ನಿಯೋಜನೆ ಬಿಡುಗಡೆ ನಿಯಮವೇನು ?
ನಾನು ಕಂದಾಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದು , ಹಾವೇರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ . ಈಗ ವಿಜಯಪುರ ಜಿಲ್ಲೆಗೆ ನಿಯೋಜನೆ ಮೇರೆಗೆ ಆದೇಶವಾಗಿದೆ . ಆದರೂ ಹಾವೇರಿ ಜಿಲ್ಲೆಯಿಂದ ನನ್ನನ್ನು ಬಿಡುಗಡೆಗೊಳಿಸುತ್ತಿಲ್ಲ . ಹಾಗಾಗಿ ಸೂಕ್ತ ಸಲಹೆ ನೀಡಿ .- ಎಚ್.ಕೆ. ನವೀನ್ ಗದಗ
- -ನಿಮ್ಮನ್ನು ಹಾವೇರಿ ಜಿಲ್ಲೆಯಿಂದ ವಿಜಯಪುರ ಜಿಲ್ಲೆಗೆ ನಿಯೋಜಿಸಿ ಸರ್ಕಾರದಿಂದ ಆದೇಶವಾಗಿದ್ದರೆ ಕರ್ತವ್ಯದಿಂದ ಬಿಡುಗಡೆಗೊಳಿಸುವುದು ಸಂಬಂಧಿತ ನೇಮಕಾತಿ ಪ್ರಾಧಿಕಾರಿಯ ಕರ್ತವ್ಯವಾಗಿರುತ್ತದೆ . ಹಾಗಾಗಿ ನಿಮ್ಮ ನೇಮಕಾತಿ ಪ್ರಾಧಿಕಾರಿಯಾದ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿ ಬಿಡುಗಡೆ ಆದೇಶ ನೀಡಲು ಕೋರಬಹುದಾಗಿದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕ ನೋಡಬಹುದು .


Comments
Post a Comment