Skip to main content

Posts

Showing posts from April, 2021

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ರಾಜ್ಯ ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಟಾವಣೆ ವದಂತಿ ಬಗ್ಗೆ ಸ್ಪಷ್ಟಿಕರಣ - ಸಿ.ಎಸ್. ಷಡಾಕ್ಷರಿ.

ರಾಜ್ಯ ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಟಾವಣೆ ವದಂತಿ ಬಗ್ಗೆ ಸ್ಪಷ್ಟಿಕರಣ - ಸಿ.ಎಸ್. ಷಡಾಕ್ಷರಿ. ಆತ್ಮೀಯ ರಾಜ್ಯದ ಎಲ್ಲಾ ಸರ್ಕಾರಿ ನೌಕರ ಬಂಧುಗಳೇ . . ರಾಜ್ಯ ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಟಾವಣೆ   ಎಂಬ ಸರ್ಕಾರಿ ರಾಜ್ಯ ಸರ್ಕಾರಗಳು ಇಂದು ರಾಜ್ಯದ ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಸರ್ಕಾರಿ ನೌಕರರ ಒಂದು ತಿಂಗಳ ವೇತವನ್ನು ಹಿಡಿಯುವ ತೀರ್ಮಾನವನ್ನು ಇಂದಿನ ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಂಡಿದೆ ವಿಷಯವು ರಾಜ್ಯದ ನೌಕರರನ್ನು ಗೊಂದಲಕ್ಕಿಡುಮಾಡಿರುವುದನ್ನು ಗಮನಿಸಿದೆ . ರೀತಿಯಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಸಂಪ್ರದಾಯದಂತೆ ರಾಜ್ಯದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಕರೆದು ಚರ್ಚಿಸಿ ತೀರ್ಮಾನಗಳನ್ನು ಈ ಹಿಂದೆ ತೆಗೆದುಕೊಂಡಿರುತ್ತದೆ . ಆದರೆ ಈ ಕ್ಷಣದವರೆಗೂ ಆ ರೀತಿಯ ಯಾವುದೇ ಚರ್ಚೆಗಳನ್ನು ಸರ್ಕಾರವು ಸಂಘದ ಜೊತೆ ಮಾಡಿರುವುದಿಲ್ಲ . ಹಾಗಾಗಿ ಇಂದು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಕಟಾವು ಮಾಡುತ್ತೇವೆ ಎಂಬ ಅಂಶ ಸತ್ಯಕ್ಕೆ ದೂರವಾದದ್ದು ಹಾಗೂ ಗಾಳಿ ಸುದ್ದಿ ಎಂಬ ವಿಚಾರವನ್ನು ಸಮಸ್ತ ರಾಜ್ಯದ ಸರ್ಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಸಂಘವು ತಿಳಿಸುತ್ತದೆ . ಹಾಗೂ ಯಾವುದೇ ಸರ್ಕಾರಿ ನೌಕರರು ಗೊಂದಲಕ್ಕಿಡಾಗಬಾರದೆಂದು ಸಂಘವು ವಿನಂತಿಸುತ್ತದೆ . ವಂದನೆಗಳೊಂದಿಗೆ  , ತಮ್ಮ ವಿಶ್ವಾಸ...

ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಮಾಹಿತಿ. - ಸಿ.ಎಸ್.ಷಡಾಕ್ಷರಿ. ರಾಜ್ಯಾಧ್ಯಕ್ಷರು, ಕ.ರಾ.ಸ.ನೌಕರರ ಸಂಘ.

 ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಮಾಹಿತಿ  ಆತ್ಮೀಯ , ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಬಂಧುಗಳೇ ...  ಇಂದು ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ತಿದ್ದುಪಡಿಗೆ ಸುಗ್ರೀವಾಜ್ಞೆಯನ್ನು ಜಾರಿಗೆ ತರುವ ಸಂಬಂಧ ಶಿಕ್ಷಣ ಇಲಾಖೆ ಸಲ್ಲಿಸಿದ ಪ್ರಸ್ತಾವನೆಗೆ ಮಾನ್ಯ ಮುಖ್ಯಮಂತ್ರಿಗಳು , ಮಾನ್ಯ ಶಿಕ್ಷಣ ಸಚಿವರು ಮತ್ತು ಸಚಿವ ಸಂಪುಟದ ಎಲ್ಲಾ ಸಚಿವರು ಅನುಮೋದನೆ ನೀಡಿರುತ್ತಾರೆ . ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆ ಅಂತಿಮ ಹಂತಕ್ಕೆ ತಲುಪಿದ್ದು , ಇಂದು ನಡೆದ ಸಚಿವ ಸಂಪುಟದಿಂದ ಅನುಮೋದನೆಗೊಂಡ ಪ್ರಸ್ತಾವನೆಯು ಒಂದೆರಡು ದಿನಗಳಲ್ಲಿ ಸಂಸದೀಯ ವ್ಯವಹಾರಗಳ ಇಲಾಖೆಯ ಮುಖಾಂತರ ಮಾನ್ಯ ರಾಜ್ಯಪಾಲರ ಅನುಮೋದನೆಗೆ ಸಲ್ಲಿಕೆಯಾಗಲಿದೆ . ಮಾನ್ಯ ರಾಜ್ಯಪಾಲರ ಅನುಮೋದನೆಯಾದ ನಂತರ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಗೆ ಸಂಬಂದಿಸಿದ ಸುಗ್ರೀವಾಜ್ಞೆ ಆದೇಶ ಹೊರಬೀಳಲಿದೆ . ಶಿಕ್ಷಕರ ವರ್ಗಾವಣೆಯ ತಿದ್ದುಪಡಿ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ಅನುಮೋದಿಸಲು ಕಾರಣೀಭೂತರಾದ ನಾಡಿನ ಹೆಮ್ಮೆಯ ಮುಖ್ಯಮಂತ್ರಿಗಳು ಮಾನ್ಯ ಶಿಕ್ಷಣ ಸಚಿವರು ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ರಾಜ್ಯದ ಸಮಸ್ತ ಶಿಕ್ಷಕ ಬಂಧುಗಳ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಅಭಿನಂದನೆಗಳನ್ನು ಸಲ್ಲಿಸುತ್ತದೆ .  ( ಸಿ.ಎಸ್.ಷಡಾಕ್ಷರಿ ) ರ...

ದಿನಾಂಕ : 22.04.2021 ರಿಂದ 30.04.2021 ರವರೆಗೆ ನಡೆಯಬೇಕಾಗಿದ್ದ 2020 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಮುಂದೂಡಿ ಕೆ.ಪಿ.ಎಸ್.ಸಿ ಯಿಂದ ಆದೇಶ.

ದಿನಾಂಕ : 22.04.2021 ರಿಂದ 30.04.2021 ರವರೆಗೆ ನಡೆಯಬೇಕಾಗಿದ್ದ 2020 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಮುಂದೂಡಿ ಕೆ.ಪಿ.ಎಸ್.ಸಿ ಯಿಂದ ಆದೇಶ. ಕರ್ನಾಟಕ ಲೋಕಸೇವಾ ಆಯೋಗ , ಸಂಖ್ಯೆ : ಪಿಎಸ್‌ಸಿ 238 ಇಪ ( 1 ) 20 / 2021-22  , ದಿನಾಂಕ : 21-04-2021 ಪತ್ರಿಕಾ ಪ್ರಕಟಣೆ ವಿಷಯ : ದಿನಾಂಕ : 22.04.2021 ರಿಂದ 30.04.2021 ರವರೆಗೆ ನಡೆಯಬೇಕಾಗಿದ್ದ 2020 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಮುಂದೂಡುವ ಬಗ್ಗೆ * ಆಯೋಗವು ದಿನಾಂಕ : 22.04.2021 ರಿಂದ 30.04.2021 ರವರೆಗೆ 2020 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ನಡೆಸಲು ನಿಗದಿಪಡಿಸಿತ್ತು . ಸದರಿ ಪರೀಕ್ಷೆಗಳಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅಭ್ಯರ್ಥಿಗಳು ದಿನಾಂಕ : 22.04.2021 ರಿಂದ 28.04.2021 ರವರೆಗೆ ಬೆಂಗಳೂರು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಿರುತ್ತದೆ ಹಾಗೂ ದಿನಾಂಕ : 29.04.2021 ಮತ್ತು 30.04.2021 ರಂದು ವಿಭಾಗೀಯ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಹಾಜರಾಗಬೇಕಿರುತ್ತದೆ . ಕೋವಿಡ್ -19 ಸಾಂಕ್ರಾಮಿಕ ರೋಗಾಣು ಹರಡುವಿಕೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವುದರಿಂದ ಹಾಗೂ ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 158 ಟಿಎನ್ಆರ್ 2020 , ದಿನಾಂಕ : 20.04.2021 ರ ಮಾರ್ಗಸೂಚಿ ಅನ್ವಯ ದಿನಾಂಕ : 21.04.2021 ರಿಂದ 04.05.2021 ರವರೆಗೆ ರಾತ್ರಿ ಕರ್ಥ್ಯ ಹ...

ರಾಜ್ಯದ ಸಮಸ್ತ ಸರ್ಕಾರಿ ನೌಕರ ಬಂಧುಗಳಿಗೆ ಪ್ರಥಮ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯ ಶುಭಾಶಯಗಳು- ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು, ಕ.ರಾ.ಸ. ನೌಕರರ ಸಂಘ.

ರಾಜ್ಯದ ಸಮಸ್ತ ಸರ್ಕಾರಿ ನೌಕರ ಬಂಧುಗಳಿಗೆ ಪ್ರಥಮ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯ ಶುಭಾಶಯಗಳು ನೌಕರರ ದಿನಾಚರಣೆ -2021  ದಿನಾಂಕ : 21 ಏಪ್ರಿಲ್ 2021 ಬುಧವಾರ ಸರ್ಕಾರದ ಎಲ್ಲಾ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತರುವಲ್ಲಿ ಅಹರ್ನಿಶಿ ದುಡಿಯುತ್ತಿರುವ ನಮಗಾಗಿ ಕೂಡ ವರ್ಷದಲ್ಲಿ ಒಂದು ದಿನ ಸಮಾಜ ಸರಿಯಾದ ದಿಕ್ಕಿನಲ್ಲಿ ಯೋಚಿಸುವಂತೆ ಮಾಡಲು ಹಾಗೂ ವಿವಿಧ ಇಲಾಖೆ ಹಾಗೂ ವೃಂದಗಳಲ್ಲಿ ಕೆಲಸ ನಿರ್ವಹಿಸುವ ನಾವೆಲ್ಲರೂ ಒಂದೇ ಎಂಬ ತತ್ವದಡಿ ಒಗ್ಗೂಡಿ ನಮ್ಮಲ್ಲಿನ ಸೃಜನಶೀಲತೆಯನ್ನು ಅಭಿವ್ಯಕ್ತಿಸಲು ನಮಗೊಂದು ದಿನಾಚರಣೆಯ ಅಗತ್ಯವಿತ್ತು . ಆ ಕನಸನ್ನು ನನಸಾಗಿಸಲು ನಮ್ಮ ಇಂದಿನ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್ . ಷಡಾಕ್ಷರಿಯವರು ತಮ್ಮ ತಂಡದೊಂದಿಗೆ ನಿರಂತರವಾಗಿ ಸರ್ಕಾರದ ಜೊತೆ ಹೋರಾಟ ನಡೆಸಿದ ಫಲವಾಗಿ ಪ್ರತಿವರ್ಷದ ಏಪ್ರಿಲ್ 21 ನ್ನು ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಾಗಿ ಆಚರಿಸಲು ಕರ್ನಾಟಕ ಘನ ಸರ್ಕಾರವು ಆದೇಶಿಸಿರುತ್ತದೆ . ಈ ಕಾರ್ಯ ಕೈಗೂಡಲು ಮುಖ್ಯವಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರ ಸದಾಶಯದ ಮನೋಭಾವ ಕಾರಣವಾಗಿದ್ದು , ಅವರಿಗೆ ನಮ್ಮೆಲ್ಲರ ಗೌರವಪೂರ್ವಕ ಕೃತಜ್ಞತೆಗಳು , ಹಾಗೇಯೇ ಈ ಆದೇಶ ಜಾರಿಗೆ ಬರಲು ಸಹಕರಿಸಿದ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಂಬಂಧಿಸಿದ ಎಲ್ಲಾ ಅಧಿಕಾರಿ - ನೌಕರ ಮಿತ್ರರಿಗೂ ವಂದನೆಗಳು . ವಿಶೇಷ ಸೂಚನೆ ಪ್ರಸ್ತುತ...

ರಾಜ್ಯದಲ್ಲಿ ಕೋವಿಡ್ -19 2 ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಸ್.ಎ.ಎಸ್ . ಹಾಗೂ ಇತರೆ ಇಲಾಖಾ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡುವ ಬಗ್ಗೆ .

ರಾಜ್ಯದಲ್ಲಿ ಕೋವಿಡ್ -19 2 ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಸ್.ಎ.ಎಸ್ . ಹಾಗೂ ಇತರೆ ಇಲಾಖಾ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡುವ ಬಗ್ಗೆ .  ಉಲ್ಲೇಖ : ಯು.ಪಿ.ಎಸ್.ಸಿ ಪತ್ರಿಕಾ ಪ್ರಕಟಣೆ ದಿನಾಂಕ : 19-04-2021  ವಿಷಯಕ್ಕೆ ಸಂಬಂಧಿಸಿದಂತೆ , ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್ -19 ರ 2 ನೇ ಅಲೆಯು ಈ ಹಿಂದಿಗಿಂತಲೂ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ರಾತ್ರಿ ವೇಳೆ ಕರ್ಪ್ಯೂ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿರ್ಭಂದಿಸುವಂತೆ ಸೂಚಿಸಿರುವುದರಿಂದ ಹಾಗೂ ಈ ಕೆಳಕಂಡ ಕಾರಣಗಳಿಗಾಗಿ ದಿನಾಂಕ : 22-04-2021 ರಿಂದ ಪ್ರಾರಂಭವಾಗಲಿರುವ ಎಸ್.ಎ.ಎಸ್ . , ಟ್ರೆಜರಿ ಅಕೌಂಟ್ಸ್ ಹಾಗೂ ಇನ್ನಿತರೆ ಇಲಾಖಾ ಪರೀಕ್ಷೆಗಳನ್ನು ಮುಂದೂಡುವುದು ಅವಶ್ಯಕವಾಗಿರುತ್ತದೆ .  1. ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರು ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ನೌಕರರು ಸೋಂಕಿಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ .  2. ಯು.ಪಿಎಸ್.ಸಿ ವತಿಯಿಂದ ಆಯೋಜಿಸುವ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ .  3 , ಕೆ.ಎಸ್.ಆರ್.ಟಿ.ಸಿ ನೌಕರರು ಮುಷ್ಕರ ಹೂಡಿರುವುದರಿಂದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಪ್ರಯಾಣಿಸಲು ಬಸ್‌ಗಳ ಕೊರತೆಯ ಕಾರಣ ಪರೀಕ್ಷೆ ಬರೆಯಲು ಬರುವ ನೌ...

ಸರ್ಕಾರಿ ನೌಕರರ - ಅಧಿಕಾರಿಗಳ ಇಲಾಖಾ ವಿಚಾರಣಾ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವ ಬಗ್ಗೆ.

ಸರ್ಕಾರಿ ನೌಕರರ - ಅಧಿಕಾರಿಗಳ ಇಲಾಖಾ ವಿಚಾರಣಾ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಸರ್ಕಾರದ ಉನ್ನತದ ಅಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಲ್ಲಿಸಿದ ಮನವಿ ಹಾಗೂ ಸರ್ಕಾರದ ಸ್ಪಂದನೆ. ರಾಜ್ಯ ಸರ್ಕಾರಿ ನೌಕರರ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ನೇತೃತ್ವದ ನಿಯೋಗವು ಸರ್ಕಾರದ ಮಾನ್ಯ ಮುಖ್ಯಕಾರ್ಯದರ್ಶಿಯವರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಚರ್ಚಿಸಿದ್ದು, ಈ ಸಮಸ್ಯೆಗಳ ಬಗ್ಗೆ ಸರ್ಕಾರವು ಸಕಾರತ್ಮಕವಾಗಿ ಸ್ಪಂದಿಸಿದ್ದು ಸರ್ಕಾರದ ಆದೇಶಗಳ ನಿರೀಕ್ಷೆಯನ್ನು ಹೊಂದಿರುತ್ತೇವೆ. ಲಘು ದಂಡನೆ ವಿಧಿಸಬಹುದಾದಂತಹ ಇಲಾಖಾ ವಿಚಾರಣೆ ಪ್ರಕರಣಗಳು ಕಾಲಮಿತಿಯೊಳಗೆ ಇತ್ಯರ್ಥಗೊಳ್ಳದೆ ಬಾಕಿ ಇರುತ್ತವೆ . ಇಲಾಖಾ ವಿಚಾರಣೆ ಸಂಬಂಧ ನೇಮಕಗೊಳ್ಳುವ ವಿಚಾರಣಾಧಿಕಾರಿಗಳು ಅನಗತ್ಯ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದರಿಂದ , ಇವರಿಗೆ ನೀಡುವ ಸಂಭಾವನೆ ಮೊತ್ತವು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿರುತ್ತದೆ .  ಸರ್ಕಾರವು ಈ ಬಗ್ಗೆ ಆಗಿಂದಾಗ್ಗೆ ಅನೇಕ ಸುತ್ತೋಲೆಗಳನ್ನು ಹೊರಡಿಸಿ ನಿಗದಿತ ಅವಧಿಯಲ್ಲಿ ಇಲಾಖಾ ವಿಚಾರಣೆ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಸೂ...

ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಜಿಲ್ಲೆಗಳಿಗೆ ಬೇಸಿಗೆ ಕಾಲದಲ್ಲಿ ಕಛೇರಿ ಕೆಲಸದ ಸಮಯವನ್ನು ಬದಲಾವಣೆ ಮಾಡುವ ಬಗ್ಗೆ ಆದೇಶ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,

ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಜಿಲ್ಲೆಗಳಿಗೆ ಬೇಸಿಗೆ ಕಾಲದಲ್ಲಿ ಕಛೇರಿ ಕೆಲಸದ ಸಮಯವನ್ನು ಬದಲಾವಣೆ ಮಾಡುವ ಬಗ್ಗೆ ಆದೇಶ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,  ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಜಿಲ್ಲೆಗಳಿಗೆ ಬೇಸಿಗೆ ಕಾಲದಲ್ಲಿ ಕಛೇರಿ ಕೆಲಸದ ಸಮಯವನ್ನು ಬದಲಾವಣೆ ಮಾಡುವಂತೆ ಸರ್ಕಾರಕ್ಕೆ   ರಾಜ್ಯಾಧ್ಯಕ್ಷರು , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ಬೆಂಗಳೂರು ಇವರ ಪತ್ರ ಸಂಖ್ಯೆ : ಜಿಇಎ / 1489 / 2020-21 , ದಿನಾಂಕ : 17.3.2021  ಹಾಗೂ ರಾಜ್ಯಾಧ್ಯಕ್ಷರು ಸರ್ಕಾರಿ ನೌಕರರ ಸಂಘ , ಬೆಂಗಳೂರು ಇವರ ಪತ್ರ ಸಂಖ್ಯೆ : ಜಿಇಎ / 1551 / 2020-21 ದಿನಾಂಕ : 01.04.2021 ರಂದು ಮನವಿ ಸಲ್ಲಿಸಿದರು . ಅದರಂತೆ ಸರ್ಕಾರವು ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ ( ಆಸು / 33 / ಇಆಸು / 2021 , ಬೆಂಗಳೂರು , ದಿನಾಂಕ : 11-04-2021 ,ಅನ್ನು ಹೊರಡಿಸಿದೆ. ಇದಕ್ಕಾಗಿ ಸನ್ಮಾನ ಮುಖ್ಯಮಂತ್ರಿಗಳಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ಸಂಘವು ಧನ್ಯವಾದಗಳನ್ನು ಸಲ್ಲಿಸುತ್ತದೆ.  - ಸಿ.ಎಸ್. ಷಡಾಕ್ಷರಿ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ , ವಾಟ್ಸ್ ಆಪ್ ಮೂಲಕ ಸರ್ಕಾರ , ಇಲಾಖೆ , ಮೇಲಾಧಿಕಾರಿಗಳು ಅಥವಾ ಅಧೀನದ ಸಿಬ್ಬಂದಿಗಳ ತೇಜೋವಧೆ ಅವಹೇಳನಕಾರಿ ಸಂದೇಶ ರವಾನಿಸುವ , ಸಂಭಾಷಿಸುವ ಅಧಿಕಾರಿ / ನೌಕರರ ಮೇಲೆ ನಾಗರೀಕ ಸೇವಾ ನಿಯಮಗಳನ್ವಯ ಶಿಸ್ತು ಕ್ರಮ ಜರುಗಿಸುವ ಬಗ್ಗೆ .

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ , ವಾಟ್ಸ್ ಆಪ್ ಮೂಲಕ ಸರ್ಕಾರ , ಇಲಾಖೆ , ಮೇಲಾಧಿಕಾರಿಗಳು ಅಥವಾ ಅಧೀನದ ಸಿಬ್ಬಂದಿಗಳ ತೇಜೋವಧೆ ಅವಹೇಳನಕಾರಿ ಸಂದೇಶ ರವಾನಿಸುವ , ಸಂಭಾಷಿಸುವ ಅಧಿಕಾರಿ / ನೌಕರರ ಮೇಲೆ ನಾಗರೀಕ ಸೇವಾ ನಿಯಮಗಳನ್ವಯ ಶಿಸ್ತು ಕ್ರಮ ಜರುಗಿಸುವ ಬಗ್ಗೆ .  ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಸರ್ಕಾರದ ಉನ್ನತದ ಅಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಲ್ಲಿಸಿದ ಮನವಿ ಹಾಗೂ ಸರ್ಕಾರದ ಸ್ಪಂದನೆ. ರಾಜ್ಯ ಸರ್ಕಾರಿ ನೌಕರರ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ನೇತೃತ್ವದ ನಿಯೋಗವು ಸರ್ಕಾರದ ಮಾನ್ಯ ಮುಖ್ಯಕಾರ್ಯದರ್ಶಿಯವರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಚರ್ಚಿಸಿದ್ದು, ಈ ಸಮಸ್ಯೆಗಳ ಬಗ್ಗೆ ಸರ್ಕಾರವು ಸಕಾರತ್ಮಕವಾಗಿ ಸ್ಪಂದಿಸಿದ್ದು ಸರ್ಕಾರದ ಆದೇಶಗಳ ನಿರೀಕ್ಷೆಯನ್ನು ಹೊಂದಿರುತ್ತೇವೆ.   -::ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ::- ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ , ವಾಟ್ಸ್ ಆಪ್ ಮೂಲಕ ಸರ್ಕಾರ , ಇಲಾಖೆ , ಮೇಲಾಧಿಕಾರಿಗಳು ಅಥವಾ ಅಧೀನದ ಸಿಬ್ಬಂದಿಗಳ ತೇಜೋವಧೆ ಅವಹೇಳನಕಾರಿ ಸಂದೇಶ ರವಾನಿಸುವ , ಸಂಭಾಷಿಸುವ ಅಧಿಕಾರಿ / ನೌಕರರ ಮೇಲೆ ನಾಗರೀಕ ಸೇವಾ ನಿಯಮಗಳನ್ವಯ ಶಿಸ್ತು ಕ್ರ...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಭಿತರಿಗೆ ನಗದುರಹಿತ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಸರ್ಕಾರದ ಉನ್ನತದ ಅಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ಚರ್ಚೆ ನಡೆಸಿ ಸಲ್ಲಿಸಿದ ಮನವಿ ಹಾಗೂ ಸರ್ಕಾರದ ಸ್ಪಂದನೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಭಿತರಿಗೆ ನಗದುರಹಿತ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ  ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಸರ್ಕಾರದ ಉನ್ನತದ ಅಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ಚರ್ಚೆ ನಡೆಸಿ ಸಲ್ಲಿಸಿದ ಮನವಿ ಹಾಗೂ ಸರ್ಕಾರದ ಸ್ಪಂದನೆ. ರಾಜ್ಯ ಸರ್ಕಾರಿ ನೌಕರರ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ನೇತೃತ್ವದ ನಿಯೋಗವು ಸರ್ಕಾರದ ಮಾನ್ಯ ಮುಖ್ಯಕಾರ್ಯದರ್ಶಿಯವರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಚರ್ಚಿಸಿದ್ದು, ಈ ಸಮಸ್ಯೆಗಳ ಬಗ್ಗೆ ಸರ್ಕಾರವು ಸಕಾರತ್ಮಕವಾಗಿ ಸ್ಪಂದಿಸಿದ್ದು ಸರ್ಕಾರದ ಆದೇಶಗಳ ನಿರೀಕ್ಷೆಯನ್ನು ಹೊಂದಿರುತ್ತೇವೆ.   -::ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ::- ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಭಿತರಿಗೆ ನಗದುರಹಿತ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ . ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ. https://mydukaan.io/ksgeanews

ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಸರ್ಕಾರದ ಉನ್ನತದ ಅಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಲ್ಲಿಸಿದ ಮನವಿ ಹಾಗೂ ಸರ್ಕಾರದ ಸ್ಪಂದನೆ.

ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಸರ್ಕಾರದ ಉನ್ನತದ ಅಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಲ್ಲಿಸಿದ ಮನವಿ ಹಾಗೂ ಸರ್ಕಾರದ ಸ್ಪಂದನೆ. ರಾಜ್ಯ ಸರ್ಕಾರಿ ನೌಕರರ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ನೇತೃತ್ವದ ನಿಯೋಗವು ಸರ್ಕಾರದ ಮಾನ್ಯ ಮುಖ್ಯಕಾರ್ಯದರ್ಶಿಯವರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಚರ್ಚಿಸಿದ್ದು, ಈ ಸಮಸ್ಯೆಗಳ ಬಗ್ಗೆ ಸರ್ಕಾರವು ಸಕಾರತ್ಮಕವಾಗಿ ಸ್ಪಂದಿಸಿದ್ದು ಸರ್ಕಾರದ ಆದೇಶಗಳ ನಿರೀಕ್ಷೆಯನ್ನು ಹೊಂದಿರುತ್ತೇವೆ.   -::ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ::- ರಾಜ್ಯ ಸರ್ಕಾರದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ' ಆಚರಿಸುವ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸುವ ಕುರಿತು . ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಭಿತರಿಗೆ ನಗದುರಹಿತ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ . ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ , ವಾಟ್ಸ್ ಆಪ್ ಮೂಲಕ ಸರ್ಕಾರ , ಇಲಾಖೆ , ಮೇಲಾಧಿಕಾರಿಗಳು ಅಥವಾ ಅಧೀನದ ಸಿಬ್ಬಂದಿಗಳ ತೇಜೋವಧೆ ಅವಹೇಳನಕಾರಿ ಸಂದೇಶ ರವಾನಿಸುವ , ಸಂಭಾಷಿಸುವ ಅಧಿಕಾರಿ / ನೌಕರರ ಮೇಲೆ ನಾಗರೀಕ ಸೇವಾ ನಿಯಮಗಳನ್ವಯ...

ಆರೋಗ್ಯ ಇಲಾಖೆಯ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ನೇತೃತ್ವದ ಆರೋಗ್ಯ ಇಲಾಖೆಯ ನಿಯೋಗವು ಇಂದು ನಡೆದ ಸಭೆಯಲ್ಲಿ ಮಾನ್ಯ ಆರೋಗ್ಯ ಇಲಾಖೆ ಸಚಿವರ ಗಮನಕ್ಕೆ ತಂದು ಶೀಘ್ರವಾಗಿ ಈ ಸಮಸ್ಯಗಳ ಇತ್ಯರ್ಥಪಡಿಸುವಂತೆ ಮನವಿ ಮಾಡಿದರು.

  ಆರೋಗ್ಯ ಇಲಾಖೆಯ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ನೇತೃತ್ವದ ಆರೋಗ್ಯ ಇಲಾಖೆಯ ನಿಯೋಗವು ಇಂದು ನಡೆದ ಸಭೆಯಲ್ಲಿ ಮಾನ್ಯ ಆರೋಗ್ಯ ಇಲಾಖೆ ಸಚಿವರ ಗಮನಕ್ಕೆ ತಂದು ಶೀಘ್ರವಾಗಿ ಈ ಸಮಸ್ಯಗಳ ಇತ್ಯರ್ಥಪಡಿಸುವಂತೆ ಮನವಿ ಮಾಡಿದರು. ದಿನಾಂಕ:08-04-2021ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ರವರ ನಿಯೋಗವು  ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾದ ಎ.ಪುಟ್ಟಸ್ವಾಮಿ ಮತ್ತು ಗೌರವಾಧ್ಯಕ್ಷರು ಹಾಗೂ ನೌಕರರ ಸಂಘದ ಖಜಾಂಚಿಗಳಾದ ಆರ್.ಶ್ರೀನಿವಾಸ್‍ರವರುಗಳು ಇಲಾಖೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮ.ಸ. ನಂಜುಡಸ್ವಾಮಿರವರು ಮತ್ತು ನೌಕರರ ಕೇಂದ್ರ ಸಂಘದ ಉಪಾಧ್ಯಕ್ಷರು ಮತ್ತು ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಎಂ ಬಳ್ಳಾರಿ, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷರಾದ ಮೋಹನ್ ಕುಮಾರ್, ಪ್ರಕಾಶ್ ಗಿಡ್ಡೆ ಆರೋಗ್ಯ ಇಲಾಖೆ ಬೈಲಾ ಸಮಿತಿ ಅಧ್ಯಕ್ಷರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಸೇವೆಗಳ ಇಲಾಖಾ ನೌಕರರ ಬೇಡಿಕೆಗಳ ಬಗ್ಗೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರೊಂದಿಗೆ ವಿಕಾಸಸೌಧದಲ್ಲಿ   ನೌಕರರ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ನಡೆಸಲಾಯಿತು. ಮಾನ್ಯ ಸಚಿವರು ಈ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಸಕರಾತ್ಮಕವಾ...

ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ. (118 ಎ ಅಡಿಯಲ್ಲಿ ನಿವೃತ್ತಿ ಸಂದರ್ಭದಲ್ಲಿ 300 ದಿನಗಳ ಗಳಿಕೆ ರಜೆಯನ್ನು ನಗದೀಕರಣ)

ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ.  ದಿನದ ಪ್ರಶ್ನೆ:   ನಾನು 31-5-2015 ರಂದು ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದೇನೆ . ನಿವೃತ್ತಿ ಸಂದರ್ಭದಲ್ಲಿ ನನ್ನ ಲೆಕ್ಕ ಖಾತೆಯಲ್ಲಿ 313 ಗಳಿಕೆ ರಜೆ ಇದ್ದು 300 ದಿನಗಳು ಮಾತ್ರ ರಜೆ ನಗದೀಕರಣ ಮಾಡಿಕೊಟ್ಟಿದ್ದಾರೆ . ಉಳಿದ 13 ದಿನದ ಗಳಿಕೆ ರಜೆ ನಗದೀಕರಣ ಮಾಡಲು ಬರುತ್ತದೋ ಇಲ್ಲವೋ ತಿಳಿಸಿ . | ಬಿ.ಸಿ.ಕಮತರ ನಿವೃತ್ತ ರೇಷ್ಮೆ ಪ್ರದರ್ಶಕ , ಹನುಮ ಸಾಗರ ಕೊಪ್ಪಳ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 118 ಎ ಅಡಿಯಲ್ಲಿ ನಿವೃತ್ತಿ ಸಂದರ್ಭದಲ್ಲಿ 300 ದಿನಗಳ ಗಳಿಕೆ ರಜೆಯನ್ನು ನಗದೀಕರಣ ಮಾಡಿಕೊಳ್ಳಲು ಅವಕಾಶವಿದೆ . ಬಾಕಿ 13 ದಿನಗಳು ನಿಮಗೆ ನಷ್ಟವಾಗುತ್ತದೆ . ಆದಕಾರಣ 13 ದಿನಗಳ ಗಳಿಕೆ ರಜೆ ನಗದೀಕರಣ ಸಾಧ್ಯವಾಗುವುದಿಲ್ಲ .   ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು    ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ. ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ. https://mydukaan.io/ksgeanews

ರಾಜ್ಯ ಸರ್ಕಾರಿ ನೌಕರರು ಕೋವಿಡ್ -19 ಕಾಯಿಲೆಗೆ ಪಡೆದ ಚಿಕಿತ್ಸೆಯ ವೆಚ್ಚದ ಸಂಬಂಧದಲ್ಲಿ ಸಲ್ಲಿಸಿರುವ ಮರುಪಾವತಿಯ ಕ್ಲೈಮುಗಳನ್ನು ಇತ್ಯರ್ಥಪಡಿಸುವ ಬಗ್ಗೆ ಆದೇಶ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,

ರಾಜ್ಯ ಸರ್ಕಾರಿ ನೌಕರರು ಕೋವಿಡ್ -19 ಕಾಯಿಲೆಗೆ ಪಡೆದ ಚಿಕಿತ್ಸೆಯ ವೆಚ್ಚದ ಸಂಬಂಧದಲ್ಲಿ ಸಲ್ಲಿಸಿರುವ ಮರುಪಾವತಿಯ ಕ್ಲೈಮುಗಳನ್ನು ಇತ್ಯರ್ಥಪಡಿಸುವ ಬಗ್ಗೆ ಆದೇಶ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು,  ಸರ್ಕಾರದ ಆದೇಶ ಸಂಖ್ಯೆ : DPAR / 15 / SMR / 2021 , ಬೆಂಗಳೂರು , ದಿನಾಂಕ : 01.04.2021 . ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಕೋವಿಡ್ ಪೀಡಿತ ಸರ್ಕಾರ್ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಪಡದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಸಂಬಂಧಿಸಿದಂತೆ , ಈ ಕೆಳಕಂಡಂತೆ ಕ್ರಮವಹಿಸಲು ಸೂಚಿಸಲಾಗಿದೆ : ಎ ) ಕೊವಿಡ್ ಚಿಕಿತ್ಸೆಗಾಗಿ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಗಾಗಿ ಭರಿಸಿರುವ ವೆಚ್ಚವನ್ನು ಮೇಲೆ ಓದಲಾದ ( 4 ) ರ ಅಧಿಸೂಚನೆಯ ಕ್ರಮ ಸಂಖ್ಯೆ : 2 ( ಬಿ ) ನಲ್ಲಿ ನಿಗದಿಪಡಿಸಲಾಗಿರುವ ಈ ಕೆಳಕಂಡ ಪ್ಯಾಕೇಜ್ ದರಗಳಂತೆ ಮರುಪಾವತಿಸಬಹುದಾಗಿದೆ . ಕ್ರಮ ಸಂಖ್ಯೆ ಚಿಕಿತ್ಸಾ ವಿಧಾನ 1 2 3 General Ward HDU Ward Isolation ICU without Ventilator Isolation ICU with Ventilator ಅರ್ಹ ಪ್ರಾಕೇಜ್ ಮೊತ್ತ ( ಪ್ರತಿ ದಿನಕ್ಕೆ ) ರೂ .10,000 / ರೂ .12,000 / ರೂ .15,000 / ರೂ .25,000 / 4 ಈ...

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers