ರಾಜ್ಯ ಸರ್ಕಾರಿ ನೌಕರರು ಕೋವಿಡ್ -19 ಕಾಯಿಲೆಗೆ ಪಡೆದ ಚಿಕಿತ್ಸೆಯ ವೆಚ್ಚದ ಸಂಬಂಧದಲ್ಲಿ ಸಲ್ಲಿಸಿರುವ ಮರುಪಾವತಿಯ ಕ್ಲೈಮುಗಳನ್ನು ಇತ್ಯರ್ಥಪಡಿಸುವ ಬಗ್ಗೆ ಆದೇಶ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,
ರಾಜ್ಯ ಸರ್ಕಾರಿ ನೌಕರರು ಕೋವಿಡ್ -19 ಕಾಯಿಲೆಗೆ ಪಡೆದ ಚಿಕಿತ್ಸೆಯ ವೆಚ್ಚದ ಸಂಬಂಧದಲ್ಲಿ ಸಲ್ಲಿಸಿರುವ ಮರುಪಾವತಿಯ ಕ್ಲೈಮುಗಳನ್ನು ಇತ್ಯರ್ಥಪಡಿಸುವ ಬಗ್ಗೆ ಆದೇಶ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,
ಸರ್ಕಾರದ ಆದೇಶ ಸಂಖ್ಯೆ : DPAR / 15 / SMR / 2021 , ಬೆಂಗಳೂರು , ದಿನಾಂಕ : 01.04.2021 . ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಕೋವಿಡ್ ಪೀಡಿತ ಸರ್ಕಾರ್ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಪಡದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಸಂಬಂಧಿಸಿದಂತೆ , ಈ ಕೆಳಕಂಡಂತೆ ಕ್ರಮವಹಿಸಲು ಸೂಚಿಸಲಾಗಿದೆ : ಎ ) ಕೊವಿಡ್ ಚಿಕಿತ್ಸೆಗಾಗಿ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಗಾಗಿ ಭರಿಸಿರುವ ವೆಚ್ಚವನ್ನು ಮೇಲೆ ಓದಲಾದ ( 4 ) ರ ಅಧಿಸೂಚನೆಯ ಕ್ರಮ ಸಂಖ್ಯೆ : 2 ( ಬಿ ) ನಲ್ಲಿ ನಿಗದಿಪಡಿಸಲಾಗಿರುವ ಈ ಕೆಳಕಂಡ ಪ್ಯಾಕೇಜ್ ದರಗಳಂತೆ ಮರುಪಾವತಿಸಬಹುದಾಗಿದೆ . ಕ್ರಮ ಸಂಖ್ಯೆ ಚಿಕಿತ್ಸಾ ವಿಧಾನ 1 2 3 General Ward HDU Ward Isolation ICU without Ventilator Isolation ICU with Ventilator ಅರ್ಹ ಪ್ರಾಕೇಜ್ ಮೊತ್ತ ( ಪ್ರತಿ ದಿನಕ್ಕೆ ) ರೂ .10,000 / ರೂ .12,000 / ರೂ .15,000 / ರೂ .25,000 / 4 ಈ ಪ್ಯಾಕೇಜ್ ದರಗಳು Personal Protective Equipments ( PPES ) ಹಾಗೂ ಇತರೆ Consumable ಐಟಂಗಳನ್ನು ಕೂಡ ಒಳಗೊಂಡಿರುತ್ತವೆ . ಆಸ್ಪತ್ರೆಯು ನೀಡಿರುವ ಚಿಕಿತ್ಸೆಗೆ ವಿಧಿಸಿರುವ ದರವು ಮೇಲಿನ ಪ್ಯಾಕೇಜ್ ದರಕ್ಕಿಂತ ಕಡಿಮೆ ಇದ್ದಲ್ಲಿ , ಕಡಿಮೆ ಮೊತ್ತವನ್ನೇ ಮರುಪಾವತಿಸತಕ್ಕದ್ದು . ಬಿ ) ಕೋವಿಡ್ ಚಿಕಿತ್ಸೆಗಾಗಿ ವೈದ್ಯಕೀಯ ಮುಂಗಡ ಪಾವತಿಸಲು ಅವಕಾಶವಿರುವುದಿಲ್ಲ , ಸಿ ) ಉಲ್ಲೇಖ ( 4 ) ರ ಅಧಿಸೂಚನೆಯ ಕ್ರಮ ಸಂಖ್ಯೆ : ( 3 ) ( v ) ರಲ್ಲಿ ತಿಳಿಸಲಾಗಿರುವಂತೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಆರಂಭದಲ್ಲಿ ಕೋವಿಡ್ ಚಿಕಿತ್ಸೆಗಾಗಿ ದಾಖಲಾಗಿದ್ದು ಅಥವಾ ಬೇರೆ ಇತರೆ ಕಾರಣಕ್ಕಾಗಿ ದಾಖಲಾಗಿ ತರುವಾಯ ಕೋವಿಡ್ ಕಾಯಿಲೆಗೆ ಒಳಗಾದ ಸಂದರ್ಭಗಳಲ್ಲಿ - ಅನಿರೀಕ್ಷಿತ ಕ್ಲಿಷ್ಟಕರ ಚಿಕಿತ್ಸಾ ಸಂದರ್ಭಗಳು / ಶಸ್ತ್ರಚಿಕಿತ್ಸೆಗಳು / ಗರ್ಭಿಣಿಯರಿಗೆ ಸಂಬಂಧಿತ ಹಾಗೂ ಇನ್ನಿತರೆ ಸಹ ಅಸ್ವಸ್ಮ ಪರಿಸ್ಮಿತಿಗಳು ( other co - morbid conditions / ಮುಂತಾದ ಸಂದರ್ಭಗಳಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯವಾಗುವ ನಿಯಮಗಳಂತೆ ಮರುಪಾವತಿಸಬಹುದಾದ ವೈದ್ಯಕೀಯ ವೆಚ್ಚದ ಅರ್ಹತಾದಾಯಕ ಮೊತ್ತವನ್ನು SAST ಸಂಸ್ಥೆಯಿಂದ ಪಡೆದು ಮರುಪಾವತಿಸತಕ್ಕದ್ದು . ಡಿ ) ಇಂತಹ ಪ್ರಕರಣಗಳಲ್ಲಿ ನಿಯಮ ಸಡಿಲಿಸಿ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಅವಕಾಶವಿರುವುದಿಲ್ಲ , ಇ ) ಇಂತಹ ಪ್ರಕರಣಗಳನ್ನು ವಿಶೇಷ ಪಕರಣಗಳೆಂದು ಪರಿಗಣಿಸಲಾಗುವುದು . ಈ ಉದ್ದೇಶಕ್ಕಾಗಿ ಕೋವಿಡ್ ಚಿಕಿತ್ಸೆ ಒಳಗೊಂಡಿರುವ ಪ್ರಕರಣಗಳನ್ನು ಮಾನ್ಯತೆ ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸೆಯೆಂದು ಪರಿಭಾವಿಸತಕ್ಕದ್ದು ಹಾಗೂ ಜಾರಿಯಲ್ಲಿರುವ ಅಧಿಕಾರ ಪ್ರತ್ಯಾಯೋಜನೆಯಂತೆ ಮಂಜೂರಾತಿ ನೀಡತಕ್ಕದ್ದು . ಈ ಸಂಬಂಧ ಯಾವುದೇ ಸ್ಪಷ್ಟಿಕರಣದ ಅಗತ್ಯವಿದ್ದಲ್ಲಿ ಸಿ.ಆ.ಸು. ಇಲಾಖೆ ( ಸೇವಾ ನಿಯಮಗಳು ) ವಿಭಾಗದ ಅಭಿಪ್ರಾಯ ಪಡೆಯುವುದು .ಈ ಆದೇಶವನ್ನು ಆರ್ಥಿಕ ಇಲಾಖೆಯ ದಿನಾಂಕ : 26.03.2021 ರ ಟಿಪ್ಪಣಿ ಸಂಖ್ಯೆ : FD 82 Ser - 1 / 2021 ರಲ್ಲಿ ಅಭಿಪ್ರಾಯ / ಸಹಮತಿ ಪಡೆದು ಹೊರಡಿಸಲಾಗಿದೆ .
ಇದಕ್ಕಾಗಿ ಸನ್ಮಾನ ಮುಖ್ಯಮಂತ್ರಿಗಳಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ಸಂಘವು ಧನ್ಯವಾದಗಳನ್ನು ಸಲ್ಲಿಸುತ್ತದೆ. - ಸಿ.ಎಸ್. ಷಡಾಕ್ಷರಿ.
ಆದೇಶ ಪ್ರತಿ ಡೌನ್‌ಲೋಡ್ ಗಾಗಿ ಕ್ಲಿಕ್ ಮಾಡಿ
Comments
Post a Comment