ಸರ್ಕಾರಿ ನೌಕರರ - ಅಧಿಕಾರಿಗಳ ಇಲಾಖಾ ವಿಚಾರಣಾ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವ ಬಗ್ಗೆ
ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಸರ್ಕಾರದ ಉನ್ನತದ ಅಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಲ್ಲಿಸಿದ ಮನವಿ ಹಾಗೂ ಸರ್ಕಾರದ ಸ್ಪಂದನೆ.
ರಾಜ್ಯ ಸರ್ಕಾರಿ ನೌಕರರ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ನೇತೃತ್ವದ ನಿಯೋಗವು ಸರ್ಕಾರದ ಮಾನ್ಯ ಮುಖ್ಯಕಾರ್ಯದರ್ಶಿಯವರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಚರ್ಚಿಸಿದ್ದು, ಈ ಸಮಸ್ಯೆಗಳ ಬಗ್ಗೆ ಸರ್ಕಾರವು ಸಕಾರತ್ಮಕವಾಗಿ ಸ್ಪಂದಿಸಿದ್ದು ಸರ್ಕಾರದ ಆದೇಶಗಳ ನಿರೀಕ್ಷೆಯನ್ನು ಹೊಂದಿರುತ್ತೇವೆ.
ಲಘು ದಂಡನೆ ವಿಧಿಸಬಹುದಾದಂತಹ ಇಲಾಖಾ ವಿಚಾರಣೆ ಪ್ರಕರಣಗಳು ಕಾಲಮಿತಿಯೊಳಗೆ ಇತ್ಯರ್ಥಗೊಳ್ಳದೆ ಬಾಕಿ ಇರುತ್ತವೆ .
ಇಲಾಖಾ ವಿಚಾರಣೆ ಸಂಬಂಧ ನೇಮಕಗೊಳ್ಳುವ ವಿಚಾರಣಾಧಿಕಾರಿಗಳು ಅನಗತ್ಯ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದರಿಂದ , ಇವರಿಗೆ ನೀಡುವ ಸಂಭಾವನೆ ಮೊತ್ತವು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿರುತ್ತದೆ .
ಸರ್ಕಾರವು ಈ ಬಗ್ಗೆ ಆಗಿಂದಾಗ್ಗೆ ಅನೇಕ ಸುತ್ತೋಲೆಗಳನ್ನು ಹೊರಡಿಸಿ ನಿಗದಿತ ಅವಧಿಯಲ್ಲಿ ಇಲಾಖಾ ವಿಚಾರಣೆ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಿದ್ದಾಗ್ಯೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ . ಇದರಿಂದಾಗಿ ಪಿಂಚಣಿ , ಸೇವಾ ಸೌಲಭ್ಯ ಪಾವತಿಯಲ್ಲಿನ ವಿಳಂಬ ಹಾಗೂ ಮುಂಬಡ್ತಿಯಿಂದ ವಂಚಿತರಾದ ಸಾವಿರಾರು ಅಧಿಕಾರಿ ಹಾಗೂ ನೌಕರರು ಇಲಾಖಾ ವಿಚಾರಣೆ ಪ್ರಕರಣಗಳನ್ನು ಕಾಲಮಿತಿಂರೊಳಗೆ ಇತ್ಯರ್ಥಪಡಿಸುವಂತೆ ಸಂಘದ ಗಮನಕ್ಕೆ ತಂದಿರುತ್ತಾರೆ .
ಸಂಘದ ನಿಯೋಗವು ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ , ಬಾಧಿತ ನೌಕರರಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಲಾಗಿದೆ .
ಮಾನ್ಯ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಕಾಲಮಿತಿಯೊಳಗೆ ಇಲಾಖಾ ವಿಚಾರಣೆ ಪ್ರಕರಣಗಳನ್ನು ಇತ್ಯರ್ಥ ಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ.


Comments
Post a Comment