ಪ್ರಾಥಮಿಕ ಶಾಲಾ ಶಿಕ್ಷಕರ ಆದ್ಯ ಗಮನಕ್ಕೆ ....
ನಿನ್ನೆಯಿಂದ ಸಾವಿರಾರು ಜನ ರಾಜ್ಯದ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ಶಿಕ್ಷಕರು ದೂರವಾಣಿಯ ಮೂಲಕ ಸಂಘಕ್ಕೆ ಒತ್ತಡ ಹಾಗೂ ಮನವಿಯನ್ನು ಸಲ್ಲಿಸುತ್ತಾ , ಶಿಕ್ಷಣ ಇಲಾಖೆಯು ಇತ್ತೀಚೆಗೆ ನೀಡಿರುವ ಸ್ಪಷ್ಟಿಕರಣದಂತೆ ಆಯಾ ತಾಲ್ಲೂಕಿನ ( Working strength ) ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆಯನ್ನು ಆಧರಿಸಿದಾಗ ಬಹಳಷ್ಟು ತಾಲ್ಲೂಕುಗಳ ಶಿಕ್ಷಕರಿಗೆ ವರ್ಗಾವಣೆ ಆವಕಾಶಗಳು ಸಿಗದೇ ವಂಚಿತರಾಗುತ್ತಿರುವ ಅಂಶವನ್ನು ಸಂಘದ ಗಮನಕ್ಕೆ ತಂದಿರುತ್ತಾರೆ . 9 : 23-11-21 ಈಗಾಗಲೇ ಆದೇ ತಾಲ್ಲೂಕುಗಳಲ್ಲಿ ಕಡ್ಡಾಯ / ಹೆಚ್ಚುವರಿ ವರ್ಗಾವಣೆಗೆ ಅವಕಾಶಗಳನ್ನು ನೀಡಿದ್ದು , ಈಗ ನಮಗೆ ನೀಡದಿರುವುದು ನೋವಿನ ಸಂಗತಿ ಎಂಬ ಅಂಶವನ್ನು ರಾಜ್ಯದ ಶಿಕ್ಷಣ ಸಚಿವರಿಗೆ ಹಾಗೂ ಶಿಕ್ಷಣ ಇಲಾಖೆಯ ಕಾರ್ಯದರ್ಶಿ / ಆಯುಕ್ತರಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು , ಗಮನಕ್ಕೆ ತಂದಾಗ ಅವರುಗಳು ಸಹ ಈ ಬಗ್ಗೆ ಸಹಾನುಭೂತಿಯಿಂದ ಸಹಕರಿಸಿರುತ್ತಾರೆ . ದಿನಾಂಕ : 24-11-2021ರಂದು ನಡೆಯಲಿರುವ ವರ್ಗಾವಣೆ ಪ್ರಕ್ರಿಯೆಯಲ್ಲಿ ತಾಲ್ಲೂಕುಗಳ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳಿಗೆ ಬದಲಾಗಿ ಆಯಾ ತಾಲ್ಲೂಕುಗಳಲ್ಲಿನ ( sanction strength ) ಮಂಜೂರಾದ ಹುದ್ದೆಗಳಿಗೆ ಎಂಬ ತೀರ್ಮಾನವನ್ನು ಕೈಗೊಳ್ಳಬೇಕು ಎಂದು ವಿನಂತಿಸಿದಾಗ ಸರ್ಕಾರವು ಸಕಾರತ್ಮಕವಾಗಿ ಸ್ಪಂದಿಸಿ , sanction strength ಗಳ ಆಧಾರದ ಮೇಲೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿರುತ್ತಾರೆ . ಸಾಕಷ್ಟು ಗೊಂದಲ - ನೋವಿನದಲ್ಲಿದ್ದ ಶಿಕ್ಷಕರಿಗೆ ಇದರಿಂದ ವರ್ಗಾವಣೆ ಆವಕಾಶಗಳು ಸಿಗಲಿವೆ . ಈ ಪ್ರಕ್ರಿಯೆಗಳನ್ನು ಮಾಡಲು ಸಮಯವಕಾಶ ಬೇಕಾಗಿರುವುದರಿಂದ ನಾಲ್ಕು ದಿನಗಳ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡಬೇಕಾಬಹುದು . ಮೇಲ್ಕಂಡ ಎಲ್ಲಾ ಅಂಶಗಳನ್ನು ತಮ್ಮಗಳ ಆದ್ಯ ಗಮನಕ್ಕೆ ತರಬಯಸುತ್ತಾ , ದಯಮಾಡಿ ಸಹಕರಿಸಲು ವಿನಂತಿಸಿದ . ಈ ಕಾರ್ಯಕ್ಕೆ ಸಹಕರಿಸಿದ ಮಾನ್ಯ ಗೌರವಾನ್ವಿತ ಶಿಕ್ಷಣ ಸಚಿವರಿಗೆ ಸರ್ಕಾರದ ಕಾರ್ಯದರ್ಶಿಗಳಿಗೆ / ಆಯುಕ್ತರಿಗೆ ಆಭಿನಂದನೆಗಳು ( ಸಿ.ಎಸ್.ಪಡಾಕ್ಷರಿ ) ರಾಜ್ಯಾಧ್ಯಕ್ಷರು
Comments
Post a Comment