ಪ್ರೊಬೇಷನರಿ ಅವಧಿಯ ನಿಯಮಾವಳಿ.
ನಾನು 2021 ರ ಜೂನ್‌ನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದೇನೆ . ನಮಗಿರುವ ಪ್ರೊಬೇಷನರಿ ಅವಧಿ ಎಷ್ಟು ? ಈ ಅವಧಿಯಲ್ಲಿ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿದೆಯೇ ? ನಿಯೋಜನೆ ಅಥವಾ ಅನ್ಯ ಕಾರ್ಯ ನಿಮಿತ್ತ ಹೋಗಬಹುದೇ ? - ಜೈಶಂಕರ್ ಉಡುಪಿ.
- 1977 ರ ಕರ್ನಾಟಕ ಸರ್ಕಾರಿ ಸೇವಾ ( ಪ್ರೊಬೇಷನ್ ) ನಿಯಮಾವಳಿಯ ನಿಯಮ 3 ರಂತೆ ಪ್ರೊಬೇಷನರಿ ಅವಧಿ ಎರಡು ವರ್ಷಗಳಾಗಿರುತ್ತವೆ . ಈ 2 ವರ್ಷದೊಳಗೆ ನಿಗದಿತ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗದಿದ್ದರೆ ಅಥವಾ ಅನಧಿಕೃತ ಗೈರಾದರೆ ಅಥವಾ ಮತ್ಯಾವುದೋ ಕಾರಣಕ್ಕಾಗಿ ಪ್ರೊಬೇಷನರಿ ಅವಧಿಯನ್ನು 5 ವರ್ಷಗಳಿಗೆ ವಿಸ್ತರಿಸಬಹುದು . ಈ ಪ್ರೊಬೇಷನರಿ ಅವಧಿಯಲ್ಲಿ ಬೇರೆ ಜಿಲ್ಲೆಗೆ ವರ್ಗಾವಣೆ ಹೊಂದಲು ಅವಕಾಶವಿರುವುದಿಲ್ಲ . ಅಲ್ಲದೆ , ಕನಿಷ್ಠ 3 ವರ್ಷ ಸೇವೆ ಸಲ್ಲಿಸದೇ ಇದ್ದಲ್ಲಿ ಬೇರೆ ಇಲಾಖೆಗೆ ನಿಯೋಜನೆ ಮೇಲಾಗಲಿ ಅಥವಾ ಅನ್ಯ ಕಾರ್ಯ ನಿಮಿತ್ತದ ಮೇಲಾಗಲಿ ಹೋಗಲು ಬರುವುದಿಲ್ಲ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ' ಪುಸ್ತಕ ನೋಡಬಹುದು .
Comments
Post a Comment