1998ರ ಗೆಜೆಟೆಡ್ ಪ್ರೊಬೇಷನರ್ ಹುದ್ದೆಯ ಪರಿಷ್ಕೃತ ಆಯ್ಕೆಪಟ್ಟಿ ಪ್ರಕಟ.
ಪತ್ರಿಕಾ ಪ್ರಕಟಣೆ :
ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆ ಸಂಖ್ಯೆ : ಇ ( 1 ) 15050 / ಪಿಎಸ್‌ಸಿ / 1997-98 , ದಿನಾಂಕ : 09-03-1998ರಲ್ಲಿ ಅಧಿಸೂಚಿಸಲಾದ ಗೆಜೆಟೆಡ್ ಪ್ರೊಬೇಷನರ್ 1998 ನೇ ಸಾಲಿನ 383 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ : 28-02-2006ರಂದು ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿದ್ದು , ತದನಂತರ ಮಾನ್ಯ ಉಚ್ಛ ನ್ಯಾಯಾಲಯದ ರಿಟ್ ಪಿಟಿಷನ್ ಸಂಖ್ಯೆ : 27674/2012 , ದಿನಾಂಕ : 21-06-2016ರಲ್ಲಿನ 2 ನೇ ನಿರ್ದೇಶನದನ್ವಯ ದಿನಾಂಕ : 25-01-2019ರಂದು ಸದರಿ ಅಂತಿಮ ಆಯ್ಕೆಪಟ್ಟಿಯನ್ನು ಪರಿಷ್ಕೃತಗೊಳಿಸಲಾಗಿ 3 ನೇ ನಿರ್ದೇಶನದನ್ವಯ ದಿನಾಂಕ : 22-08-2019ರಂದು ಸದರಿ ಆಯ್ಕೆಪಟ್ಟಿಯನ್ನು ಮರುಪರಿಷ್ಕೃತಗೊಳಿಸಿ ಪ್ರಕಟಿಸಲಾಗಿತ್ತು . ಪ್ರಸ್ತುತ ಕೆಲವು ಅಭ್ಯರ್ಥಿಗಳು ಆಯೋಗವು ಪ್ರಕಟಿಸಿದ ದಿನಾಂಕ : 22-08-2019ರ ಆಯ್ಕೆಪಟ್ಟಿಯ ವಿರುದ್ಧ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನಾ ಅರ್ಜಿ C.C.C.Nos . 1765/2019 , 1785/2019 , 1790/2019 ಮತ್ತು 28 / 2020 ಗಳನ್ನು ಸಲ್ಲಿಸಲಾಗಿ , ಸದರಿ ಅರ್ಜಿಗಳಲ್ಲಿನ ದಿನಾಂಕ : 04-12-2020ರ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದನ್ವಯ ಆಯೋಗವು ರಿಟ್ ಪಿಟಿಷನ್ ಸಂಖ್ಯೆ : 27674 / 2012 ರಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ದಿನಾಂಕ : 21-06-2016ರ 3 ನೇ ನಿರ್ದೇಶನದನ್ವಯ ದಿನಾಂಕ : 30-01-2021ರಂದು ಪರಿಷ್ಕೃತ ಆಯ್ಕೆಪಟ್ಟಿಯನ್ನು ಆಯೋಗದ ವೆಬ್‌ಸೈಟ್ http://kpsc.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ .
1998ರ ಗೆಜೆಟೆಡ್ ಪ್ರೊಬೇಷನರ್ ಹುದ್ದೆಯ ಪರಿಷ್ಕೃತ ಆಯ್ಕೆಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ. 👇
Comments
Post a Comment