ಹಾಲಿ ಸೇವೆಯಲ್ಲಿದ್ದು ಇನ್ನೊಂದು ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಇರುವ ನಿಯಮ.
ಕೆಲಸ ನಿರ್ವಹಿಸಿ ಪ್ರಸ್ತುತ ಕಂದಾಯ ಇಲಾಖೆಯಲ್ಲಿ ಐದು ವರ್ಷ ಪೊಲೀಸ್ ಇಲಾಖೆಯಲ್ಲಿ ನಾನು ಪ್ರಥಮ ದರ್ಜೆ ಸಹಾಯಕನಾಗಿದ್ದೇನೆ . ನಾನು ಪೊಲೀಸ್ ಇಲಾಖೆಯಲ್ಲಿದ್ದಾಗ ಅನಾರೋಗ್ಯ ನಿಮಿತ್ತ ರಜೆಯಲ್ಲಿದ್ದು , ನಿಯಮಾವಳಿ ರೀತ್ಯ ನಿರಾಕ್ಷೇಪಣಾ ಪತ್ರ ತೆಗೆದುಕೊಂಡಿರುವುದಿಲ್ಲ . ನನ್ನ ಸೇವಾ ಪುಸ್ತಕ , ಕೆಜಿಐಡಿ , ಎನ್‌ಪಿಎಸ್ ಅನ್ನು ಮುಂದುವರಿಸಬಹುದೇ ? ಪೊಲೀಸ್ ಇಲಾಖೆಗೆ ರಾಜೀನಾಮೆ ಸಲ್ಲಿಸಿ ಹೊಸ ಹುದ್ದೆಗೆ ಸೇರಿರುವುದರಂದ ನನ್ನ ಹಿಂದಿನ ಸೇವೆ ಪರಿಗಣಿತವಾಗುವುದೇ ? | ದೇವನಾಥಚಾರ್ ಮೈಸೂರು
1977 ರ ಕರ್ನಾಟಕ ಕರ್ನಾಟಕ ಸರ್ಕಾರಿ (ಸೇವಾಸಾಮಾನ್ಯ ನೇಮಕಾತಿ )ನಿಯಮಾವಳಿಯ ನಿಯಮ 11 ರ ಮೇರೆಗೆ ಪ್ರತಿಯೊಬ್ಬ ಸರ್ಕಾರಿ ನೌಕರ ಸೇವಾ ಬೇರೊಂದು ಹುದ್ದೆಗೆ ಅರ್ಜಿ ಸಲ್ಲಿಸುವಾಗ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ . ಹೀಗಿರುವಲ್ಲಿ ನೀವು ಅನುಮತಿ ಪಡೆಯದೇ ಹೊಸ ಹುದ್ದೆಗೆ ಆಯ್ಕೆಯಾಗಿರುವುದು ನಿಯಮಬಾಹಿರವಾಗಿರುತ್ತದೆ . ಹಾಗಾಗಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252 ಬಿ ಪ್ರಕಾರ ಕರ್ತವ್ಯದಿಂದ ಬಿಡುಗಡೆ ಹೊಂದಿದರೆ ಹಿಂದಿನ ಸೇವೆ , ಸೇವಾ ಪುಸ್ತಕ , ಎನ್‌ಪಿಎಸ್ , ಕೆಜಿಐಡಿ ಮುಂದುವರಿಯುತ್ತದೆ . ಆದುದರಿಂದ ನೀವು ಪ್ರಸ್ತುತ ಹೊಸದಾಗಿ ಎಲ್ಲವನ್ನೂ ಮಾಡಬೇಕಾಗುತ್ತದೆ . ನಿಮ್ಮ ಹಿಂದಿನ 5 ವರ್ಷ ಪರಿಗಣಿತವಾಗುವುದಿಲ್ಲ . ಹಿಂದಿನ ಹುದ್ದೆಯಿಂದ ಅನುಮತಿ ಪಡೆಯದೇ ಹೊಸ ಹುದ್ದೆಗೆ ಹಾಜರಾಗುವುದು ನಿಯಮದ ಉಲ್ಲಂಘನೆಯಾಗಿದ್ದು , ಶಿಸ್ತು ಕ್ರಮವನ್ನೂ ಕೈಗೊಳ್ಳಬಹುದು . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕ ನೋಡಬಹುದು .
" ಸಮಾನ ಕೆಲಸಕ್ಕೆ ಸಮಾನ ವೇತನ - ಕೇಂದ್ರ ಮಾದರಿ ವೇತನ ಭತ್ಯೆಗಳು ರಾಜ್ಯ ಸರ್ಕಾರಿ ನೌಕರರಿಗೆ ಸಹ ಜಾರಿ" ⤵
ಈ ಎಲ್ಲ ಪರೀಕ್ಷೆಗಳಿಗೆ ಇತ್ತೀಚಿನ ತಿದ್ದುಪಡಿಗಳನ್ನು ಅಳವಡಿಸಿದ ಬೆಂಗಳೂರಿನ ಶ್ರೀರಾಘವೇಂದ್ರ ಪ್ರಕಾಶನ ಪ್ರಕಟಿಸಿರುವ ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಬಹುದು . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ' ಪುಸ್ತಕ ನೋಡಬಹುದು .
KSGEA NEWS Blog & YouTube ಈಗಾಗಲೇ 6.07 ಲಕ್ಷ ವೀಕ್ಷಣೆಯನ್ನು ಪಡೆದಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಅತ್ಯಗತ್ಯ ಮಾಹಿತಿಗಳನ್ನು ತಲುಪಿಸುವ ಮಹತ್ತರ ಕಾರ್ಯವನ್ನು ಮಾಡುತ್ತಾ ಬಂದಿದ್ದು, ನಮ್ಮ ಈ ಸೇವೆ ಇನ್ನೂ ಹೆಚ್ಚಿನ ರೀತಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೂ ತಲುಪಿಸುವ ಹೊಸ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ತಮ್ಮ ಅನಿಸಿಕೆ-ಅಭಿಪ್ರಾಯ ಪ್ರಮುಖವಾದದ್ದು.
ಇದೆ ರೀತಿಯಲ್ಲಿ ಹೆಚ್ಚಿನ ಸರ್ಕಾರಿ ನೌಕರರ ಸೇವಾ ಸೌಲಭ್ಯಗಳ ಕುರಿತಾದ ಮಾಹಿತಿಗಳನ್ನು ಎಲ್ಲಾ ಸರ್ಕಾರಿ ನೌಕರರಿಗೆ ತಲುಪಿಸುವಲ್ಲಿ ನಮಗೆ ಹೆಚ್ಚಿನ ಬೆಂಬಲ ನೀಡಲು ಇಚ್ಚಿಸಿದಲ್ಲಿ ಆಸ್ತಕರು ರೂ.01 ನೀಡಿ ಪ್ರೋತ್ಸಾಹಿಸಲು ಕೋರಿದೆ.
🙏 Click here to Support Us : https://rzp.io/i/CnT6eEt
ಲೇಖಕರ ಪುಸ್ತಕ ಹಾಗೂ ಸಿ.ಎಲ್.ಟಿ. ಅಣಕು ಪರೀಕ್ಷೆಗಾಗಿ 9902135813 ಗೆ ವಾಟ್ಸ್ ಆಪ್ ಮಾಡಿ ಹಾಗೂ ಶೇ.15% ರಷ್ಟು ರಿಯಾಯಿತಿ ಪಡೆಯಿರಿ.
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.



Comments
Post a Comment