ಪದೋನ್ನತಿಗೆ ಇರುವ ಪರೀಕ್ಷೆಗಳ ವಿವರಗಳು.
2021 ರ ಮೇ ತಿಂಗಳಲ್ಲಿ ನಾನು ಪ್ರಥಮ ದರ್ಜೆ ಸಹಾಯಕಳಾಗಿ ಸರ್ಕಾರಿ ನೌಕರಿಗೆ ಸೇರಿದ್ದೇನೆ . ಈಗ ಕರ್ನಾಟಕ ಲೋಕಸೇವಾ ಆಯೋಗದ 2022 ರ ಪ್ರಥಮ ಅಧಿವೇಶನ ಇಲಾಖಾ ಪರೀಕ್ಷಾ ಪ್ರಕಟಣೆಗನುಗುಣವಾಗಿ ಅರ್ಜಿ ಸಲ್ಲಿಸಲು ಬಯಸಿದ್ದೇನೆ . ಪ್ರೊಬೇಷನರಿ ಅವಧಿ ಘೋಷಣೆ ಹಾಗೂ ಪದೋನ್ನತಿಗೆ ಯಾವ್ಯಾವ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು ? ಯಾವ ಕಾನೂನು ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಬೇಕು ? | ಸುಮಾ ಬಂಗಾರಪೇಟೆ.
1974 ರ ಕರ್ನಾಟಕ ಸರ್ಕಾರಿ ಸೇವಾ ( ಸೇವೆ ಮತ್ತು ಕನ್ನಡ ಭಾಷೆ ಪರೀಕ್ಷೆಗಳು ನಿಯಮಾವಳಿಯ ಪರಿಶಿಷ್ಟ - ಐಐರಲ್ಲಿ ಕಂದಾಯ ಇಲಾಖಾ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ರೆವಿನ್ಯೂ ಹೈಯರ್ ಮತ್ತು ಅಕೌಂಟ್ಸ್ ಹೈಯರ್ ಪರೀಕ್ಷೆಗಳಲ್ಲಿ ತೇರ್ಗಡೆ ಯಾಗಬೇಕು . ಪದೋನ್ನತಿಗೆ ಈ ಎರಡು ವಿಷಯಗಳೊಂದಿಗೆ ಜನರಲ್ ಲಾ ( ಭಾಗ -1 ಮತ್ತು 2 ) ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣತೆ ಹೊಂದಬೇಕು .
" ಸಮಾನ ಕೆಲಸಕ್ಕೆ ಸಮಾನ ವೇತನ - ಕೇಂದ್ರ ಮಾದರಿ ವೇತನ ಭತ್ಯೆಗಳು ರಾಜ್ಯ ಸರ್ಕಾರಿ ನೌಕರರಿಗೆ ಸಹ ಜಾರಿ" ⤵
ಈ ಎಲ್ಲ ಪರೀಕ್ಷೆಗಳಿಗೆ ಇತ್ತೀಚಿನ ತಿದ್ದುಪಡಿಗಳನ್ನು ಅಳವಡಿಸಿದ ಬೆಂಗಳೂರಿನ ಶ್ರೀರಾಘವೇಂದ್ರ ಪ್ರಕಾಶನ ಪ್ರಕಟಿಸಿರುವ ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಬಹುದು . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ' ಪುಸ್ತಕ ನೋಡಬಹುದು .
KSGEA NEWS Blog & YouTube ಈಗಾಗಲೇ 6.07 ಲಕ್ಷ ವೀಕ್ಷಣೆಯನ್ನು ಪಡೆದಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಅತ್ಯಗತ್ಯ ಮಾಹಿತಿಗಳನ್ನು ತಲುಪಿಸುವ ಮಹತ್ತರ ಕಾರ್ಯವನ್ನು ಮಾಡುತ್ತಾ ಬಂದಿದ್ದು, ನಮ್ಮ ಈ ಸೇವೆ ಇನ್ನೂ ಹೆಚ್ಚಿನ ರೀತಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೂ ತಲುಪಿಸುವ ಹೊಸ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ತಮ್ಮ ಅನಿಸಿಕೆ-ಅಭಿಪ್ರಾಯ ಪ್ರಮುಖವಾದದ್ದು.
ಇದೆ ರೀತಿಯಲ್ಲಿ ಹೆಚ್ಚಿನ ಸರ್ಕಾರಿ ನೌಕರರ ಸೇವಾ ಸೌಲಭ್ಯಗಳ ಕುರಿತಾದ ಮಾಹಿತಿಗಳನ್ನು ಎಲ್ಲಾ ಸರ್ಕಾರಿ ನೌಕರರಿಗೆ ತಲುಪಿಸುವಲ್ಲಿ ನಮಗೆ ಹೆಚ್ಚಿನ ಬೆಂಬಲ ನೀಡಲು ಇಚ್ಚಿಸಿದಲ್ಲಿ ಆಸ್ತಕರು ರೂ.01 ನೀಡಿ ಪ್ರೋತ್ಸಾಹಿಸಲು ಕೋರಿದೆ.
🙏 Click here to Support Us : https://rzp.io/i/CnT6eEt
ಲೇಖಕರ ಪುಸ್ತಕ ಹಾಗೂ ಸಿ.ಎಲ್.ಟಿ. ಅಣಕು ಪರೀಕ್ಷೆಗಾಗಿ 9902135813 ಗೆ ವಾಟ್ಸ್ ಆಪ್ ಮಾಡಿ ಹಾಗೂ ಶೇ.15% ರಷ್ಟು ರಿಯಾಯಿತಿ ಪಡೆಯಿರಿ.



Comments
Post a Comment