ಆರೋಗ್ಯ ಇಲಾಖೆಯ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ನೇತೃತ್ವದ ಆರೋಗ್ಯ ಇಲಾಖೆಯ ನಿಯೋಗವು ಇಂದು ನಡೆದ ಸಭೆಯಲ್ಲಿ ಮಾನ್ಯ ಆರೋಗ್ಯ ಇಲಾಖೆ ಸಚಿವರ ಗಮನಕ್ಕೆ ತಂದು ಶೀಘ್ರವಾಗಿ ಈ ಸಮಸ್ಯಗಳ ಇತ್ಯರ್ಥಪಡಿಸುವಂತೆ ಮನವಿ ಮಾಡಿದರು.
ಆರೋಗ್ಯ ಇಲಾಖೆಯ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ನೇತೃತ್ವದ ಆರೋಗ್ಯ ಇಲಾಖೆಯ ನಿಯೋಗವು ಇಂದು ನಡೆದ ಸಭೆಯಲ್ಲಿ ಮಾನ್ಯ ಆರೋಗ್ಯ ಇಲಾಖೆ ಸಚಿವರ ಗಮನಕ್ಕೆ ತಂದು ಶೀಘ್ರವಾಗಿ ಈ ಸಮಸ್ಯಗಳ ಇತ್ಯರ್ಥಪಡಿಸುವಂತೆ ಮನವಿ ಮಾಡಿದರು.
ದಿನಾಂಕ:08-04-2021ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ರವರ ನಿಯೋಗವು ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾದ ಎ.ಪುಟ್ಟಸ್ವಾಮಿ ಮತ್ತು ಗೌರವಾಧ್ಯಕ್ಷರು ಹಾಗೂ ನೌಕರರ ಸಂಘದ ಖಜಾಂಚಿಗಳಾದ ಆರ್.ಶ್ರೀನಿವಾಸ್‍ರವರುಗಳು ಇಲಾಖೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮ.ಸ. ನಂಜುಡಸ್ವಾಮಿರವರು ಮತ್ತು ನೌಕರರ ಕೇಂದ್ರ ಸಂಘದ ಉಪಾಧ್ಯಕ್ಷರು ಮತ್ತು ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಎಂ ಬಳ್ಳಾರಿ, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷರಾದ ಮೋಹನ್ ಕುಮಾರ್, ಪ್ರಕಾಶ್ ಗಿಡ್ಡೆ ಆರೋಗ್ಯ ಇಲಾಖೆ ಬೈಲಾ ಸಮಿತಿ ಅಧ್ಯಕ್ಷರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಸೇವೆಗಳ ಇಲಾಖಾ ನೌಕರರ ಬೇಡಿಕೆಗಳ ಬಗ್ಗೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರೊಂದಿಗೆ ವಿಕಾಸಸೌಧದಲ್ಲಿ ನೌಕರರ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ನಡೆಸಲಾಯಿತು. ಮಾನ್ಯ ಸಚಿವರು ಈ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಸಕರಾತ್ಮಕವಾಗಿ ಸ್ಪಂದಿಸಿದರು.
ಸಭೆಯಲ್ಲಿ ಚರ್ಚಿಸಲಾದ ವಿಷಯಗಳು
1. ನೆರೆ-ಹೊರೆ ರಾಜ್ಯಗಳ ಮಾದರಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿಲೀನಗೊಳಿಸುವುದು.
2. ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವುದು.
3. ಇಲಾಖಾ ಪದೋನ್ನತಿ ಸಮಿತಿ ರಚಿಸಿ, ಅರ್ಹ ನೌಕರರಿಗೆ ಸೇವಾ ಜೇಷ್ಠತೆ ಅನ್ವಯ ಬಡ್ತಿ ಅವಕಾಶ ಕಲ್ಪಿಸುವುದು
4. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯರಿಗೆ ನೀಡುತ್ತಿರುವ ವಿಶೇಷ ಭತ್ಯೆಯನ್ನು ಇಲಾಖೆಯ ಇತರೆ ಸಿಬ್ಬಂದಿಗಳಿಗೂ ಮಂಜೂರು ಮಾಡುವುದು.
5. ಕೋವಿಡ್-19ರ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಕೋವಿಡ್ ಭತ್ಯೆ ನೀಡುವ ಬಗ್ಗೆ.
6. ಖಾಲಿ ಇರುವ ಎಲ್ಲಾ ವೃಂದಗಳ ಹುದ್ದೆಗಳನ್ನು ಭರ್ತಿ ಮಾಡುವುದು.
7. ಬಯೋಮೆಟ್ರಿಕ್ ಹಾಜರಾತಿಯಿಂದ ವಿನಾಯಿತಿ ನೀಡುವ ಬಗ್ಗೆ:
8. ಧೀರ್ಘಾವಧಿಯಿಂದ ಬಾಕಿಯಿರುವ ಇಲಾಖಾ ವಿಚಾರಣೆ ಕತಡಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದು.
9. ಅಮಾನತ್ತು ಪ್ರಸ್ತಾವನೆಗಳನ್ನು ಶೀಘ್ರ ಇತ್ಯರ್ಥಗೊಳಿಸುವುದು
10. ನೌಕರರ ಸೇವಾ ಸವಲತ್ತುಗಳನ್ನು ಕಾಲಮಿತಿಯೊಳಗೆ ನೀಡುವುದು:
11. ಆರೋಗ್ಯ ಸೌಧ ಕಟ್ಟಡದಲ್ಲಿ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸುವುದು.
12. ಉತ್ತರ ಕರ್ನಾಟಕ ಭಾಗದ ವಿಜಯಪುರದಲ್ಲಿ ಆರಂಭಿಸಿರುವ ಅಪರ ನಿರ್ದೇಶಕರ ಕಛೇರಿಯನ್ನು ಬಲವರ್ಧನೆಗೊಳಿಸುವುದು.
ಈ ಸಂದರ್ಭದಲ್ಲಿ ಇಲಾಖೆಯ ನಿರ್ದೇಶಕರಾದ ಶ್ರೀ ಓಂ ಪ್ರಕಾಶ್ ಪಾಟೀಲ್‍ರವರು ಹಾಗೂ ಪದಾಧಿಕಾರಿಗಳಾದ ಎಸ್. ರಾಜು, ಬಿ.ಆರ್. ಕುಲಕರ್ಣಿ, ಕೆ.ಎಂ. ಪುರುಷೋತ್ತಮ್, ರಾಜಕುಮಾರ್ ಮಾಳಗೆ, ಕುಂಬಾರ್, ಡಾ.ಎಂ.ಆರ್. ರಾಮಚಂದ್ರರೆಡ್ಡಿ, ಪುಟ್ಟರಾಜು, ತಿಮ್ಮರಾಜು. ನಾಗರಾಜು, ಎನ್.ಎಂ. ಬಡಕಲಿ, ಚಿದಾನಂದ, ಅರುಣ್ ಕುಮಾರ್, ಮುನಿಆಂಜಿನಪ್ಪ, ಮಲ್ಲಿಕಾರ್ಜುನ್, ದೇಸಾಯಿ ಮತ್ತು ಬಿ.ಕೆ. ಗಿರಿಗೌಡ ಇನ್ನಿತರರು ಈ ಸಭೆಯಲ್ಲಿ ಹಾಜರಿದ್ದರು.
Comments
Post a Comment