ಸರ್ಕಾರಿ ನೌಕರನಿಗೆ ಜಾತಿ - ಆದಾಯ ಪ್ರಮಾಣಪತ್ರ ಪಡೆಯಲು ಇರುವ ನಿಯಮ.
ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಾನು ಸಹಶಿಕ್ಷಕನಾಗಿದ್ದು , ನನ್ನ ಪತ್ನಿಯೂ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ . ನನ್ನ ತಂದೆ ಹೆಸರಿನಲ್ಲಿ 4 ಎಕರೆ 30 ಗುಂಟೆ ಜಮೀನು ಇದೆ . ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ನಾನು ಅರ್ಹನಿದ್ದು , ಅರ್ಜಿ ಸಲ್ಲಿಕೆಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ತಾಲೂಕು ಕಚೇರಿಗೆ ನನ್ನ ವೇತನ ಪ್ರಮಾಣಪತ್ರ ಮಾತ್ರ ಅಗತ್ಯವೇ ? ಇಲ್ಲವೆ , ನನ್ನ ಪತ್ನಿಯ ವೇತನ ಪ್ರಮಾಣಪತ್ರವೂ ಅಗತ್ಯವೇ ? | ಎಂ . ಶ್ರೀಧರ್ ಹಾಸನ
ಕರ್ನಾಟಕ ಅನುಸೂಚಿತ ಜಾತಿಗಳು , ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗ ( ನೇಮಕಾತಿ ) ಮುಂತಾದವುಗಳ ಮೀಸಲಾತಿ ಅಧಿನಿಯಮ 1990 ರ ಪ್ರಕರಣ 4 ( ಎ ) ರಡಿ ಯಾವನೇ ಅಭ್ಯರ್ಥಿ ಅಥವಾ ಅವನ ತಂದೆ - ತಾಯಿ ಯಾವುದೇ ಸೇವೆಯಲ್ಲಿ ಅಥವಾ ಹುದ್ದೆಯಲ್ಲಿದ್ದರೆ ಅವರ ವೇತನ ಪ್ರಮಾಣಪತ್ರ ಸಲ್ಲಿಸಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಬೇಕೆಂದು ಸೂಚಿಸಲಾಗಿದೆ .
ಅಲ್ಲದೆ , ನೀವು ಮತ್ತು ನಿಮ್ಮ ಪತ್ನಿ ಸರ್ಕಾರಿ ಸೇವೆಯಲ್ಲಿರುವುದರಿಂದ ಇಬ್ಬರ ವೇತನ ಪ್ರಮಾಣಪತ್ರವನ್ನು ಸಲ್ಲಿಸಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಬಹುದು . ಸರ್ಕಾರಿ ಆದೇಶದಂತೆ ಇಬ್ಬರ ವಾರ್ಷಿಕ ಆದಾಯವು ಹಿಂದುಳಿದ ವರ್ಗಕ್ಕೆ 8 ಲಕ್ಷ ರೂ . ಮೀರುವಂತಿಲ್ಲ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ “ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ' ಪುಸ್ತಕ ನೋಡಬಹುದು .
Comments
Post a Comment