ಶೀಘ್ರದಲ್ಲೇ KGID ಬೋನಸ್ - ಕೆ.ಜಿ.ಐ.ಡಿ. ಇಲಾಖೆಯ ಸಂಪೂರ್ಣ ಗಣಕೀಕೃತ ವೆಬ್ ಸೈಟ್ ಸದ್ಯದಲ್ಲೇ ಲೋಕಾರ್ಪಣೆ. - ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು, ಕ.ರಾ.ಸ.ನೌ.ಸಂಘ, ಬೆಂಗಳೂರು.
ಶೀಘ್ರದಲ್ಲೇ KGID ಬೋನಸ್ - ಕೆ.ಜಿ.ಐ.ಡಿ. ಇಲಾಖೆಯ ಸಂಪೂರ್ಣ ಗಣಕೀಕೃತ ವೆಬ್ ಸೈಟ್ ಸದ್ಯದಲ್ಲೇ ಲೋಕಾರ್ಪಣೆ. - ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು, ಕ.ರಾ.ಸ.ನೌ.ಸಂಘ, ಬೆಂಗಳೂರು.
ಪ್ರಸ್ತುತ ಪಾಲಿಸಿ ಪಡೆದಿರುವ ವಿಮಾದಾರರಿಗೆ ಲಭ್ಯವಾಗುವ ಸೇವೆಗಳು - ವಿಮಾದಾರರು ಸಹಾಯವಾಣಿಗೆ ಕರೆಮಾಡಿ ಅವರ ಪಾಲಿಸಿಗೆ ಮೊಬೈಲ್ ಸಂಖ್ಯೆ ಮತ್ತು ಇ - ಮೇಲ್ ವಿಳಾಸಗಳನ್ನು ಆಸ್ ಡೇಟ್ ಮಾಡಿಸಬಹುದು .
ಹೊಸದಾಗಿ ಸರ್ಕಾರಿ ಸೇವೆಗೆ ನೇಮಕವಾಗಿರುವ ಸರ್ಕಾರಿ ನೌಕರರಿಗೆ ಲಭ್ಯವಾಗುವ ಸೇವೆಗಳು ಪ್ರಥಮ ಬಾರಿಗೆ ಪಾಲಿಸಿ ಪಡೆಯಬ ನಮೂನೆ ಭರ್ತಿ ಮಾಡಲು , ಪ್ರಸ್ತಾವನೆ ಆಕ್ಷೇಪಣೆಗೊಂಡ ಸಂದರ್ಭಗಳಲ್ಲಿ ಸಹಾಯವಾಣಿ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬಹುದು .
KGID - ಗಣಕೀಕೃತ ವ್ಯವಸ್ಥೆಯ ಪ್ರಗತಿ ನೋಟ
ವಿಮಾದಾರರು ಪಾಲಿಸಿ ವಿವರಗಳನ್ನು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು . ಹೊಸದಾಗಿ ರಾಜ್ಯ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಜೀವ ವಿಮಾ ಪಾಲಿಸಿ ನೀಡಲಾಗುತ್ತಿದ್ದು , ಪ್ರಸ್ತುತ 4900 ಪಾಲಿಸಿಗಳನ್ನು ನೀಡಲಾಗಿದೆ . ಈಗಾಗಲೇ ಪಾಲಿಸಿಯನ್ನು ಹೊಂದಿರುವ ನೌಕರರಿಗೆ ವಿಮಾದಾರರಿಗೂ ಸಹ ಈ ಸೇವೆಯನ್ನು ವಿಸ್ತರಿಸಲಾಗುವುದು .
ವಿಮಾದಾರರು ಪಾವತಿಸಿರುವ ವಿಮಾ ಕಂತುಗಳು , ಸಾಲದ ಕಂತುಗಳು ಮತ್ತು ಪಾಲಿಸಿಗಳ ಡೇಟಾ ಮರ್ಜಿಂಗ್ ಕಾರ್ಯ ಪ್ರಗತಿಯಲ್ಲಿದ್ದು , ಶೀಘ್ರದಲ್ಲೇ Loan ಮತ್ತು Claim ಗಳ ಇತ್ಯರ್ಥ ಸೇವೆಯನ್ನು ವಿಮಾದಾರರಿಗೆ ನೀಡುವ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿಗಳಿಂದ ಸದ್ಯದಲೇ ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ .
* ಸರ್ಕಾರಿ ಹಾಗೂ ಸರ್ಕಾರದ ಆರ್ಥಿಕ ಹಿತಾಸಕ್ತಿ ಹೊಂದಿರುವ ಹೊಸದಾಗಿ ಖರೀದಿಸಿರುವ ವಾಹನಗಳಿಗೆ ಆನ್‌ಲೈನ್ ಮೂಲಕ ವಾಹನ ವಿಮೆ ಸೇವೆಯನ್ನು ಪ್ರಾರಂಭಿಸಲಾಗಿದೆ .
ಪ್ರಸ್ತುತ ನಿಮ ಹೊಂದಿರುವ ವಾಹನಗಳಿಗೆ ಒದಗಿಸಲಾಗುವುದು.
ಏಪ್ರಿಲ್ 2016 ರಿಂದ ಮಾರ್ಚ್ 2018 ರವರೆಗಿನ ಬೋನಸ್ ಹಾಗೂ ಏಪ್ರಿಲ್ 2018 ರಿಂದ ಮಾರ್ಚ್ 2020 ರವರೆಗಿನ ಮಧ್ಯಂತರ ಬೋನಸ್‌ನ ಮೌಲ್ಯ ಮಾಪನ ಕಾರ್ಯ ಪ್ರಗತಿಯಲ್ಲಿದೆ.
Comments
Post a Comment