ಕರ್ನಾಟಕ ರಾಜ್ಯ ನಾಗರಿಕ ಸೇವಾ ( ನಡತೆ ) ನಿಯಮಗಳು , 2021 KARNATAKA STATE CIVIL SERVICE ( CONDUCT ) RULES , 2021
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಸೂಚನೆ ಸಂಖ್ಯೆ : ಸಿಆಸುಇ 12 ಸೇನಿಸಿ 2019 , ಬೆಂಗಳೂರು , ದಿನಾಂಕ : 07.01.2021 ರಂದು
ಕರ್ನಾಟಕ ರಾಜ್ಯ ನಾಗರಿಕ ಸೇವಾ ( ನಡತೆ ) ನಿಯಮಗಳು , 2021ಗಳನ್ನು ಆದೇಶಿದೆ.
ಪೂರ್ಣ ಆದೇಶ ಪ್ರತಿ ಗಾಗಿ ಇಲ್ಲಿ ಕ್ಲಿಕ್ ಮಾಡಿ ಪಿಡಿಎಫ್ ಫೈಲ್ ಪಡೆಯಿರಿ
ಈ ಹಿಂದೆ ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿರುವ ಅಂಶಗಳು ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರ ವ್ಯಾಪಾರ, ವ್ಯವಹಾರಗಳಿಗಳಿಗೂ ಪ್ರತಿಕೂಲ ಪರಿಣಾಮ ಬೀರುವಂತಿದ್ದು, ಈ ಕರಡು ನಿಯಮಗಳನ್ನು ಜಾರಿಗೆ ತಂದಲ್ಲಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರ ಅಭಿವ್ಯಕ್ತಿ ಸ್ವಾತಂತ್ರವನ್ನು ಹರಣ ಮಾಡಿದಂತಾಗಲಿದೆ ಅಲ್ಲದೆ ಭಾರತದ ಸಂವಿಧಾನದಲ್ಲಿ ಈ ದೇಶದ ನಾಗರೀಕರಿಗೆ ನೀಡಿರುವಂತಹ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವಂತಿರುವ ಈ ನಿಯಮಗಳ ಬಗ್ಗೆ ರಾಜ್ಯಾದ್ಯಂತ ನೌಕರರು ತೀವ್ರ ಪ್ರತಿರೋಧ ವ್ಯಕ್ತಪಡಿಸಿರುತ್ತಾರೆ. ಈ ಸಂಬಂಧ ಸರ್ಕಾರಕ್ಕೆ ಅವಶ್ಯ ಮಾರ್ಗದರ್ಶನ ನೀಡುವಂತೆ ಸಂಘಕ್ಕೆ ಒತ್ತಾಯ ತಂದಿರುತ್ತಾರೆ.
ಈ ಸಂಬಂಧವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಸಂಘದ ವತಿಯಿಂದ ಸರ್ಕಾರವು ಜಾರಿಗೆ ತರಲು ಹೊರಟಿರುವ ಮೇಲ್ಕಂಡ ನಡತೆ ನಿಯಮಗಳ ಈ ಕೆಳಕಂಡ ವಿಷಯಗಳಿಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಿದ್ದು, ಅದರಂತೆ ಕ್ರಮವಹಿಸಲು ಸರ್ಕಾರವನ್ನು ಒತ್ತಾಯಿಸುತ್ತದೆ.
• ಸರ್ಕಾರಿ ನೌಕರನ/ನೌಕರಳ ಪತ್ನಿ ಅಥವಾ ಪತಿಗೆ ರಕ್ತ ಸಂಬಂಧ ಅಥವಾ ವಿವಾಹದ ಮೂಲಕ ಸಂಬಂಧಿಗಳಾಗುತ್ತಾರೆ ಎಂಬ ನಿಯಮವನ್ನು ಕೈಬಿಡುವುದು.
• ರಾಜ್ಯ ಸರ್ಕಾರಿ ನೌಕರನನ್ನು ಅವಲಂಬಿಸಿರುವ ಕುಟುಂಬದ ಯಾವೊಬ್ಬ ಸದಸ್ಯನೂ ಯಾವುದೇ ರಾಜಕೀಯ ಪಕ್ಷದ ಚುನಾವಣೆ ಪ್ರಕ್ರಿಯೆಗಳಲ್ಲಿ ಭಾಗವಹಿಸಬಾರದೆಂಬ ನಿಯಮವನ್ನು ತೆಗೆದುಹಾಕುವುದು
• ರಾಜಕೀಯೇತರ ಸಂಘ-ಸಂಸ್ಥೆ ಹಾಗೂ ಕ್ರೀಡಾ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಗವಹಿಸಲು ವಿಧಿಸಿರುವ ನಿರ್ಬಂಧವನ್ನು ಕೈಬಿಡುವುದು.
• ಕೇಂದ್ರ ಸರ್ಕಾರವು ತನ್ನ ನೌಕರರಿಗೆ ವಿದೇಶ ಪ್ರವಾಸ ಮಾಡಲು ನೀಡಿರುವ ಅವಕಾಶವನ್ನು ರಾಜ್ಯ ಸರ್ಕಾರಿ ನೌಕರರಿಗೂ ಅನ್ವಯಿಸಿ, ನೌಕರನು ವಿದೇಶ ಪ್ರವಾಸ ಉದ್ದೇಶಕ್ಕೆ ಅರ್ಜಿ ಸಲ್ಲಿಸಿದ 21 ದಿನದೊಳಗಾಗಿ ಅನುಮೋದನೆ ದೊರೆತಿದೆ ಎಂದು ಪರಿಗಣಿಸುವುದು.
• ಸರ್ಕಾರಿ ನೌಕರರಿಗೆ ಕಲಾತ್ಮಕ, ಸಾಹಿತ್ಯಿಕ ಮತ್ತು ವೈಜ್ಞಾನಿಕ ಪ್ರವೃತ್ತಿಗೆ ಉತ್ತೇಜನ ನೀಡುವುದರ ಜೊತೆಗೆ, ಪತ್ರಿಕೆ, ಆಕಾಶವಾಣಿ ದೂರದರ್ಶನದ ಹಾಗೂ ಯಾವುದೇ ಬಗೆಯ ಪ್ರದರ್ಶನ ಕಲೆಗಳು ಅಥವಾ ಸಮೂಹ ಮಾಧ್ಯಮಗಳು ಅಥವಾ ಪುಸ್ತಕ, ಲೇಖನ ಮುಂತಾದವುಗಳ ಪ್ರಕಟಣೆಯಲ್ಲಿ ಭಾಗವಹಿಸುವಿಕೆಯನ್ನು ನಿರ್ಬಂಧಿಸಬಾರದು.
• ಸರ್ಕಾರಿ ನೌಕರರು ಚರ-ಸ್ಥಿರಾಸ್ತಿ ಖರೀದಿ/ ಮಾರಾಟ ಮಾಡಲು ಸರ್ಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂಬ ನಿಯಮವನ್ನು ಕೈಬಿಟ್ಟು, ಖರೀದಿ/ಮಾರಾಟ ನಂತರ ಸರ್ಕಾರಕ್ಕೆ ಅಥವಾ ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲು ಅವಕಾಶ ಕಲ್ಪಿಸುವುದು.
• ಸರ್ಕಾರಿ ನೌಕರನು ಯಾವುದೇ ವಿಶೇಷ ಸಂದರ್ಭಗಳಲ್ಲಿ ಉಡುಗೊರೆಗಳನ್ನು ಪಡೆಯಲು ನಿಗದಿಪಡಿಸಿರುವ ಆರ್ಥಿಕ ನಿರ್ಬಂಧವನ್ನು ಸಡಿಲಿಸಿ ಹಾಗೂ ಪ್ರಸ್ತುತ ಪರಿಸ್ಥಿಗನುಗುಣವಾಗಿ ಸರ್ಕಾರಿ ನೌಕರನು ಪಡೆಯುವ ಎರಡು ತಿಂಗಳ ವೇತನದ ಮೊತ್ತದಷ್ಟು ಮೌಲ್ಯದ ಉಡುಗೊರೆಯನ್ನು ಪಡೆಯಲು ಅವಕಾಶ ಕಲ್ಪಿಸುವುದು.
• ಸರ್ಕಾರಿ ನೌಕರನ ಅವಲಂಭಿತರು ವ್ಯಾಪಾರ/ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ವಿಧಿಸಿರುವ ನಿರ್ಬಂಧವನ್ನು ಕೈಬಿಡುವುದು.
Facebook Telegram:t.me/ksgeabangalore, Blogspot. Website. WhatsApp Youtube
@syedKSGEA

Comments
Post a Comment