ಸರ್ಕಾರಿ ನೌಕರರ ಪದೋನ್ನತಿ , ನಿವೃತ್ತಿ ಸೌಲಭ್ಯಗಳು ಏನು?
ಶಿಸ್ತು ಸರ್ಕಾರಿ ಇಲಾಖೆಯಲ್ಲಿ ನಾನು ಶೀಘ್ರಲಿಪಿಕಾರನಾಗಿದ್ದು , ಪ್ರಾಧಿಕಾರಿಯವರು 1-12-2021ರಿಂದ ದುರ್ನಡತೆ ಆಧಾರದ ಮೇಲೆ ನನ್ನನ್ನು ಅಮಾನತ್ತಿನಲ್ಲಿಟ್ಟಿದ್ದಾರೆ . ನಾನು 15 ವರ್ಷ ಸೇವೆ ಸಲ್ಲಿಸಿದ್ದು , ಇತ್ತೀಚೆಗೆ ಇಲಾಖಾ ಪದೋನ್ನತಿ ಸಮಿತಿ ಸಭೆಗೆ ನನ್ನ ಹೆಸರನ್ನು ಕೈಬಿಡಲಾಗಿದೆ . ನಾನು ನ್ಯಾಯಾಲಯಕ್ಕೆ ಹೋಗಬಹುದೇ ? ಪದೋನ್ನತಿ ಅರ್ಹನಲ್ಲವೇ ? ದೋಷಮುಕ್ತನಾದರೆ ನನಗೆ ಎಲ್ಲ ಸೌಲಭ್ಯ ಲಭ್ಯವಾಗುತ್ತದೆಯೇ ? ರಮೇಶ್‌ಕುಮಾರ್ ಕೋಲಾರ
ಅಮಾನತ್ತಿನ ಉದ್ದೇಶವೇ ಸರ್ಕಾರಿ ನೌಕರ ಅಧಿಕೃತ ಸ್ಥಾನಮಾನ ಹೊಂದಿದ್ದರೆ ವಿಚಾರಣೆ ಮೇಲೆ ಮತ್ತು ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಅವಕಾಶಹೊಂದಿರುತ್ತಾನೆ . ಶಿಸ್ತು ಕ್ರಮಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ತಿದ್ದುವುದು ಅಥವಾ ನಾಶಗೊಳಿಸುವುದು ಮುಂತಾದ ಕೆಲಸಗಳಲ್ಲಿ ತೊಡಗಬಹುದು . ಹಾಗಾಗಿ ಅಮಾನತ್ತಿನಲ್ಲಿರುವ ಸರ್ಕಾರಿ ನೌಕರ ಪದೋನ್ನತಿ ಅರ್ಹನಲ್ಲ ಎಂದು ದಿನಾಂಕ 14-7-1993ರ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್ 22 , ಎಸ್‌ಆರ್‌ಆರ್ 93 ರ ಮೇರೆಗೆ ಅಮಾನತ್ತಿನಲ್ಲಿರುವ ನೌಕರನಿಗೆ ಸಂಬಂಧಿಸಿದ ಡಿಪಿಸಿ ಶಿಫಾರಸುಗಳನ್ನು ಮೊಹರಾದ ಲಕೋಟೆಯಲ್ಲಿ ಇರಿಸಲಾಗುತ್ತದೆ . ದೋಷಮುಕ್ತನಾದರೆ ಅವನಿಗೆ ಎಲ್ಲ ಆರ್ಥಿಕ ಮತ್ತು ಸೇವಾ ಸೌಲಭ್ಯ ಲಭ್ಯವಾಗುತ್ತದೆ . ಹಾಗಾಗಿ ಈ ಹಂತದಲ್ಲಿ ನೀವು ನ್ಯಾಯಾಲಯಕ್ಕೆ ಹೋದರೂ ಪ್ರಯೋಜನವಿಲ್ಲ . ನಿಮ್ಮ ಇಲಾಖಾ ವಿಚಾರಣೆಯನ್ನು ಪೂರ್ಣಗೊಳಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿ ನಿಮ್ಮ ಪ್ಲೇಮನ್ನು ಮಾಡಬಹುದು ಹೆಚ್ಚಿನ ವಿವರಗಳಿಗೆ ಎಂ.ಉಮೇಶ್ ಅವರ ' ಸಿಸಿಎ ನಿಯಮಾವಳಿ ಸಮಗ್ರ ಕೈಪಿಡಿ ' ಪುಸ್ತಕ ನೋಡಬಹುದು .



Comments
Post a Comment