ಉನ್ನತ ಶಿಕ್ಷಣಕ್ಕಾಗಿ ಕಾಲೇಜು ಸೇರಲು ಅನುಮತಿ ಬೇಕೇ ?
ಮೈಸೂರು ನ್ಯಾಯಾಲಯದಲ್ಲಿ ನಾನು ಬೆರಳಚ್ಚುಗಾರನಾಗಿದ್ದು , ಸಂಜೆ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ಸೇರಿಕೊಳ್ಳ ಬಯಸಿದ್ದೇನೆ . ಹಾಗಾಗಿ ಕಾಲೇಜು ಸೇರಲು ಇಲಾಖೆಯಿಂದ ಅನುಮತಿ ಪಡೆಯಬೇಕೇ ? | ಶ್ರೀಧರ್ ತಳವಾರ ಮೈಸೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 61 ರಂತೆ ಹಾಗೂ 2021 ರ ಕರ್ನಾಟಕ ಸರ್ಕಾರಿ ಸೇವಾ ( ನಡತೆ ) ನಿಯಮಾವಳಿಯ ನಿಯಮ 35 ರಂತೆ , ನೀವು ಸಂಜೆ ಕಾಲೇಜಿನಲ್ಲಿ ಬಿ.ಕಾಂ ತರಗತಿಗೆ ಸೇರಲು ನಿಮ್ಮ ನೇಮಕಾತಿ ಪ್ರಾಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ . ಅಲ್ಲದೆ , ದಿನಾಂಕ 6-9-86ರ ಸರ್ಕಾರದ ಸುತ್ತೋಲೆ ಡಿಪಿಎಆರ್ 9 , ಎಸ್‌ಆರ್‌ಸಿ 86 ರ ಮೇರೆಗೆ ಸರ್ಕಾರಿ ನೌಕರ ತಾಂತ್ರಿಕ ಮತ್ತು ಶೈಕ್ಷಣಿಕ ವಿದ್ಯಾರ್ಹತೆ ಪಡೆಯಲು ಹಾಗೂ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಬೇಕೆಂದು ಸೂಚಿಸಲಾಗಿದೆ . ಹಾಗಾಗಿ ನೀವು ಕಚೇರಿ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಸಂಜೆ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ಸೇರಲು ಅನುಮತಿಯನ್ನು ನಿಮ್ಮ ನೇಮಕಾತಿ ಪ್ರಾಧಿಕಾರಿಯಿಂದ ಪಡೆದುಕೊಳ್ಳುವುದು ಅವಶ್ಯಕ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ “ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ' ಪುಸ್ತಕ ನೋಡಬಹುದು .



Comments
Post a Comment