Skip to main content

Posts

Showing posts from February, 2022

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಸ್ವಇಚ್ಛಾ ನಿವೃತ್ತಿ ಕೋರಿಕೆ ಸಲ್ಲಿಕೆ ನಿಯಮ ಏನು?

ಸ್ವಇಚ್ಛಾ ನಿವೃತ್ತಿ ಕೋರಿಕೆ ಸಲ್ಲಿಕೆ ನಿಯಮ ಏನು ?  ನಾನು ಸರ್ಕಾರಿ ನೌಕರನಾಗಿದ್ದು , ಕಳೆದೊಂದು ವರ್ಷದಿಂದ ಅಶಿಸ್ತಿನ ಕ್ರಮವಾಗಿ ಶಿಸ್ತು ಪ್ರಾಧಿಕಾರಿಯವರು ನನ್ನನ್ನು ಅಮಾನತ್ತಿನಲ್ಲಿಟ್ಟಿದ್ದಾರೆ . ಆದರೆ , ನಾನು 20 ವರ್ಷ ಸೇವೆ ಪೂರೈಸಿರುವುದರಿಂದ ಸ್ವಇಚ್ಛಾ ನಿವೃತ್ತಿ ಕೋರಿಕೆ ಸಲ್ಲಿಸಲು ಬಯಸಿದ್ದೇನೆ . ನನ್ನ ಈ ಅಮಾನತ್ತಿನ ಅವಧಿಯನ್ನು ಏನೆಂದು ಪರಿಗಣಿಸಲಾಗುತ್ತದೆ ? - ಬಾಲಾಜಿ ರಾವ್ ಬೆಳಗಾವಿ . ಸರ್ವೋಚ್ಚ ನ್ಯಾಯಾಲಯವು ಆರ್.ಎಸ್ . ನಾಯಕ್ ವಿರುದ್ಧ ಕರ್ನಾಟಕ ರಾಜ್ಯ 1982 ( 1 ) ರ ಪ್ರಕರಣದಲ್ಲಿ ಅಮಾನತ್ತಿನಲ್ಲಿರುವ ಸರ್ಕಾರಿ ನೌಕರ ಸ್ವಇಚ್ಛಾ ನಿವೃತ್ತಿ ಕೋರಿದಾಗ ಅದನ್ನು ಅಂಗೀಕರಿಸಿ , ಶಿಸ್ತು ಕ್ರಮ ಕೈಬಿಟ್ಟರೆ ಆಗ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸಲು ಸೂಚಿಸಲಾಗಿರುತ್ತದೆ . ಹಾಗಾಗಿ ನೀವು ಸ್ವಇಚ್ಛಾ ನಿವೃತ್ತಿಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285 ( 1 ) ರ ಮೇರೆಗೆ 3 ತಿಂಗಳ ಮುಂಚೆಯೇ ಕೋರಿಕೆ ಸಲ್ಲಿಸಬಹುದು . ನಿಮ್ಮ ಕೋರಿಕೆ ಅಂಗೀಕರಿಸಿದರೆ ನಿಮ್ಮ ಅಮಾನತ್ತಿನ ಅವಧಿಯನ್ನು ಕರ್ತವ್ಯವೆಂದು ಪರಿಗಣಿಸಿ ನಿವೃತ್ತಿ ವೇತನ ಸೌಲಭ್ಯ ನೀಡಬಹುದು . ಹೆಚ್ಚಿನ ವಿವರಗಳಿಗೆ ಎಂ.ಉಮೇಶ್ ಅವರ ' ಸಿಸಿಎ ನಿಯಮಾವಳಿ ಸಮಗ್ರ ಕೈಪಿಡಿ ' ಪುಸ್ತಕ ನೋಡಬಹುದು .  ಲೇಖಕರ ಪುಸ್ತಕ ಹಾಗೂ ಸಿ.ಎಲ್.ಟಿ. ಅಣಕು ಪರೀಕ್ಷೆಗಾಗಿ 9902135813 ಗೆ ವಾಟ್ಸ್ ಆಪ್ ಮಾಡಿ ಹಾಗೂ...

ದಿನಾಂಕ: 25-02-2022 ರಂದು ಮಾನ್ಯ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರೊಂದಿಗೆ ನಡೆದ ಆಯವ್ಯಯ ಪೂರ್ವಭಾವಿ ಸಭೆ

ದಿನಾಂಕ: 25-02-2022 ರಂದು ಮಾನ್ಯ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರೊಂದಿಗೆ ನಡೆದ ಆಯವ್ಯಯ ಪೂರ್ವಭಾವಿ ಸಭೆ. 2022-23 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿವರು ಹಾಗೂ ಪದಾಧಿಕಾರಿಗಳ ನಿಯೋಗವು ಭಾಗವಹಿಸಿ ಕೇಂದ್ರ ಮಾದರಿಯ ವೇತನ ಜಾರಿ ಹಾಗೂ ಎನ್.ಪಿ.ಎಸ್. ರದ್ದುಗೊಳಿಸುವ ಸಂಬಂಧ ಅಂಕಿ-ಅಂಶಗಳೊಂದಿಗೆ ಪ್ರಸ್ತಾವನೆಯನ್ನು ಮಂಡಿಸಿದರು. ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಪರಿಷ್ಕರಣೆಗಾಗಿ    “ಅಧಿಕಾರಿಗಳ ವೇತನ ಸಮಿತಿ” ರಚಿಸಲು ತಾತ್ವಿಕ ಒಪ್ಪಿಗೆ ಸೂಚಿಸಿ, ಆಯವ್ಯಯದಲ್ಲಿ ಪ್ರಸ್ತಾಪಿಸುವ ಭರವಸೆಯನ್ನು ನೀಡಿದರು. • ಇತ್ತೀಚಿಗೆ ರಾಜಸ್ಥಾನ ಸರ್ಕಾರವು ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಘೋಷಿಸಿದ್ದು, ಅದರಂತೆ ಅಧ್ಯಯನ ನಡೆಸಿ ಒ.ಪಿ.ಎಸ್. ಜಾರಿಗೆ ತರುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. • ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ/ನೌಕರರ ಮೇಲಿನ ಹಲ್ಲೆಗಳನ್ನು ನಿಯಂತ್ರಿಸಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ತಂದು ಜಾಮೀನುರಹಿತ ಬಂಧನದಂತಹ ಕಠಿಣ ಕಾನೂನನ್ನು ಜಾರಿಗೆ ತರುವ ಭರವಸೆ ನೀಡಿದರು. • ನೌಕರರುಗಳ...

ಅಮಾನತು ನಿಯಮಾವಳಿ ಏನು ?

ಅಮಾನತು ನಿಯಮಾವಳಿ ಏನು ?  ನಾನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬೆಂಗಳೂರು ಮಹಾನಗರ ಪಾಲಿಕೆಗೆ ನಿಯೋಜನೆ ಮೇರೆಗೆ ಆರೋಗ್ಯ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ 2019 ರ ಜು .5 ರಿಂದ ಬಿಬಿಎಂಪಿ ಆಯುಕ್ತರು ನನ್ನನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ . ಇದು ನಿಯಮಾವಳಿ ರೀತ್ಯ ಸರಿಯೇ ? ನನ್ನ ಮಾತೃ ಇಲಾಖೆ ಅನುಮತಿ ಬೇಕಿಲ್ಲವೇ ? | ರಾಜೇಶ್ ಬೆಂಗಳೂರು  ಕರ್ನಾಟಕ ಸರ್ಕಾರಿ ಸೇವಾ ( ಸಿಸಿಎ ) ನಿಯಮಾವಳಿಯ ನಿಯಮ 15 ( 2 ) ( ಬಿ ) ( ಜಿಜಿ ) ರ ಮೇರೆಗೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಬಿ , ಸಿ ಮತ್ತು ಡಿ ಗುಂಪಿನ ಸರ್ಕಾರಿ ನೌಕರನನ್ನು ಮಾತೃ ಇಲಾಖೆಯ ಪೂರ್ವಾನುಮೋದನೆ ಇಲ್ಲದೆ ಪಾಲಿಕೆ ಆಯುಕ್ತರು ಅಮಾನತು ಮಾಡಬಹುದು . ಹಾಗಾಗಿ ಪಾಲಿಕೆ ಆಯುಕ್ತರು ಕೈಗೊಂಡ ಕ್ರಮ ನಿಯಮಬದ್ಧವಾಗಿರುತ್ತದೆ . ಹೆಚ್ಚಿನ ವಿವರಗಳಿಗೆ ಎಂ.ಉಮೇಶ್ ಅವರ ' ಸಿಸಿಎ ನಿಯಮಾವಳಿ ಸಮಗ್ರ ಕೈಪಿಡಿ ' ಪುಸ್ತಕ ನೋಡಬಹುದು.  ಲೇಖಕರ ಪುಸ್ತಕ ಹಾಗೂ ಸಿ.ಎಲ್.ಟಿ. ಅಣಕು ಪರೀಕ್ಷೆಗಾಗಿ 9902135813 ಗೆ ವಾಟ್ಸ್ ಆಪ್ ಮಾಡಿ ಹಾಗೂ ಶೇ.15% ರಷ್ಟು ರಿಯಾಯಿತಿ ಪಡೆಯಿರಿ.

ವೇತನ ರಕ್ಷಣೆ ಪಡೆಯುವ ನಿಯಮ.

ವೇತನ ರಕ್ಷಣೆ ಪಡೆಯುವ ನಿಯಮ ಪ್ರೌಢಶಾಲಾ ಶಿಕ್ಷಕನಾಗಿರುವ ನಾನು , ಇಲಾಖೆಯಿಂದ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ . ಪ್ರಸ್ತುತ ನನ್ನ ಮೂಲ ವೇತನ 47,650 ರೂ . ಆಗಿದ್ದು , ಪದವಿಪೂರ್ವ ಕಾಲೇಜಿನ ಪ್ರಾರಂಭಿಕ ಮೂಲ ವೇತನ 44,600 ರೂ . ಆಗಿರುವುದರಿಂದ ವೇತನ ರಕ್ಷಣೆ ಪಡೆಯುತ್ತೇನೆಯೇ ? ಅಥವಾ ಉಪನ್ಯಾಸಕರ ಪ್ರಾರಂಭಿಕ ವೇತನ ಪಡೆಯುತ್ತೇನೆಯೇ ? | ಚವ್ಹಾಣ್ ಎಂ . ಯಾದಗಿರಿ  ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41 ಎ ಮೇರೆಗೆ ನಿಮಗೆ ವೇತನ ರಕ್ಷಣೆ ಲಭ್ಯವಾಗುತ್ತದೆ . ಹಾಗಾಗಿ ನಿಮ್ಮ ಮೂಲ ವೇತನವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಕನಿಷ್ಠ ವೇತನ ನಿಗದಿ ಮಾಡದೆ ಪ್ರೌಢಶಾಲೆಯಲ್ಲಿ ಪಡೆಯುತ್ತಿದ್ದ 47,650 ರೂ.ಗೆ ನಿಗದಿಪಡಿಸಲಾಗುತ್ತದೆ . ಆದುದರಿಂದ ನೀವು ಈ ನಿಯಮಾನುಸಾರ ವೇತನ ರಕ್ಷಣೆ ಯನ್ನು ಕೋರಿ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕ ನೋಡಬಹುದು .  ಲೇಖಕರ ಪುಸ್ತಕ ಹಾಗೂ ಸಿ.ಎಲ್.ಟಿ. ಅಣಕು ಪರೀಕ್ಷೆಗಾಗಿ 9902135813 ಗೆ ವಾಟ್ಸ್ ಆಪ್ ಮಾಡಿ ಹಾಗೂ ಶೇ.15% ರಷ್ಟು ರಿಯಾಯಿತಿ ಪಡೆಯಿರಿ.

ತಡವಾಗಿ ಪಾವತಿಯಾದ ಪಿಂಚಣಿ, ಉಪದಾನ ಹಾಗೂ ಗಳಿಕೆ ರಜೆ ನಗದೀಕರಣ ಇವುಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸುವ ಬಗ್ಗೆ

ತಡವಾಗಿ ಪಾವತಿಯಾದ ಪಿಂಚಣಿ, ಉಪದಾನ ಹಾಗೂ ಗಳಿಕೆ ರಜೆ ನಗದೀಕರಣ ಇವುಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸುವ ಬಗ್ಗೆ. ,  ಲೇಖಕರ ಪುಸ್ತಕ ಹಾಗೂ ಸಿ.ಎಲ್.ಟಿ. ಅಣಕು ಪರೀಕ್ಷೆಗಾಗಿ 9902135813 ಗೆ ವಾಟ್ಸ್ ಆಪ್ ಮಾಡಿ ಹಾಗೂ ಶೇ.15% ರಷ್ಟು ರಿಯಾಯಿತಿ ಪಡೆಯಿರಿ.

ರಜೆ ಅವಧಿಯ ವೇತನ ನಗದೀಕರಣ ಹೇಗೆ?

ರಜೆ ಅವಧಿಯ ವೇತನ ನಗದೀಕರಣ ಹೇಗೆ? ಅನಾರೋಗ್ಯ ನಿಮಿತ್ತ ನಾನು ಎರಡು ತಿಂಗಳು ವೈದ್ಯಕೀಯ ರಜೆ ತೆಗೆದುಕೊಂಡು ಮತ್ತೆ ಕೆಲಸಕ್ಕೆ ಹಾಜರಾಗಿದ್ದೇನೆ . ರಜೆ ಅವಧಿಯ ವೇತನವನ್ನು ಕೆಲ ಕಾರಣಗಳಿಂದ ನಗದೀಕರಿಸಿರುವುದಿಲ್ಲ . ನನ್ನ ಸೇವೆ 35 ವರ್ಷ ಮುಗಿದಿದ್ದು , ನಿವೃತ್ತಿಯಾಗಲು 8 ತಿಂಗಳು ಬಾಕಿ ಇದೆ . ಹೀಗಿರುವಾಗ ರಜೆ ಅವಧಿಯ ವೇತನವನ್ನು ನಗದೀಕರಿಸಿದರೆ , ನನ್ನ ಸೇವಾ ಅವಧಿಯಲ್ಲಿ 2 ತಿಂಗಳು ಕಡಿಮೆಯಾಗುತ್ತದೆಯೇ ? | ರಾಮೇಗೌಡ ಮೈಸೂರು. ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 292 ಜಿ ಮೇರೆಗೆ ನಿವೃತ್ತಿ ಉಪದಾನ ಪಡೆಯಲು ಗರಿಷ್ಠ 33 ವರ್ಷ ಸಾಕೆಂದು ದಿನಾಂಕ 4.5.2019 ರ ಸರ್ಕಾರಿ ಅಧಿಕೃತ ಜ್ಞಾಪನ ಸಂಖ್ಯೆ ಎಫ್‌ಡಿ 2 , ಎಸ್‌ಆರ್‌ಎಸ್ 2019 ರ ಮೇರೆಗೆ ಸೂಚಿಸಲಾಗಿದೆ . ಈಗಾಗಲೆ ನೀವು 35 ವರ್ಷ ಸೇವೆ ಸಲ್ಲಿಸಿರುವುದರಿಂದ ನಿಮ್ಮ ಪಿಂಚಣಿಗೆ 30 ವರ್ಷ ಹಾಗೂ ನಿವೃತ್ತಿ ಉಪದಾನಕ್ಕೆ 33 ವರ್ಷಗಳನ್ನು ಪರಿಗಣಿಸಿ ಅದನ್ನು ನಿಯಮಾನುಸಾರ ಲೆಕ್ಕ ಹಾಕಿಸಿ ನೀಡಲಾಗುವುದು . ಆದರೆ , ನೀವು ಎರಡು ತಿಂಗಳ ಈ ಪಿಂಚಣಿ ಸೌಲಭ್ಯಗಳಿಗೆ ಪರಿಗಣನೆ ಆಗುವುದಿಲ್ಲ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕ ನೋಡಬಹುದು . .  ಲೇಖಕರ ಪುಸ್ತಕ ಹಾಗೂ ಸಿ.ಎಲ್.ಟಿ. ಅಣಕು ಪರೀಕ್ಷೆಗಾಗಿ 9902135813 ಗೆ ವಾಟ್ಸ್ ಆಪ್ ಮಾಡಿ ಹಾಗೂ ಶೇ.15% ರಷ್ಟು ರಿಯಾಯಿತಿ ಪಡೆಯಿರಿ.

ಸರ್ಕಾರಿ ನೌಕರನಿಗೆ ಇಲಾಖಾ ಪರೀಕ್ಷೆಗಳಲ್ಲಿನ ವಿಷಯ(ಪ್ರಶ್ನೆ ಪತ್ರಿಕೆ) ವಿನಾಯಿತಿ ನಿಯಮ.

ಸರ್ಕಾರಿ ನೌಕರನಿಗೆ ಇಲಾಖಾ ಪರೀಕ್ಷೆಗಳಲ್ಲಿನ ವಿಷಯ(ಪ್ರಶ್ನೆ ಪತ್ರಿಕೆ) ವಿನಾಯಿತಿ ನಿಯಮ. ನಾನು ಕಾನೂನು ಪದವೀಧರನಾಗಿದ್ದು , ಜನರಲ್ ಲಾ ಭಾಗ 1 , 2 ವಿನಾಯಿತಿ ದೊರೆಯುತ್ತದೆಯೇ ? | ಬಸವರಾಜ್ ಎಸ್ . ಕಣ್ಣೂರು ರಾಯಚೂರು 1974 ರ ಕರ್ನಾಟಕ ಸಿವಿಲ್ ಸೇವಾ ( ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು ) ನಿಯಮಾವಳಿಯ ನಿಯಮ 3 ರ ಮೇರೆಗೆ ಪ್ರತಿಯೊಬ್ಬ ಸರ್ಕಾರಿ ನೌಕರನು ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯವಾಗಿರುತ್ತದೆ . ಆದರೆ , ಕಾನೂನು ಪದವೀಧರರು ಜನರಲ್ ಲಾ ಭಾಗ 1 ರ ಪತ್ರಿಕೆ 1 , ಜನರಲ್ ಲಾ ಭಾಗ 2 ಅನ್ನು ಸಂಪೂರ್ಣವಾಗಿ ವಿನಾಯಿತಿ ಹೊಂದಿರುತ್ತಾರೆ . ಜನರಲ್ ಲಾ ಭಾಗ 1 ರ ಪತ್ರಿಕೆ 2 ಕ್ಕೆ ಮಾತ್ರ ಕರ್ನಾಟಕ ಲೋಕಸೇವಾ ಆಯೋಗವು ಇಲಾಖಾ ಪರೀಕ್ಷೆಗಳಿಗಾಗಿ ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಿದಂತೆ ಅರ್ಜಿ ನಮೂನೆಯನ್ನು ಆನ್‌ಲೈನ್ ಮೂಲಕ ಸಲ್ಲಿಸುವಾಗ ಸಂಬಂಧಿತ ಅಂಕಣದಲ್ಲಿ ಈ ಬಗ್ಗೆ ವಿನಾಯಿತಿ ಕೋರಬಹುದು ಹಾಗೂ ಕಾನೂನು ಪದವಿ ಬಗ್ಗೆ ಮಾಹಿತಿ ನೀಡಿ ವಿನಾಯಿತಿ ಪಡೆಯಬಹುದು . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ' ಪುಸ್ತಕ ನೋಡಬಹುದು .  ಲೇಖಕರ ಪುಸ್ತಕ ಹಾಗೂ ಸಿ.ಎಲ್.ಟಿ. ಅಣಕು ಪರೀಕ್ಷೆಗಾಗಿ 9902135813 ಗೆ ವಾಟ್ಸ್ ಆಪ್ ಮಾಡಿ ಹಾಗೂ ಶೇ.15% ರಷ್ಟು ರಿಯಾಯಿತಿ ಪಡೆಯಿರಿ.

ಸರ್ಕಾರಿ ನೌಕರನಿಗೆ ಜಾತಿ - ಆದಾಯ ಪ್ರಮಾಣಪತ್ರ ಪಡೆಯಲು ಇರುವ ನಿಯಮ.

ಸರ್ಕಾರಿ ನೌಕರನಿಗೆ ಜಾತಿ - ಆದಾಯ ಪ್ರಮಾಣಪತ್ರ ಪಡೆಯಲು ಇರುವ ನಿಯಮ. ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಾನು ಸಹಶಿಕ್ಷಕನಾಗಿದ್ದು , ನನ್ನ ಪತ್ನಿಯೂ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ . ನನ್ನ ತಂದೆ ಹೆಸರಿನಲ್ಲಿ 4 ಎಕರೆ 30 ಗುಂಟೆ ಜಮೀನು ಇದೆ . ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ನಾನು ಅರ್ಹನಿದ್ದು , ಅರ್ಜಿ ಸಲ್ಲಿಕೆಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ತಾಲೂಕು ಕಚೇರಿಗೆ ನನ್ನ ವೇತನ ಪ್ರಮಾಣಪತ್ರ ಮಾತ್ರ ಅಗತ್ಯವೇ ? ಇಲ್ಲವೆ , ನನ್ನ ಪತ್ನಿಯ ವೇತನ ಪ್ರಮಾಣಪತ್ರವೂ ಅಗತ್ಯವೇ ? | ಎಂ . ಶ್ರೀಧರ್ ಹಾಸನ ಕರ್ನಾಟಕ ಅನುಸೂಚಿತ ಜಾತಿಗಳು , ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗ ( ನೇಮಕಾತಿ ) ಮುಂತಾದವುಗಳ ಮೀಸಲಾತಿ ಅಧಿನಿಯಮ 1990 ರ ಪ್ರಕರಣ 4 ( ಎ ) ರಡಿ ಯಾವನೇ ಅಭ್ಯರ್ಥಿ ಅಥವಾ ಅವನ ತಂದೆ - ತಾಯಿ ಯಾವುದೇ ಸೇವೆಯಲ್ಲಿ ಅಥವಾ ಹುದ್ದೆಯಲ್ಲಿದ್ದರೆ ಅವರ ವೇತನ ಪ್ರಮಾಣಪತ್ರ ಸಲ್ಲಿಸಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಬೇಕೆಂದು ಸೂಚಿಸಲಾಗಿದೆ .  ಅಲ್ಲದೆ , ನೀವು ಮತ್ತು ನಿಮ್ಮ ಪತ್ನಿ ಸರ್ಕಾರಿ ಸೇವೆಯಲ್ಲಿರುವುದರಿಂದ ಇಬ್ಬರ ವೇತನ ಪ್ರಮಾಣಪತ್ರವನ್ನು ಸಲ್ಲಿಸಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಬಹುದು . ಸರ್ಕಾರಿ ಆದೇಶದಂತೆ ಇಬ್ಬರ ವಾರ್ಷಿಕ ಆದಾಯವು ಹಿಂದುಳಿದ ವರ್ಗಕ್ಕೆ 8 ಲಕ್ಷ ರೂ . ಮೀರುವಂತಿಲ್ಲ . ಹೆಚ್ಚಿನ ...

ಉನ್ನತ ಶಿಕ್ಷಣಕ್ಕಾಗಿ ಕಾಲೇಜು ಸೇರಲು ಅನುಮತಿ ಬೇಕೇ ?

ಉನ್ನತ ಶಿಕ್ಷಣಕ್ಕಾಗಿ ಕಾಲೇಜು ಸೇರಲು ಅನುಮತಿ ಬೇಕೇ ? ಮೈಸೂರು ನ್ಯಾಯಾಲಯದಲ್ಲಿ ನಾನು ಬೆರಳಚ್ಚುಗಾರನಾಗಿದ್ದು , ಸಂಜೆ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ಸೇರಿಕೊಳ್ಳ ಬಯಸಿದ್ದೇನೆ . ಹಾಗಾಗಿ ಕಾಲೇಜು ಸೇರಲು ಇಲಾಖೆಯಿಂದ ಅನುಮತಿ ಪಡೆಯಬೇಕೇ ? | ಶ್ರೀಧರ್ ತಳವಾರ ಮೈಸೂರು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 61 ರಂತೆ ಹಾಗೂ 2021 ರ ಕರ್ನಾಟಕ ಸರ್ಕಾರಿ ಸೇವಾ ( ನಡತೆ ) ನಿಯಮಾವಳಿಯ ನಿಯಮ 35 ರಂತೆ , ನೀವು ಸಂಜೆ ಕಾಲೇಜಿನಲ್ಲಿ ಬಿ.ಕಾಂ ತರಗತಿಗೆ ಸೇರಲು ನಿಮ್ಮ ನೇಮಕಾತಿ ಪ್ರಾಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ . ಅಲ್ಲದೆ , ದಿನಾಂಕ 6-9-86ರ ಸರ್ಕಾರದ ಸುತ್ತೋಲೆ ಡಿಪಿಎಆರ್ 9 , ಎಸ್‌ಆರ್‌ಸಿ 86 ರ ಮೇರೆಗೆ ಸರ್ಕಾರಿ ನೌಕರ ತಾಂತ್ರಿಕ ಮತ್ತು ಶೈಕ್ಷಣಿಕ ವಿದ್ಯಾರ್ಹತೆ ಪಡೆಯಲು ಹಾಗೂ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಬೇಕೆಂದು ಸೂಚಿಸಲಾಗಿದೆ . ಹಾಗಾಗಿ ನೀವು ಕಚೇರಿ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಸಂಜೆ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ಸೇರಲು ಅನುಮತಿಯನ್ನು ನಿಮ್ಮ ನೇಮಕಾತಿ ಪ್ರಾಧಿಕಾರಿಯಿಂದ ಪಡೆದುಕೊಳ್ಳುವುದು ಅವಶ್ಯಕ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ “ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ' ಪುಸ್ತಕ ನೋಡಬಹುದು .

ಪ್ರಭಾರಿ ಭತ್ಯೆ ದೊರಕುವುದೇ ?

ಪ್ರಭಾರಿ ಭತ್ಯೆ ದೊರಕುವುದೇ ? ಪಾಥಮಿಕ ಶಾಲಾ ಶಿಕ್ಷಕನಾಗಿರುವ ನಾನು , 5 ತಿಂಗಳಿ ನಿಂದ ಮುಖ್ಯೋಪಾಧ್ಯಾಯ ಹುದ್ದೆಯಲ್ಲಿ ಪ್ರಭಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ . ಹಾಗಾಗಿ ನನಗೆ ಪ್ರಭಾರಿ ಭತ್ಯೆ ದೊರಕುವುದೇ ? | ನಿಸಾರ್ ಆಹ್ಮದ್ ರಾಯಚೂರು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 32 ಕ್ಕೆ ಅನುಸಾರವಾಗಿ ನೀವು ಮುಖ್ಯೋಪಾಧ್ಯಾಯಹುದ್ದೆಯಲ್ಲಿ ಪ್ರಭಾರದಲ್ಲಿದ್ದರೆ ನಿಯಮ 68 ರ ಮೇರೆಗೆ ಮೊದಲ 3 ತಿಂಗಳಿಗೆ ಶೇ .7.5 ಹಾಗೂ 3 ತಿಂಗಳ ನಂತರ ಪ್ರಭಾರದಲ್ಲಿದ್ದರೆ ಮುಖ್ಯೋಪಾಧ್ಯ ಯರ ವೇತನ ಶ್ರೇಣಿಯಲ್ಲಿ ಪ್ರಭಾರ ಭತ್ಯೆ ಪಡೆಯಲು ಅರ್ಹರಾಗುತ್ತೀರಿ . ಈ ಬಗ್ಗೆ ನಿಮ್ಮ ಮೇಲಧಿಕಾರಿಗೆ ನಿಯಮ ಪ್ರಕಾರ ಅರ್ಜಿ ಸಲ್ಲಿಸಬಹುದು . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕ ನೋಡಬಹುದು .

ನಿಯೋಜನೆ ಬಿಡುಗಡೆ ನಿಯಮವೇನು ?

ನಿಯೋಜನೆ ಬಿಡುಗಡೆ ನಿಯಮವೇನು ? ನಾನು ಕಂದಾಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದು , ಹಾವೇರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ . ಈಗ ವಿಜಯಪುರ ಜಿಲ್ಲೆಗೆ ನಿಯೋಜನೆ ಮೇರೆಗೆ ಆದೇಶವಾಗಿದೆ . ಆದರೂ ಹಾವೇರಿ ಜಿಲ್ಲೆಯಿಂದ ನನ್ನನ್ನು ಬಿಡುಗಡೆಗೊಳಿಸುತ್ತಿಲ್ಲ . ಹಾಗಾಗಿ ಸೂಕ್ತ ಸಲಹೆ ನೀಡಿ .- ಎಚ್.ಕೆ. ನವೀನ್ ಗದಗ - -ನಿಮ್ಮನ್ನು ಹಾವೇರಿ ಜಿಲ್ಲೆಯಿಂದ ವಿಜಯಪುರ ಜಿಲ್ಲೆಗೆ ನಿಯೋಜಿಸಿ ಸರ್ಕಾರದಿಂದ ಆದೇಶವಾಗಿದ್ದರೆ ಕರ್ತವ್ಯದಿಂದ ಬಿಡುಗಡೆಗೊಳಿಸುವುದು ಸಂಬಂಧಿತ ನೇಮಕಾತಿ ಪ್ರಾಧಿಕಾರಿಯ ಕರ್ತವ್ಯವಾಗಿರುತ್ತದೆ . ಹಾಗಾಗಿ ನಿಮ್ಮ ನೇಮಕಾತಿ ಪ್ರಾಧಿಕಾರಿಯಾದ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿ ಬಿಡುಗಡೆ ಆದೇಶ ನೀಡಲು ಕೋರಬಹುದಾಗಿದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕ ನೋಡಬಹುದು .

ಫೆಬ್ರವರಿ 19 ಮತ್ತು 20 ಕ್ಕೆ CLT ಪರೀಕ್ಷೆಯ ಸ್ಥಳವಾರು ಸ್ಲಾಟ್‌ಗಳನ್ನು ತೆರೆಯಲಾಗಿದೆ.

 ಫೆಬ್ರವರಿ 19 ಮತ್ತು 20 ಕ್ಕೆ CLT ಪರೀಕ್ಷೆಯ ಸ್ಥಳವಾರು ಸ್ಲಾಟ್‌ಗಳನ್ನು ತೆರೆಯಲಾಗಿದೆ.   Computer Literacy Test Check all the products from Computer Literacy Test here  https://mydukaan.io/ksgeanews/categories/computer-literacy-test .  Feel free to call us on 9902135813 if you need any help with ordering online

ಪ್ರೊಬೇಷನರಿ ಅವಧಿಯ ನಿಯಮಾವಳಿ.

ಪ್ರೊಬೇಷನರಿ ಅವಧಿಯ ನಿಯಮಾವಳಿ. ನಾನು 2021 ರ ಜೂನ್‌ನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದೇನೆ . ನಮಗಿರುವ ಪ್ರೊಬೇಷನರಿ ಅವಧಿ ಎಷ್ಟು ? ಈ ಅವಧಿಯಲ್ಲಿ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿದೆಯೇ ? ನಿಯೋಜನೆ ಅಥವಾ ಅನ್ಯ ಕಾರ್ಯ ನಿಮಿತ್ತ ಹೋಗಬಹುದೇ ?  -  ಜೈಶಂಕರ್ ಉಡುಪಿ. - 1977 ರ ಕರ್ನಾಟಕ ಸರ್ಕಾರಿ ಸೇವಾ ( ಪ್ರೊಬೇಷನ್ ) ನಿಯಮಾವಳಿಯ ನಿಯಮ 3 ರಂತೆ ಪ್ರೊಬೇಷನರಿ ಅವಧಿ ಎರಡು ವರ್ಷಗಳಾಗಿರುತ್ತವೆ . ಈ 2 ವರ್ಷದೊಳಗೆ ನಿಗದಿತ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗದಿದ್ದರೆ ಅಥವಾ ಅನಧಿಕೃತ ಗೈರಾದರೆ ಅಥವಾ ಮತ್ಯಾವುದೋ ಕಾರಣಕ್ಕಾಗಿ ಪ್ರೊಬೇಷನರಿ ಅವಧಿಯನ್ನು 5 ವರ್ಷಗಳಿಗೆ ವಿಸ್ತರಿಸಬಹುದು . ಈ ಪ್ರೊಬೇಷನರಿ ಅವಧಿಯಲ್ಲಿ ಬೇರೆ ಜಿಲ್ಲೆಗೆ ವರ್ಗಾವಣೆ ಹೊಂದಲು ಅವಕಾಶವಿರುವುದಿಲ್ಲ . ಅಲ್ಲದೆ , ಕನಿಷ್ಠ 3 ವರ್ಷ ಸೇವೆ ಸಲ್ಲಿಸದೇ ಇದ್ದಲ್ಲಿ ಬೇರೆ ಇಲಾಖೆಗೆ ನಿಯೋಜನೆ ಮೇಲಾಗಲಿ ಅಥವಾ ಅನ್ಯ ಕಾರ್ಯ ನಿಮಿತ್ತದ ಮೇಲಾಗಲಿ ಹೋಗಲು ಬರುವುದಿಲ್ಲ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ' ಪುಸ್ತಕ ನೋಡಬಹುದು .

ರಜೆ ಮಂಜೂರಾತಿ ನಿಯಮಗಳೇನು ?

ರಜೆ ಮಂಜೂರಾತಿ ನಿಯಮಗಳೇನು ? ಪ್ರಶ್ನೆ ನಾನು 2020 ರಲ್ಲಿ ಸರ್ಕಾರಿ ಸೇವೆಗೆ ಸೇರಿದ್ದೇನೆ . ಈಗ ಸಿವಿಲ್ ಸರ್ವಿಸ್ ಪರೀಕ್ಷೆಗೆ ಹಾಜರಾಗಲು ಹಾಗೂ ಪೂರ್ವಭಾವಿ ತಯಾರಿಗೆ ದೀರ್ಘ ರಜೆ ಪಡೆಯಲು ಅವಕಾಶವಿದೆಯೇ ?    [ ಎನ್ . ದಿವಾಕರ್ ಬಳ್ಳಾರಿ. - ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 112 ರ ಮೇರೆಗೆ ನೀವು ವೈದ್ಯಕೀಯ ಪ್ರಮಾಣಪತ್ರ ಇಲ್ಲದೆ ಮೂರು ತಿಂಗಳು ಗಳಿಕೆ ರಜೆ ಪಡೆಯಬಹುದು . ಅದಕ್ಕಿಂತ ಹೆಚ್ಚಾದಲ್ಲಿ ನಿಮ್ಮ ರಜೆ ಮಂಜೂರಾತಿ ಪಾಧಿಕಾರದ ಅನುಮತಿ ಪಡೆದು ಮತ್ತೆ ರಜೆ ಮುಂದುವರಿಸಬಹುದು . ಇಲ್ಲದೆ ಹೋದರೆ ನಿಯಮ 117 ರ ಮೇರೆಗೆ ಅಸಾಧಾರಣ ರಜೆ ಸಹ ಪಡೆಯಬಹುದಾಗಿರುತ್ತದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕ ನೋಡಬಹುದು .

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers