ವೇತನ ರಕ್ಷಣೆ ಪಡೆಯುವ ನಿಯಮ
ಪ್ರೌಢಶಾಲಾ ಶಿಕ್ಷಕನಾಗಿರುವ ನಾನು , ಇಲಾಖೆಯಿಂದ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ . ಪ್ರಸ್ತುತ ನನ್ನ ಮೂಲ ವೇತನ 47,650 ರೂ . ಆಗಿದ್ದು , ಪದವಿಪೂರ್ವ ಕಾಲೇಜಿನ ಪ್ರಾರಂಭಿಕ ಮೂಲ ವೇತನ 44,600 ರೂ . ಆಗಿರುವುದರಿಂದ ವೇತನ ರಕ್ಷಣೆ ಪಡೆಯುತ್ತೇನೆಯೇ ? ಅಥವಾ ಉಪನ್ಯಾಸಕರ ಪ್ರಾರಂಭಿಕ ವೇತನ ಪಡೆಯುತ್ತೇನೆಯೇ ? | ಚವ್ಹಾಣ್ ಎಂ . ಯಾದಗಿರಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41 ಎ ಮೇರೆಗೆ ನಿಮಗೆ ವೇತನ ರಕ್ಷಣೆ ಲಭ್ಯವಾಗುತ್ತದೆ . ಹಾಗಾಗಿ ನಿಮ್ಮ ಮೂಲ ವೇತನವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಕನಿಷ್ಠ ವೇತನ ನಿಗದಿ ಮಾಡದೆ ಪ್ರೌಢಶಾಲೆಯಲ್ಲಿ ಪಡೆಯುತ್ತಿದ್ದ 47,650 ರೂ.ಗೆ ನಿಗದಿಪಡಿಸಲಾಗುತ್ತದೆ . ಆದುದರಿಂದ ನೀವು ಈ ನಿಯಮಾನುಸಾರ ವೇತನ ರಕ್ಷಣೆ ಯನ್ನು ಕೋರಿ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕ ನೋಡಬಹುದು .



Comments
Post a Comment