ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ. (ಸರ್ಕಾರಿ ನೌಕರರು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಯಸಿದ್ದೇನೆ . ಈ ಹುದ್ದೆಗೆ ವಯೋಮಿತಿ ನಿರ್ಬಂಧವಿದೆಯೇ ?)
ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ.
ಪ್ರಶ್ನೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿರುವ ನನಗೆ 38 ವರ್ಷ ವಯಸ್ಸಾಗಿದೆ . ಈಗ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಯಸಿದ್ದೇನೆ . ಈ ಹುದ್ದೆಗೆ ವಯೋಮಿತಿ ನಿರ್ಬಂಧವಿದೆಯೇ ? ಗರಿಷ್ಠ ವಯೋಮಿತಿ ಎಷ್ಟು ? ಸಡಿಲಿಕೆ ಉಂಟೆ ? | ಸುನಿಲ್ ಕುಮಾರ್ ಚಿತ್ರದುರ್ಗ
ಕರ್ನಾಟಕ ಸರ್ಕಾರಿ ಸೇವಾ ( ಸಾಮಾನ್ಯ ನೇಮಕಾತಿ ) ನಿಯಮಾವಳಿ 1977 ರ ನಿಯಮ 6 ( 1 ) ರ ಪ್ರಕಾರ ಸರ್ಕಾರಿ ನೌಕರ ಎಷ್ಟು ವರ್ಷ ಕೆಲಸ ನಿರ್ವಹಿಸಿರುವನೋ ಅಷ್ಟು ವರ್ಷ ಅಥವಾ ಗರಿಷ್ಠ 10 ವರ್ಷ ವಯೋಮಿತಿ ಸಡಿಲಿಕೆ ಉಂಟು . ಆದರೆ , ಕಿರಿಯ ಪ್ರಾಥಮಿಕ ಅಥವಾ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಾಮಾನ್ಯವರ್ಗಕ್ಕೆ 40 ವರ್ಷ , ಹಿಂದುಳಿದ ವರ್ಗಕ್ಕೆ 43 , ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 45 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ . ಹಾಗಾಗಿ ನಿಮ್ಮ ನೇಮಕಾತಿ ಪ್ರಾಧಿಕಾರದ ಪೂರ್ವಾನುಮತಿ ಪಡೆದು ಅರ್ಜಿ ಸಲ್ಲಿಸಿದರೆ ವಯೋಮಿತಿ ಸಡಿಲಿಕೆ ಲಭ್ಯವಾಗುತ್ತದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ' ಪುಸ್ತಕ ನೋಡಬಹುದು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.


Comments
Post a Comment