ಸರ್ಕಾರಿ ನೌಕರನಿಗೆ ಇಲಾಖಾ ಪರೀಕ್ಷೆಗಳಲ್ಲಿನ ವಿಷಯ(ಪ್ರಶ್ನೆ ಪತ್ರಿಕೆ) ವಿನಾಯಿತಿ ನಿಯಮ.
ನಾನು ಕಾನೂನು ಪದವೀಧರನಾಗಿದ್ದು , ಜನರಲ್ ಲಾ ಭಾಗ 1 , 2 ವಿನಾಯಿತಿ ದೊರೆಯುತ್ತದೆಯೇ ? | ಬಸವರಾಜ್ ಎಸ್ . ಕಣ್ಣೂರು ರಾಯಚೂರು
1974 ರ ಕರ್ನಾಟಕ ಸಿವಿಲ್ ಸೇವಾ ( ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು ) ನಿಯಮಾವಳಿಯ ನಿಯಮ 3 ರ ಮೇರೆಗೆ ಪ್ರತಿಯೊಬ್ಬ ಸರ್ಕಾರಿ ನೌಕರನು ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯವಾಗಿರುತ್ತದೆ . ಆದರೆ , ಕಾನೂನು ಪದವೀಧರರು ಜನರಲ್ ಲಾ ಭಾಗ 1 ರ ಪತ್ರಿಕೆ 1 , ಜನರಲ್ ಲಾ ಭಾಗ 2 ಅನ್ನು ಸಂಪೂರ್ಣವಾಗಿ ವಿನಾಯಿತಿ ಹೊಂದಿರುತ್ತಾರೆ . ಜನರಲ್ ಲಾ ಭಾಗ 1 ರ ಪತ್ರಿಕೆ 2 ಕ್ಕೆ ಮಾತ್ರ ಕರ್ನಾಟಕ ಲೋಕಸೇವಾ ಆಯೋಗವು ಇಲಾಖಾ ಪರೀಕ್ಷೆಗಳಿಗಾಗಿ ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಿದಂತೆ ಅರ್ಜಿ ನಮೂನೆಯನ್ನು ಆನ್‌ಲೈನ್ ಮೂಲಕ ಸಲ್ಲಿಸುವಾಗ ಸಂಬಂಧಿತ ಅಂಕಣದಲ್ಲಿ ಈ ಬಗ್ಗೆ ವಿನಾಯಿತಿ ಕೋರಬಹುದು ಹಾಗೂ ಕಾನೂನು ಪದವಿ ಬಗ್ಗೆ ಮಾಹಿತಿ ನೀಡಿ ವಿನಾಯಿತಿ ಪಡೆಯಬಹುದು . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ' ಪುಸ್ತಕ ನೋಡಬಹುದು .



Comments
Post a Comment