ರಾಜ್ಯ ಸರ್ಕಾರಿ ನೌಕರರ ಹಬ್ಬದ ಮುಂಗಡ ಮೊತ್ತವನ್ನು ಹೆಚ್ಚಳ ಮಾಡುವ ಬಗ್ಗೆ .
ರಾಜ್ಯ ಸರ್ಕಾರವು ಪ್ರಸ್ತುತ ರಾಜ್ಯ ಸರ್ಕಾರಿ ನೌಕರರಿಗೆ ರೂ . 10,000 / -ಗಳ ಹಬ್ಬದ ಮುಂಗಡವನ್ನು ನೀಡುತ್ತಿದ್ದು , ದಿನಾಂಕ : 28-10-2021ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಮುಂಗಡವನ್ನು ಸಭೆಯಲ್ಲಿ , ಪ್ರಸ್ತುತ ನೀಡಲಾಗುತ್ತಿರುವ ಹಬ್ಬದ ಪರಿಸ್ಥಿತಿಗನುಗುಣವಾಗಿ ಪರಿಷ್ಕರಿಸಿ ಕನಿಷ್ಠ 25,000 / -ಗಳಿಗೆ ಹೆಚ್ಚಳ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ . ಇಂದಿನ ಸಮಿತಿ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ , ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ನಿರ್ಣಯದಂತೆ ಪ್ರಸ್ತುತ ಪರಿಸ್ಥಿತಿಗನುಗುಣವಾಗಿ ಹಬ್ಬದ ಮುಂಗಡ ಮೊತ್ತವನ್ನು ರೂ .10,000 / ಗಳಿಂದ ರೂ . 25,000 / -ಗಳಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಲು ಕೋರಿದೆ.
- ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು.
Comments
Post a Comment