Skip to main content

Posts

Showing posts from February, 2021

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಶೇ. 10% ರಿಯಾಯಿತಿ ದರದಲ್ಲಿ ಇಲಾಖಾ ಪರೀಕ್ಷೆಗಳಿಗಾಗಿ ವಿಷಯ ತಜ್ಞರಾದ ಶ್ರೀ ಲ. ರಾಘವೇಂದ್ರರವರು ರಚಿಸಿರುವ ಪುಸ್ತಕಗಳು ಲಭ್ಯ.

ಇಲಾಖಾ ಪರೀಕ್ಷೆಗಳಿಗಾಗಿ ವಿಷಯ ತಜ್ಞರಾದ ಶ್ರೀ ಲ. ರಾಘವೇಂದ್ರರವರು ರಚಿಸಿರುವ ಪುಸ್ತಕಗಳು ಲಭ್ಯ.  ಜನರಲ್ ಲಾ ಭಾಗ - 1 ಜನರಲ್ ಲಾ ಭಾಗ -2 ಅಕೌಂಟ್ಸ್ ಹೈಯರ್ / ಲೋಯರ್/ ಎಸ್.ಎ.ಎಸ್. / ಟ್ರಜರಿ ಅಕೌಂಟ್ಸ್ ಪರೀಕ್ಷಾ ಕೈಪಿಡಿ ರೆವಿನ್ಯೂ ಹೈಯರ್ ಭಾಗ 1 & 2 KSGEA NEWS ನಲ್ಲಿ ಲಭ್ಯವಿದ್ದು,   Online ಮೂಲಕ 🏪 Order  ಮಾಡಿ, Phonepe/ Google Pay ಮೂಲಕ ಸದರಿ ಪುಸ್ತಕದ ಬೆಲೆ ಅನ್ನು *9902135813* ಗೆ ಪಾವತಿಸಿ, ಹಣ ಪಾವತಿಯ *Screen Shot* ನೊಂದಿಗೆ ನಿಮ್ಮ ಪೂರ್ಣ ಹೆಸರು ಹಾಗೂ ಅಂಚೆಯ ವಿಳಾಸವನ್ನು ಕಳುಹಿಸಿ ಕೊಟ್ಟ 4-6 ದಿನಗಳಲ್ಲಿ ‌ತಮಗೆ‌ ಭಾರತೀಯ ಅಂಚೆ ಮೂಲಕ‌ ಅಧ್ಯಯನ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಗುತ್ತದೆ. 👇🏻 https://mydukaan.io/ksgeanews

ಸರ್ಕಾರಿ ನೌಕರರು ನೆಮ್ಮದಿಯಿಂದ ಕೆಲಸ ಮಾಡುವಂತಾಗಲು ಸುಳ್ಳು ಮೂಗರ್ಜಿಗಳಿಗೆ ಕಡಿವಾಣ-ಸಿ.ಎಸ್. ಷಡಾಕ್ಷರಿ

 ಸರ್ಕಾರಿ ನೌಕರರು ನೆಮ್ಮದಿಯಿಂದ ಕೆಲಸ ಮಾಡುವಂತಾಗಲು ಸುಳ್ಳು ಮೂಗರ್ಜಿಗಳಿಗೆ ಕಡಿವಾಣ-ಸಿ.ಎಸ್. ಷಡಾಕ್ಷರಿ ಸಂಘದ ಮನವಿಯಂತೆ ಮೂಗರ್ಜಿಗಳ ಆಧಾರದ ಮೇಲೆ ತನಿಖೆ ಮಾಡದಂತೆ ದಿನಾಂಕ:03-10-2019 ರಂದು ಸರ್ಕಾರವು ಆದೇಶ ಹೊರಡಿಸಿತ್ತು. ಈ ಆದೇಶದ ಕಂಡಿಕೆ-4ರಲ್ಲಿ ಪೂರ್ಣ ಹೆಸರು/ವಿಳಾಸವಿರುವ ದೂರುಗಳನ್ನು ತನಿಖೆಗೆ/ವಿಚಾರಣೆಗೆ ಪರಿಗಣಿಸುವಂತೆ ಸೂಚಿಸಲಾಗಿದೆ. ಸುಳ್ಳು ಹೆಸರು/ವಿಳಾಸವನ್ನು ನೀಡಿ ದೂರು ದಾಖಲಿಸುವ ಮೂಲಕ ಸರ್ಕಾರಿ ನೌಕರರಿಗೆ ಅನಗತ್ಯ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಸಂಘವು ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿತ್ತು.  ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಸದರಿ ಸುತ್ತೋಲೆಯನ್ನು ಮಾರ್ಪಡಿಸಿ ದೂರು ನೀಡಿರುವ ವ್ಯಕ್ತಿಯ ಹೆಸರು ಮತ್ತು ಹೆಸರನ್ನು ಖಚಿತಪಡಿಸಿಕೊಂಡು , ದೂರುದಾರರು ಅಗತ್ಯ / ಪೂರಕ ಒದಗಿಸಿದ ನಂತರ ಅರೋಪವು ಮೇಲ್ನೋಟಕ್ಕೆ ಕಂಟುಬಂದಲ್ಲಿ ಮಾತ್ರ ತನಿಖೆ / ವಿಚಾರಣೆಗೆ ಪರಿಗಣಿಸುವಂತೆ ಮಾನ್ಯ ಮುಖ್ಯ ಮಂತ್ರಿಗಳು ನಿರ್ದೇಶನ ನೀಡಿರುತ್ತಾರೆ . ಇದರಿಂದಾಗಿ ಸರ್ಕಾರಿ ನೌಕರರು ನಿರ್ಭೀತಿಯಿಂದ ನೆಮ್ಮದಿಯಿಂದ ಕೆಲಸ ನಿರ್ವಹಿಸಬಹುದಾಗಿದೆ.

2021-22ನೇ ಸಾಲಿನ ಆಯ-ವ್ಯಯ ಮಂಡನೆ ಪೂರ್ವಭಾವಿ ಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಿ.ಎಸ್. ಯಡಿಯೂರಪ್ಪರವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸಲ್ಲಿಸಲ್ಪಟ್ಟ ಬೇಡಿಕೆಗಳ ಮನವಿ.

2021-22ನೇ ಸಾಲಿನ ಆಯ-ವ್ಯಯ ಮಂಡನೆ ಪೂರ್ವಭಾವಿ ಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಿ.ಎಸ್. ಯಡಿಯೂರಪ್ಪರವರಿಗೆ ಕರ್ನಾಟಕ ರಾಜ್ಯ ಸರ್ಕಾರಿ‌ ನೌಕರರ ಸಂಘದ ವತಿಯಿಂದ ಸಲ್ಲಿಸಲ್ಪಟ್ಟ ಬೇಡಿಕೆಗಳ ಮನವಿ. 2021-22ನೇ ಸಾಲಿನ ಆಯ-ವ್ಯಯ ಮಂಡನೆ ಪೂರ್ವದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುವ ಸಂಪ್ರದಾಯದಂತೆ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಿ.ಎಸ್. ಯಡಿಯೂರಪ್ಪರವರು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನಿಯೋಗವನ್ನು ಚರ್ಚೆಗೆ ಆಹ್ವಾನಿಸಿದ್ದರು.  ಈ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಈ ಕೆಳಕಂಡ ಬೇಡಿಕೆಗಳ ಮನವಿಯನ್ನು ಸಲ್ಲಿಸಿ, ಈಡೇರಿಸುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. • ಮೈಸೂರು ಆಡಳಿತ ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ವಿಭಾಗಗಳಲ್ಲಿ ವಸತಿ ಸಹಿತ ಸರ್ಕಾರಿ ನೌಕರರ ತರಬೇತಿ  ಕೇಂದ್ರಗಳನ್ನು ಸ್ಥಾಪಿಸುವುದು. • ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ವಸತಿ ಗೃಹ ನಿರ್ಮಾಣ/ ನಿರ್ವಹಣೆಗೆ ಅನುದಾನ ಮಂಜೂರು ಮಾಡುವುದು. • ಜಿಲ್ಲಾ-ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣ ಹಾಗೂ ನಿರ್ವಹಣೆಗೆ  ಅನುದಾನ ಮಂಜೂರು ಮಾಡುವುದು. • ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕ0ತಿಕ ಹಾಗೂ ಇನ್ನಿತರ ಸಂಘದ ಕಾರ್ಯಕ್ರಮ/ನಿರ್ವಹಣೆ ಉದ್ದೇಶಕ್ಕೆ ಸಹಾಯಾನುದಾನ ಮಂಜ...

ಕರ್ನಾಟಕ ರಾಜ್ಯ ನಾಗರೀಕ ಸೇವಾ(ನಡತೆ) ನಿಯಮಗಳು-2021

ಕರ್ನಾಟಕ ರಾಜ್ಯ ನಾಗರಿಕ ಸೇವಾ ( ನಡತೆ ) ನಿಯಮಗಳು , 2021 KARNATAKA STATE CIVIL SERVICE ( CONDUCT ) RULES , 2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಸೂಚನೆ ಸಂಖ್ಯೆ : ಸಿಆಸುಇ 12 ಸೇನಿಸಿ 2019 , ಬೆಂಗಳೂರು , ದಿನಾಂಕ : 07.01.2021 ರಂದು  ಕರ್ನಾಟಕ ರಾಜ್ಯ ನಾಗರಿಕ ಸೇವಾ ( ನಡತೆ ) ನಿಯಮಗಳು , 2021ಗಳನ್ನು ಆದೇಶಿದೆ. ಪೂರ್ಣ ಆದೇಶ ಪ್ರತಿ ಗಾಗಿ ಇಲ್ಲಿ ಕ್ಲಿಕ್ ಮಾಡಿ ಪಿಡಿಎಫ್ ಫೈಲ್ ಪಡೆಯಿರಿ  ಕರ್ನಾಟಕ ರಾಜ್ಯ ನಾಗರಿಕ ಸೇವಾ ( ನಡತೆ ) ನಿಯಮಗಳು , 2021 ಈ ಹಿಂದೆ ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿರುವ ಅಂಶಗಳು ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರ ವ್ಯಾಪಾರ, ವ್ಯವಹಾರಗಳಿಗಳಿಗೂ ಪ್ರತಿಕೂಲ ಪರಿಣಾಮ ಬೀರುವಂತಿದ್ದು, ಈ  ಕರಡು ನಿಯಮಗಳನ್ನು ಜಾರಿಗೆ ತಂದಲ್ಲಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರ ಅಭಿವ್ಯಕ್ತಿ ಸ್ವಾತಂತ್ರವನ್ನು ಹರಣ ಮಾಡಿದಂತಾಗಲಿದೆ ಅಲ್ಲದೆ  ಭಾರತದ ಸಂವಿಧಾನದಲ್ಲಿ ಈ ದೇಶದ ನಾಗರೀಕರಿಗೆ ನೀಡಿರುವಂತಹ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವಂತಿರುವ ಈ ನಿಯಮಗಳ ಬಗ್ಗೆ ರಾಜ್ಯಾದ್ಯಂತ ನೌಕರರು ತೀವ್ರ ಪ್ರತಿರೋಧ ವ್ಯಕ್ತಪಡಿಸಿರುತ್ತಾರೆ. ಈ ಸಂಬಂಧ ಸರ್ಕಾರಕ್ಕೆ ಅವಶ್ಯ ಮಾರ್ಗದರ್ಶನ ನೀಡುವಂತೆ ಸಂಘಕ್ಕೆ ಒತ್ತಾಯ ತಂದಿರುತ್ತಾರೆ. ಈ ಸಂಬಂಧವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಸಂಘದ ವತಿಯಿಂದ ಸರ...

01.04.2006 ತದನಂತರದಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳ ಪ್ರಕರಣಗಳಲ್ಲಿ ಹಿಂದಿನ ಡಿಫೈನ್ಸ್ ಪಿಂಚಣಿಯ ಸೌಲಭ್ಯವನ್ನು ಪರಿಗಣಿಸುವ ಬಗ್ಗೆ

 01.04.2006 ತದನಂತರದಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳ ಪ್ರಕರಣಗಳಲ್ಲಿ ಹಿಂದಿನ ಡಿಫೈನ್ಸ್ ಪಿಂಚಣಿಯ ಸೌಲಭ್ಯವನ್ನು ಪರಿಗಣಿಸುವ ಬಗ್ಗೆ ದಿನಾಂಕ : 01.04.2006 ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಯಡಿ ಯಲ್ಲಿನ ಹುದ್ದೆಗಳ ಸಂಬಂಧದಲ್ಲಿ ಆಯ್ಕೆ ಮತ್ತು ನೇಮಕಾತಿಗಳು ನಡೆದಿದ್ದು , ಆದರೆ ಸದರಿ ದಿನಾಂಕದ ತದನಂತರದಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳ ಪ್ರಕರಣಗಳಲ್ಲಿ ಹಿಂದಿನ ಡಿಫೈನ್ಸ್ ಪಿಂಚಣಿಯ ಸೌಲಭ್ಯವನ್ನು ಪರಿಗಣಿಸುವ ಬಗ್ಗೆ. PDF Order file 

ಖಜಾನೆ -2 ರಲ್ಲಿ ಹಣಕಾಸಿನ ವಹಿವಾಟು ಹಾಗೂ ಲೆಕ್ಕಗಳ ನಿರ್ವಹಣೆ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಂಘದ‌ ಸಭೆ.

 ಖಜಾನೆ -2 ರಲ್ಲಿ ಹಣಕಾಸಿನ ವಹಿವಾಟು ಹಾಗೂ ಲೆಕ್ಕಗಳ ನಿರ್ವಹಣೆ ಬಗ್ಗೆ  ಆರ್ಥಿಕ ಇಲಾಖೆಯೊಂದಿಗೆ ಸಂಘದ‌ ಸಭೆ. ಖಜಾನೆ -2 ರಲ್ಲಿ ಹಣಕಾಸಿನ ವಹಿವಾಟು ಹಾಗೂ ಲೆಕ್ಕಗಳ ನಿರ್ವಹಣೆ ಬಗ್ಗೆ ಇಂದು ನಡೆದ ಆರ್ಥಿಕ ಇಲಾಖೆಯ ಸಭೆಯಲ್ಲಿ ಸಂಘದ ಮನವಿಗೆ ಈ ಕೆಳಗಿನ ಅಂಶಗಳಿಗೆ ಒಪ್ಪಿಗೆ ಸೂಚಿಸಿರುತ್ತಾರೆ .  1.ಈ ಸಭೆಯಲ್ಲಿ ವೇತನಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ರಾಜ್ಯಲೆಕ್ಕ ಶೀರ್ಷಿಕೆ ಗಳನ್ನು ವಿಲೀನಗೊಳಿಸುವ ಮೂಲಕ ಎಲ್ಲಾ ಇಲಾಖೆಗಳಿಗೆ ಅನುದಾನವನ್ನು ಒಮ್ಮೆಲೆ ನೀಡುವುದು . ಇದರಿಂದಾಗಿ ವೇತನ ಪಾವತಿಸುವಲ್ಲಿ ಉಂಟಾಗಲಿರುವ ವಿಳಂಬ ತಪ್ಪಲಿದೆ .  2.ಖಜಾನೆ ಆವೃತ್ತಿಯಲ್ಲಿ ಬರುವ ಸಾಫ್ಟ್ ವೇರ್ ನಲ್ಲಿ - ಸಿಸಿಓಗಳಿಗೆಅನುದಾನ ಕೋರಲು ಆನ್‌ಲೈನ್‌ಲ್ಲಿ ಅವಕಾಶ ನೀಡಲು ಒಪ್ಪಿಗೆ ಸೂಚಿಸಿರುತ್ತಾರೆ .  3.ಇನ್ನುಳಿದಂತೆ ಹೆಚ್.ಆರ್.ಎಂ.ಎಸ್ / ಖಜಾನೆ -2 ಸಮಸ್ಯೆಗಳನ್ನು ಇತ್ಯರ್ಥಪಡಿ ಸಲು ಖಜಾನೆ ಆಯುಕ್ತರ ನೇತೃತ್ವದಲ್ಲಿ ಶುಕ್ರವಾರ ಸಭೆ ಏರ್ಪಡಿಸಲಾಗಿದೆ .

📚 All New Edition Departmental Exams & Service Matter books are available now. 📖

 📚 All New Edition Departmental Exams & Service Matter books are available now. 📖 KSGEA NEWS is now Online 🏪 Order 24x7 - Click on the link to place an order https://d-ksgeanews.dotpe.in Pay using Gpay, Paytm, Phonepe and 150  UPI Apps or Cash

ಫೆ. 22ರಿಂದ 6-8 ತರಗತಿಗಳಿಗೆ ಪೂರ್ಣ ಶಾಲೆ ಆರಂಭ -ಶಿಕ್ಷಣ ಸಚಿವರಿಂದ ಸುದ್ದಿ ಗೋಷ್ಠಿ

 ಫೆ. 22ರಿಂದ 6-8 ತರಗತಿಗಳಿಗೆ ಪೂರ್ಣ ಶಾಲೆ ಆರಂಭ -ಶಿಕ್ಷಣ ಸಚಿವರಿಂದ ಸುದ್ದಿ ಗೋಷ್ಠಿ  ಫೆಬ್ರವರಿ 22 ರಿಂದ 6 ರಿಂದ 8 ನೇ ತರಗತಿವರೆಗೆ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸುವುದಕ್ಕೆ ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ . ರಾಜ್ಯದಲ್ಲಿ ಪೂರ್ಣ ಪ್ರಮಾಣದ ಶಾಲೆ ಆರಂಭಿಸುವ ವಿಚಾರವಾಗಿ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ವಿಧಾನಸೌಧದಲ್ಲಿ ನಡೆದ ಬಳಿಕ ಮಾಧ್ಯಮಗಳಿಗೆ ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದರು . ಇದೇ ವೇಳೆ ಅವರು ಮಾತನಾಡುತ್ತ , 9,10 ಹಾಗು ಪಿಯು ತರಗತಿಯ ಹಾಜರಾತಿ ಉತ್ತಮವಾಗಿತ್ತು , ನಾವು ವಿದ್ಯಾರ್ಥಿಗಳು ಕಡ್ಡಾಯವಾಗಿ ಬರಬೇಕು ಅಂಥ ಕೂಡ ಹೇಳಿರಲಿಲ್ಲ . ಈ ನಡುವಿನಲ್ಲೂ ಕೂಡ ವಿದ್ಯಾರ್ಥಿಗಳಿಂದ ಹಾಗೂ ಅವರ ಪೋಶಕರ ಕಡೆಯಿಂದ ಉತ್ತಮ ಸ್ಪಂದನೆ ಕಂಡು ಬಂದಿದೆ ಅಂತ ಹೇಳಿದರು . ವಿದ್ಯಾಗಮದ ಫಲಿತಾಂಶಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗುವುದು ಅಂತ ಇದೇ ವೇಳೆ ಅವರು ಹೇಳಿದರು . 1 ರಿಂದ 8 ನೇ ತರಗತಿಯ ಶಾಲೆಗಳನ್ನು ಆರಂಭಿಸಲು ಪೋಷಕರು ಸರ್ಕಾರವನ್ನು ಒತ್ತಾಯ ಮಾಡಿದ್ದರು , ಇದಲ್ಲದೇ 5 ಬಾರಿ ಆರೋಗ್ಯ ಇಲಾಖೆಯ ಅಧಿಕಾರಗಳ ಜೊತೆಗೆ ಹಾಗೂ ಟಾಸ್ಕ್ ಫೋರ್ಸ್ ಜೊತೆಗೆ ಸಭೆ ನಡೆಸಿ ಸಾಧಕ - ಭಾದಕಗಳ ಬಗ್ಗೆ ಚರ್ಚೆ ನಡೆಸಲಾಯಿತು . ಶಾಲೆ ಆರಂಭಿಸದ ಹಿನ್ನಲೆಯಲ್ಲಿ ಯಾವ ಪರಿಣಾಮವನ್ನು ಬೀರಲಿದೆ ಎನ್ನುವುದನ್ನ...

ಉದ್ಘಾಟನಾ ಸಮಾರಂಭ:- ಬೆಂಗಳೂರು ನಗರ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು 2020-21

ಬೆಂಗಳೂರು ನಗರ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು 2020-21 ದಿನಾಂಕ : 11 , 12 ನೇ ಫೆಬ್ರವರಿ , 2021 ಉದ್ಘಾಟನಾ ಸಮಾರಂಭ @KSGEA NEWS ON 11-02-2021 @ 10:30AM ಕಂಠೀರವ ಹೊರಾಂಗಣ ಕ್ರೀಡಾಂಗಣ

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers