ರಾಮನಗರ ಜಿಲ್ಲಾಧ್ಯಕ್ಷರಾದ ಶ್ರೀ ಆರ್.ಕೆ. ಬೈರಲಿಂಗಯ್ಯ ಅವರ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಮನಗರ ಶಾಖೆಯ ಜಿಲ್ಲಾಧ್ಯಕ್ಷರಾದ ಶ್ರೀಯುತ ಆರ್.ಕೆ.ಬೈರಲಿಂಗಯ್ಯನವರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಶ್ರೀ ಆರ್.ಕೆ. ಬೈರಲಿಂಗಯ್ಯನವರನ್ನು ಅಭಿನಂದಿಸುವ ಮೂಲಕ ವಯೋನಿವೃತ್ತಿ ಜೀವನಕ್ಕೆ ಶುಭ ಕೋರಿದರು
. ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ತಿಮ್ಮೇಗೌಡ , ಖಜಾಂಚಿಗಳಾದ ಆರ್ ಶ್ರೀನಿವಾಸ್ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಎಂ . ಬಳ್ಳಾರಿ , ಉಪಾಧ್ಯಕ್ಷರಾದ ಗಿರಿಗೌಡ , ದಿನೇಶ್ , ಮೋಹನ್ ಕುಮಾರ್ , ಮಾಲತೇಶ್ , ಶಿವಲಿಂಗಯ್ಯ ಚೇತನ್ ರಾಜ್ ರವರು ಉಪಸ್ಥಿತರಿದ್ದರು .
ರಾಮನಗರ ಜಿಲ್ಲಾ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಶ್ರೀ ಸತೀಶ್ ಅವರು ಸ್ವಾಗತಿಸಿ , ಕಾರ್ಯದರ್ಶಿಗಳಾದ ಶ್ರೀ ರಾಜೇಗೌಡರು ವಂದಿಸಿದರು . @DinoMedia
Comments
Post a Comment