ಸರ್ಕಾರಿ ನೌಕರರು ನೆಮ್ಮದಿಯಿಂದ ಕೆಲಸ ಮಾಡುವಂತಾಗಲು ಸುಳ್ಳು ಮೂಗರ್ಜಿಗಳಿಗೆ ಕಡಿವಾಣ-ಸಿ.ಎಸ್. ಷಡಾಕ್ಷರಿ
- ಸಂಘದ ಮನವಿಯಂತೆ ಮೂಗರ್ಜಿಗಳ ಆಧಾರದ ಮೇಲೆ ತನಿಖೆ ಮಾಡದಂತೆ ದಿನಾಂಕ:03-10-2019 ರಂದು ಸರ್ಕಾರವು ಆದೇಶ ಹೊರಡಿಸಿತ್ತು.
- ಈ ಆದೇಶದ ಕಂಡಿಕೆ-4ರಲ್ಲಿ ಪೂರ್ಣ ಹೆಸರು/ವಿಳಾಸವಿರುವ ದೂರುಗಳನ್ನು ತನಿಖೆಗೆ/ವಿಚಾರಣೆಗೆ ಪರಿಗಣಿಸುವಂತೆ ಸೂಚಿಸಲಾಗಿದೆ.
- ಸುಳ್ಳು ಹೆಸರು/ವಿಳಾಸವನ್ನು ನೀಡಿ ದೂರು ದಾಖಲಿಸುವ ಮೂಲಕ ಸರ್ಕಾರಿ ನೌಕರರಿಗೆ ಅನಗತ್ಯ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಸಂಘವು ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿತ್ತು.
ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಸದರಿ ಸುತ್ತೋಲೆಯನ್ನು ಮಾರ್ಪಡಿಸಿ ದೂರು ನೀಡಿರುವ ವ್ಯಕ್ತಿಯ ಹೆಸರು ಮತ್ತು ಹೆಸರನ್ನು ಖಚಿತಪಡಿಸಿಕೊಂಡು , ದೂರುದಾರರು ಅಗತ್ಯ / ಪೂರಕ ಒದಗಿಸಿದ ನಂತರ ಅರೋಪವು ಮೇಲ್ನೋಟಕ್ಕೆ ಕಂಟುಬಂದಲ್ಲಿ ಮಾತ್ರ ತನಿಖೆ / ವಿಚಾರಣೆಗೆ ಪರಿಗಣಿಸುವಂತೆ ಮಾನ್ಯ ಮುಖ್ಯ ಮಂತ್ರಿಗಳು ನಿರ್ದೇಶನ ನೀಡಿರುತ್ತಾರೆ .
ಇದರಿಂದಾಗಿ ಸರ್ಕಾರಿ ನೌಕರರು ನಿರ್ಭೀತಿಯಿಂದ ನೆಮ್ಮದಿಯಿಂದ ಕೆಲಸ ನಿರ್ವಹಿಸಬಹುದಾಗಿದೆ.



Comments
Post a Comment