲಿ ನೌಕರರು ಕೆಲಸ ಮಾಡುತ್ತ ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಮಾಡಿದ್ದೇವೆ .- ಸಿ.ಎಸ್ . ಷಡಾಕ್ಷರಿ, ಅಧ್ಯಕ್ಷರು ಸರ್ಕಾರಿ ನೌಕರರ ಸಂಘ.
7 ನೇ ವೇತನ ಆಯೋಗ ಶೀಘ್ರ
ಸಿದ್ಧತೆ ಆರಂಭಿಸಿದ ಸರ್ಕಾರ , ಬಜೆಟ್‌ನಲ್ಲಿ ಹೊರಬೀಳಲಿದೆ ಘೋಷಣೆ.
ವೇತನ ಪರಿಷ್ಕರಣೆ ಸಂಬಂಧ ಶೇ .90 ಕಾರ್ಯ ಮುಕ್ತಾಯವಾಗಿದೆ . ಉಳಿದ ಕೆಲಸ ಮುಗಿಸಲು ಅಧಿಕಾರಿಗಳ ಸಮಿತಿಯಾದರೆ ಸಾಕು , ಬಜೆಟ್‌ಗೆ ಮುನ್ನ ಸಿಎಂ ಕರೆದಾಗ ಮನವಿ ನೀಡುತ್ತೇವೆ ಖಾಲಿ ಹುದ್ದೆ ಇರುವುದರಿಂದ ಒತ್ತಡದಲ್ಲಿ ನೌಕರರು ಕೆಲಸ ಮಾಡುತ್ತ ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಮಾಡಿದ್ದೇವೆ .- ಸಿ.ಎಸ್ . ಷಡಾಕ್ಷರಿ, ಅಧ್ಯಕ್ಷರು ಸರ್ಕಾರಿ ನೌಕರರ ಸಂಘ.
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ 7 ನೇ ವೇತನ ಆಯೋಗ ರಚನೆಯನ್ನು ಬಜೆಟ್‌ನಲ್ಲಿ ಘೋಷಿಸಲು ಸರ್ಕಾರ ಸಿದ್ಧತೆ ನಡೆಸಿರುವಂತೆಯೇ , ನೌಕರರು ಕೇಂದ್ರ ಮಾದರಿ ವೇತನ ಸಿಗುವುದೇ ? ಇಲ್ಲವೇ ಎಂಬ ಆತಂಕದಲ್ಲಿದ್ದಾರೆ . ರಾಜ್ಯದಲ್ಲಿ 7 ನೇ ವೇತನ ಆಯೋಗ 2022 ರ ಜುಲೈನಿಂದ ಜಾರಿಗೆ ಬರಬೇಕಾಗಿದೆ . ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಬೇಡಿಕೆಯಾದ ಕೇಂದ್ರದ ಮಾದರಿ ವೇತನಕ್ಕಾಗಿ ನೌಕರರು ಒತ್ತಡ ತರುತ್ತಿದ್ದಾರೆ . ಆದರೆ ಆ ವೇತನ ಸಿಕ್ಕುವುದೇ ಅಥವಾ ಸರ್ಕಾರ ಆಯೋಗದ ಮೂಲಕ ಮೂಗಿಗೆ ತುಪ್ಪ ಸವರುವುದೇ ಎಂಬುದು ನೌಕರರ ಪ್ರಶ್ನೆ ಯಾವ ಸಮಿತಿ ?: ನೌಕರರ ವೇತನ ಪರಿಷ್ಕರಣೆಗೆ ಹೆಚ್ಚಿನ ಸಮಸ್ಯೆ ಇಲ್ಲ ಆದ್ದರಿಂದ ಅಧಿಕಾರಿಗಳ ಸಮಿತಿ ರಚನೆಯಾಗಲಿ ಎಂಬುದು ರಾಜ್ಯ ಸರ್ಕಾರಿ ನೌಕರರ ಸಂಘದ ಒತ್ತಡವಾಗಿದೆ ಆದರೆ ಸಚಿವಾಲಯ ನೌಕರರು ಹಾಗೂ ಇತರ ನೌಕರರ ಸಂಘಟನೆಗಳು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯೇ ಆಗಬೇಕು , ಇಲ್ಲದಿದ್ದರೆ ತಿಪ್ಪೆ ಸಾರಿಸುವ ಕೆಲಸವಾಗುತ್ತದೆಯೇ ಹೊರತು ನ್ಯಾಯ ಸಿಗುವುದಿಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿವೆ . ಆಯೋಗ ರಚನೆಯಾಗಿಲ್ಲ : ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 1966 ರಿಂದ 2017 ರ ಅವಧಿ ಯಲ್ಲಿ 11 ವೇತನ ಆಯೋಗ ರಚನೆಯಾಗಬೇಕಾಗಿತ್ತು . ಆದರೆ ರಚನೆಯಾಗಿರುವುದು 6 ಮಾತ್ರ , 3 ಅಧಿಕಾರಿ ಸಮಿತಿ ಹಾಗೂ ಒಂದು ಸಂಪುಟ ಉಪ ಸಮಿತಿ ರಚನೆಯಾಗಿದೆ , ಇದರಿಂದಾಗಿಯೇ ಅನ್ಯಾಯವಾಗಿದೆ . ವೇತನ ಪರಿಷ್ಕರಣೆ ವೈಜ್ಞಾನಿಕವಾಗಿ ಆಗದೆ ಅವೈಜ್ಞಾನಿಕವಾಗಿದೆ ಎಂದು ನೌಕರರು ಹೇಳುತ್ತಾರೆ . ಗ್ರೇಡ್ ಪೇ ಸಮಸ್ಯೆ : ಕೇಂದ್ರ ಸರ್ಕಾರ ತನ್ನ ನೌಕರರಿಗೆ ನೀಡುವ ಗ್ರೇಡ್ ಪೇಯನ್ನು ರಾಜ್ಯದಲ್ಲಿಯೂ ನೀಡಿದರಷ್ಟೇ ವ್ಯತ್ಯಾಸ ಇರುವುದಿಲ್ಲ .
Comments
Post a Comment