ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ (30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ )
ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ.
ಪ್ರಶ್ನೆ 1988 ರ ಜುಲೈನಲ್ಲಿ ನಾನು ಸರ್ಕಾರಿ ಕೆಲಸಕ್ಕೆ ಸೇರಿದ್ದು , ಈಗಿನ ವೇತನ ಶ್ರೇಣಿ 52,650-97,100 ರೂ . ಆಗಿದೆ . 2018 ರ ಜುಲೈವರೆಗೆ 30 ವರ್ಷ ಕಾಲ ಕರ್ತವ್ಯವನ್ನು ಯಾವುದೇ ಪದೋನ್ನತಿ ಇಲ್ಲದೆ ಪೂರೈಸಿರುತ್ತೇನೆ . ಈವರೆಗೂ ನನಗೆ 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ನೀಡಲಾಗಿಲ್ಲ . ಹಾಗಾಗಿ ಇದನ್ನು ನಿಯಮಾನುಸಾರ ಪಡೆಯಲು ಅವಕಾಶವಿದೆಯೇ ? | ಕೆ . ರಮೇಶ್ ಬಸಾಪುರ , ಬೆಂಗಳೂರು
2012 , ಜೂ .14 ರ ಸರ್ಕಾರಿ ಆದೇಶ ಸಂಖ್ಯೆ ಎಫ್‌ಡಿ 12 , ಎಸ್‌ಆರ್‌ಪಿ 2012 ( 8 ) ರ ಪ್ರಕಾರ ಸತತವಾಗಿ 30 ವರ್ಷ ಕಾಲ ಯಾವುದೇ ಪದೋನ್ನತಿ ಇಲ್ಲದೆ ಕರ್ತವ್ಯ ಸಲ್ಲಿಸಿದ್ದರೆ ಅಂಥ ನೌಕರರಿಗೆ ಹೆಚ್ಚುವರಿಯಾಗಿ ಒಂದು ವೇತನ ಬಡ್ತಿ ಮಂಜೂರು ಮಾಡಬೇಕೆಂದು ಸೂಚಿಸಿದೆ . ಈ ರೀತಿ ಮಂಜೂರು ಮಾಡುವ ಸರ್ಕಾರಿ ನೌಕರನ ಸೇವಾ ದಾಖಲೆ ತೃಪ್ತಿಕರವಾಗಿದ್ದು , ಪದೋನ್ನತಿಗೆ ಎಲ್ಲ ರೀತಿಯಲ್ಲೂ ಅರ್ಹರಾಗಿರಬೇಕು . ಹಾಗಾಗಿ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಈ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಲು ವಿನಂತಿಸಬಹುದು . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು 'ಪುಸ್ತಕ ನೋಡಬಹುದು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.


ನಾನು ಸರ್ಕಾರಿ ನೌಕರನಾಗಿ 2005 ಪ್ರಾಥಮಿಕ ಶಾಲೆ ಶಿಕ್ಷಕನಾಗಿ ಕರ್ತವ್ಯ ಕ್ಕೆ ಸೇವೆಗೆ ಸೇರಿರುತ್ತೇನೆ 2020ರಲ್ಲಿ ನಾನು ಇಲಾಖೆಯ ಅನುಮತಿ ಪಡೆದು ಕಾಲೇಜು ಶಿಕ್ಷಣ ಇಲಾಖೆಗೆ ಸೇರಿರುತ್ತೇನೆ.ಹಾಗಾದರೆ CLT ಪರೀಕ್ಷೆಯಲ್ಲಿ ಎಷ್ಟು ಅಂಕಗಳನ್ನು ಗಳಿಸಬೇಕು
ReplyDelete