ಫೆ. 22ರಿಂದ 6-8 ತರಗತಿಗಳಿಗೆ ಪೂರ್ಣ ಶಾಲೆ ಆರಂಭ -ಶಿಕ್ಷಣ ಸಚಿವರಿಂದ ಸುದ್ದಿ ಗೋಷ್ಠಿ
ಫೆಬ್ರವರಿ 22 ರಿಂದ 6 ರಿಂದ 8 ನೇ ತರಗತಿವರೆಗೆ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸುವುದಕ್ಕೆ ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ . ರಾಜ್ಯದಲ್ಲಿ ಪೂರ್ಣ ಪ್ರಮಾಣದ ಶಾಲೆ ಆರಂಭಿಸುವ ವಿಚಾರವಾಗಿ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ವಿಧಾನಸೌಧದಲ್ಲಿ ನಡೆದ ಬಳಿಕ ಮಾಧ್ಯಮಗಳಿಗೆ ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದರು . ಇದೇ ವೇಳೆ ಅವರು ಮಾತನಾಡುತ್ತ , 9,10 ಹಾಗು ಪಿಯು ತರಗತಿಯ ಹಾಜರಾತಿ ಉತ್ತಮವಾಗಿತ್ತು , ನಾವು ವಿದ್ಯಾರ್ಥಿಗಳು ಕಡ್ಡಾಯವಾಗಿ ಬರಬೇಕು ಅಂಥ ಕೂಡ ಹೇಳಿರಲಿಲ್ಲ . ಈ ನಡುವಿನಲ್ಲೂ ಕೂಡ ವಿದ್ಯಾರ್ಥಿಗಳಿಂದ ಹಾಗೂ ಅವರ ಪೋಶಕರ ಕಡೆಯಿಂದ ಉತ್ತಮ ಸ್ಪಂದನೆ ಕಂಡು ಬಂದಿದೆ ಅಂತ ಹೇಳಿದರು . ವಿದ್ಯಾಗಮದ ಫಲಿತಾಂಶಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗುವುದು ಅಂತ ಇದೇ ವೇಳೆ ಅವರು ಹೇಳಿದರು . 1 ರಿಂದ 8 ನೇ ತರಗತಿಯ ಶಾಲೆಗಳನ್ನು ಆರಂಭಿಸಲು ಪೋಷಕರು ಸರ್ಕಾರವನ್ನು ಒತ್ತಾಯ ಮಾಡಿದ್ದರು , ಇದಲ್ಲದೇ 5 ಬಾರಿ ಆರೋಗ್ಯ ಇಲಾಖೆಯ ಅಧಿಕಾರಗಳ ಜೊತೆಗೆ ಹಾಗೂ ಟಾಸ್ಕ್ ಫೋರ್ಸ್ ಜೊತೆಗೆ ಸಭೆ ನಡೆಸಿ ಸಾಧಕ - ಭಾದಕಗಳ ಬಗ್ಗೆ ಚರ್ಚೆ ನಡೆಸಲಾಯಿತು . ಶಾಲೆ ಆರಂಭಿಸದ ಹಿನ್ನಲೆಯಲ್ಲಿ ಯಾವ ಪರಿಣಾಮವನ್ನು ಬೀರಲಿದೆ ಎನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿ ಅಜೀಂ ಪ್ರೇಮ್‌ಜಿ ವಿವಿ ದೇಶದ ವಿವಿಧ ಕಡೆಗಳಲ್ಲಿ ಸರ್ವೆ ಕಾರ್ಯವನ್ನು ನಡೆಸಿದ್ದು , ಈ ವೇಳೆಯಲ್ಲಿ ಆಘಾತಕಾರಿಮಾಹಿತಿಯೊಂದು ಸಿಕ್ಕಿದ್ದು , ಶೇ 90 ಮಕ್ಕಳು ವಿದ್ಯಾಭ್ಯಾಸವನ್ನೇ ಮರೆತಿದ್ದಾರೆ ಅಂತ ಹೇಳಿದರು . ಇನ್ನೂ ಕೇರಳ ಭಾಗದಿಂದ ಬರುವ ಮಕ್ಕಳಿಗೆ ಶಿಕ್ಷಕರಿಗೆ ಕರೋನ ವರದಿ ಇರೋದು ಕಡ್ಡಾಯವಾಗಿದೆ ಅಂತ ಅವರು ಇದೇ ವೇಳೆ ಹೇಳಿದರು . ವರದಿಯಲ್ಲಿ ನೆಗೆಟಿವ್ ಇದ್ದರೆ ಮಾತ್ರ ಇವರಿಗೆ ತರಗತಿಗೆ ಬರಲು ಅವಕಾಶ ನೀಡಲಾಗಿವುದು . ಇನ್ನೂ ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸುವಂತೆ ಈಗಾಗಲೇ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ . ಮಕ್ಕಳು ಶಾಲೆಗೆ ಬರೋದು ಕಡ್ಡಾಯವಲ್ಲ , ಕೊಠಡಿಗಳ ಲಭ್ಯತೆಯನ್ನು ಆಧಾರಿಸಿ ಮುಂದಿನ ದಿನಗಳಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುವುದು , ಇದಲ್ಲದೇ ಎಲ್ಲಾ ಜಿಲ್ಲೆಗಳ ಹಾಸ್ಟೆಲ್‌ಗಳನ್ನು ತೆರೆಯುವುಕ್ಕೆ ಆದೇಶ ಮಾಡಲಾಗಿದ್ದು , ಇದರಿಂದ ಮಕ್ಕಳಿಗೆ ಸಹಾಯವಾಗಲಿದೆ . ಶಾಲೆ ಆರಂಭವಾಗುವುದಕ್ಕೂ ಮುನ್ನ ಎಲ್ಲಾ ಜಿಲ್ಲೆಗಳ ಡಿಸಿಗಳ ಜೊತೆಗೆ ವಿಡಿಯೋ ಕಾನ್ಸೆರೆನ್ಸ್ ಮೂಲಕ ಮಾತನಾಡಲಾಗುವುದು ಇದಲ್ಲದೇ 1 ರಿಂದ 5 ನೇ ತರಗತಿಗಳನ್ನು ವಿದ್ಯಾಗಮನ ಮೂಲಕ ಶುರು ಮಾಡಲಾಗುವುದು ತದನಂತರ ಮುಂಬರುವ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಅಂತ ಹೇಳಿದರು .

Comments
Post a Comment