ರಾಜ್ಯದ ಸಮಸ್ತ ಸರ್ಕಾರಿ ನೌಕರ ಬಂಧುಗಳಿಗೆ ಪ್ರಥಮ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯ ಶುಭಾಶಯಗಳು- ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು, ಕ.ರಾ.ಸ. ನೌಕರರ ಸಂಘ.
ರಾಜ್ಯದ ಸಮಸ್ತ ಸರ್ಕಾರಿ ನೌಕರ ಬಂಧುಗಳಿಗೆ ಪ್ರಥಮ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯ ಶುಭಾಶಯಗಳು
ನೌಕರರ ದಿನಾಚರಣೆ -2021
ದಿನಾಂಕ : 21 ಏಪ್ರಿಲ್ 2021 ಬುಧವಾರ ಸರ್ಕಾರದ ಎಲ್ಲಾ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತರುವಲ್ಲಿ ಅಹರ್ನಿಶಿ ದುಡಿಯುತ್ತಿರುವ ನಮಗಾಗಿ ಕೂಡ ವರ್ಷದಲ್ಲಿ ಒಂದು ದಿನ ಸಮಾಜ ಸರಿಯಾದ ದಿಕ್ಕಿನಲ್ಲಿ ಯೋಚಿಸುವಂತೆ ಮಾಡಲು ಹಾಗೂ ವಿವಿಧ ಇಲಾಖೆ ಹಾಗೂ ವೃಂದಗಳಲ್ಲಿ ಕೆಲಸ ನಿರ್ವಹಿಸುವ ನಾವೆಲ್ಲರೂ ಒಂದೇ ಎಂಬ ತತ್ವದಡಿ ಒಗ್ಗೂಡಿ ನಮ್ಮಲ್ಲಿನ ಸೃಜನಶೀಲತೆಯನ್ನು ಅಭಿವ್ಯಕ್ತಿಸಲು ನಮಗೊಂದು ದಿನಾಚರಣೆಯ ಅಗತ್ಯವಿತ್ತು . ಆ ಕನಸನ್ನು ನನಸಾಗಿಸಲು ನಮ್ಮ ಇಂದಿನ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್ . ಷಡಾಕ್ಷರಿಯವರು ತಮ್ಮ ತಂಡದೊಂದಿಗೆ ನಿರಂತರವಾಗಿ ಸರ್ಕಾರದ ಜೊತೆ ಹೋರಾಟ ನಡೆಸಿದ ಫಲವಾಗಿ ಪ್ರತಿವರ್ಷದ ಏಪ್ರಿಲ್ 21 ನ್ನು ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಾಗಿ ಆಚರಿಸಲು ಕರ್ನಾಟಕ ಘನ ಸರ್ಕಾರವು ಆದೇಶಿಸಿರುತ್ತದೆ . ಈ ಕಾರ್ಯ ಕೈಗೂಡಲು ಮುಖ್ಯವಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರ ಸದಾಶಯದ ಮನೋಭಾವ ಕಾರಣವಾಗಿದ್ದು , ಅವರಿಗೆ ನಮ್ಮೆಲ್ಲರ ಗೌರವಪೂರ್ವಕ ಕೃತಜ್ಞತೆಗಳು , ಹಾಗೇಯೇ ಈ ಆದೇಶ ಜಾರಿಗೆ ಬರಲು ಸಹಕರಿಸಿದ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಂಬಂಧಿಸಿದ ಎಲ್ಲಾ ಅಧಿಕಾರಿ - ನೌಕರ ಮಿತ್ರರಿಗೂ ವಂದನೆಗಳು . ವಿಶೇಷ ಸೂಚನೆ ಪ್ರಸ್ತುತ ಸರ್ಕಾರದ ಕೋವಿಡ್ ನಿಯಮಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದ್ದು , ಈ ದಿನಾಚರಣೆಯನ್ನು ಮುಂದಿನ ದಿನಗಳಲ್ಲಿ ಆಚರಿಸೋಣ ಎಂದು ಆಶಿಸುತ್ತೇವೆ .
- ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು,
ಶ್ರೀ ಜಗದೀಶ ಗೌಡಪ್ಪ ಪಾಟೀಲ, ಮಹಾ ಪ್ರಧಾನ ಕಾರ್ಯದರ್ಶಿ,
ಆರ್ . ಶ್ರೀನಿವಾಸ್, ರಾಜ್ಯ ಖಜಾಂಚಿ,
ವಿ.ವಿ. ಶಿವರುದ್ರಯ್ಯ,
ಗೌರವಾಧ್ಯಕ್ಷರು
Comments
Post a Comment