ರಾಜ್ಯದಲ್ಲಿ ಕೋವಿಡ್ -19 2 ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಸ್.ಎ.ಎಸ್ . ಹಾಗೂ ಇತರೆ ಇಲಾಖಾ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡುವ ಬಗ್ಗೆ .
ರಾಜ್ಯದಲ್ಲಿ ಕೋವಿಡ್ -19 2 ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಸ್.ಎ.ಎಸ್ . ಹಾಗೂ ಇತರೆ ಇಲಾಖಾ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡುವ ಬಗ್ಗೆ .
ಉಲ್ಲೇಖ : ಯು.ಪಿ.ಎಸ್.ಸಿ ಪತ್ರಿಕಾ ಪ್ರಕಟಣೆ ದಿನಾಂಕ : 19-04-2021
ವಿಷಯಕ್ಕೆ ಸಂಬಂಧಿಸಿದಂತೆ , ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್ -19 ರ 2 ನೇ ಅಲೆಯು ಈ ಹಿಂದಿಗಿಂತಲೂ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ರಾತ್ರಿ ವೇಳೆ ಕರ್ಪ್ಯೂ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿರ್ಭಂದಿಸುವಂತೆ ಸೂಚಿಸಿರುವುದರಿಂದ ಹಾಗೂ ಈ ಕೆಳಕಂಡ ಕಾರಣಗಳಿಗಾಗಿ ದಿನಾಂಕ : 22-04-2021 ರಿಂದ ಪ್ರಾರಂಭವಾಗಲಿರುವ ಎಸ್.ಎ.ಎಸ್ . , ಟ್ರೆಜರಿ ಅಕೌಂಟ್ಸ್ ಹಾಗೂ ಇನ್ನಿತರೆ ಇಲಾಖಾ ಪರೀಕ್ಷೆಗಳನ್ನು ಮುಂದೂಡುವುದು ಅವಶ್ಯಕವಾಗಿರುತ್ತದೆ .
1. ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರು ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ನೌಕರರು ಸೋಂಕಿಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ .
2. ಯು.ಪಿಎಸ್.ಸಿ ವತಿಯಿಂದ ಆಯೋಜಿಸುವ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ .
3 , ಕೆ.ಎಸ್.ಆರ್.ಟಿ.ಸಿ ನೌಕರರು ಮುಷ್ಕರ ಹೂಡಿರುವುದರಿಂದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಪ್ರಯಾಣಿಸಲು ಬಸ್‌ಗಳ ಕೊರತೆಯ ಕಾರಣ ಪರೀಕ್ಷೆ ಬರೆಯಲು ಬರುವ ನೌಕರರು ತುಂಬಾ ತೊಂದರೆ ಅನುಭವಿಸಬೇಕಾಗಿರುತ್ತದೆ .
4. ಊಟ , ವಸತಿಯ ಸಮಸ್ಯೆಯನ್ನು ಎದುರಿಸಬೇಕಾಗಿರುತ್ತದೆ .
ಮೇಲಿನ ಅಂಶಗಳ ಹಿನ್ನೆಲೆಯಲ್ಲಿ , ಪರೀಕ್ಷೆಗೆ ಹಾಜರಾಗುವ ನೌಕರರಿಗೆ ತುಂಬಾ ಅನಾನುಕೂಲವಾಗಿರುವುದರಿಂದ ದಿನಾಂಕ : 22-04-2021 ರಿಂದ ಪ್ರಾರಂಭಗೊಳ್ಳಲಿರುವ ಎಸ್.ಎ.ಎಸ್ . , ಟ್ರೆಜರಿ ಅಕೌಂಟ್ಸ್ ಸೇರಿದಂತೆ ಇನ್ನಿತರೆ ಇಲಾಖಾ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಹಾಗೂ ಕೋವಿಡ್ -19 ರ 2 ನೇ ಅಲೆ ಸಹಜಸ್ಥಿತಿಗೆ ಬಂದ ನಂತರ ದಿನಾಂಕವನ್ನು ನಿಗದಿಪಡಿಸಲು ಕಾರ್ಯದರ್ಶಿಗಳು ಕೆ.ಪಿ.ಎಸ್.ಸಿ.ರವರಿಗೆ ಮನವಿಯನ್ನು ಶ್ರೀ ಸಿ.ಎಸ್.ಷಡಾಕ್ಷರಿರವರು ಸಲ್ಲಿಸಿದ್ದಾರೆ.
Comments
Post a Comment