ರಾಜ್ಯ ಸರ್ಕಾರಿ ನೌಕರರು ಅಧಿಕಾರಿಗಳ ಆದ್ಯ ಗಮನಕ್ಕೆ ...
ರಾಜ್ಯದ 2022-2023ನೇ ಸಾಲಿನ ಆಯ - ವ್ಯಯದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು ಸಂಘಟನೆಯ ನಿರಂತರ ಪ್ರಯತ್ನದಿಂದ ಅಧಿಕಾರಿಗಳ ವೇತನ ಸಮಿತಿ ರಚಿಸುವ ನಿರೀಕ್ಷೆಯನ್ನು ಸಂಘವು ಹೊಂದಿತ್ತು . ದಿನಾಂಕ : 25-02-2022ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಸವರಾಜ ಬೊಮ್ಮಾಯಿ ರವರೊಂದಿಗೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದಂತೆ ನಿಗಧಿತ ಅವಧಿಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನವನ್ನು ನೀಡುವ ಸ್ಪಷ್ಟ ಭರವಸೆಯನ್ನು ಸಂಘದ ನಿಯೋಗಕ್ಕೆ ನೀಡಿದ್ದರು .
ಆದಾಗ್ಯೂ , ಇಂದು ಮಂಡನೆಯಾದ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸದಿರುವುದು ರಾಜ್ಯದ 6.00 ಲಕ್ಷ ಸರ್ಕಾರಿ ನೌಕರರು ಹಾಗೂ ಅವಲಂಬಿತ 30.00 ಲಕ್ಷ ಕುಟುಂಬ ಸದಸ್ಯರಿಗೆ ನಿರಾಸೆಯನ್ನು ಮೂಡಿಸಿದೆ . ಮುಂದುವರೆದು , ಈ ಹಿಂದೆ ಸಚಿವ ಸಂಪುಟದ ನಿರ್ಣಯದ ಮೂಲಕ ಅಧಿಕಾರಿಗಳ ವೇತನ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಮಾಡಿರುವ ಹಲವು ನಿದರ್ಶನಗಳಿರುತ್ತವೆ .
ಅಲ್ಲದೆ , ನಿಕಟಪೂರ್ವ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪರವರು ಕೇಂದ್ರ ಮಾದರಿ ವೇತನ - ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಶಿಫಾರಸ್ಸು ಮಾಡಿದ್ದು , ಅದಲ್ಲದೆ ರಾಜ್ಯದ ಸಚಿವರು , ಸಂಸದರು ಹಾಗೂ ಶಾಸಕರುಗಳೂ ಸಹ ಕೇಂದ್ರ ಮಾದರಿ ವೇತನಕ್ಕೆ ಶಿಫಾರಸ್ಸು ಮಾಡಿರುತ್ತಾರೆ .
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ : 01-07-2022ರಿಂದ ವೇತನ - ಭತ್ಯೆಗಳ ಪರಿಷ್ಕರಣೆ ಆಗಬೇಕಾಗಿರುತ್ತದೆ . ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳು ನೀಡಿರುವ ಸ್ಪಷ್ಟ ಭರವಸೆಯಂತೆ 2022 2023 ರ ಅವಧಿಯಲ್ಲಿಯೇ ಸಚಿವ ಸಂಪುಟ ಸಭೆಯ ನಿರ್ಣಯ ಕೈಗೊಂಡು ಕೇಂದ್ರ ಮಾದರಿಯ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ಸಹ ನೀಡಲು “ ಅಧಿಕಾರಿಗಳ ವೇತನ ಸಮಿತಿ ರಚಿಸುವ ದೃಢ ವಿಶ್ವಾಸವನ್ನು ಸಂಘವು ಹೊಂದಿರುತ್ತದೆ .
ಒಂದು ವೇಳೆ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಸಂಘವು ಮುಂದಿನ ತೀರ್ಮಾನವನ್ನು ಕೈಗೊಳ್ಳಲಿದೆ . ಆದ್ದರಿಂದ ರಾಜ್ಯದ ಸರ್ಕಾರಿ ನೌಕರರುಗಳು ಈ ಬಗ್ಗೆ ಯಾವುದೇ ಗೊಂದಲಕ್ಕೆ ಒಳಗಾಗಬಾರದಾಗಿ ಸಂಘವು ವಿನಂತಿಸಿದೆ .
-ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು.
Comments
Post a Comment