ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ. (ಸರ್ಕಾರಿ ನೌಕರ ಶನಿವಾರ ಹಾಗೂ ಸೋಮವಾರದಂದು ಸಾಂರ್ದಭಿಕ ರಜೆ ತೆಗೆದುಕೊಂಡರೆ ಸಾರ್ವತ್ರಿಕ ರಜೆಯಾದ ಭಾನುವಾರವೂ ಸಾಂರ್ದಭಿಕ ರಜೆಯೆಂದು ಪರಿಗಣಿಸಲಾಗುತ್ತದೆಯೇ ?)
ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ.
ಪ್ರಶ್ನೆ ಸರ್ಕಾರಿ ನೌಕರ ಶನಿವಾರ ಹಾಗೂ ಸೋಮವಾರದಂದು ಸಾಂರ್ದಭಿಕ ರಜೆ ತೆಗೆದುಕೊಂಡರೆ ಸಾರ್ವತ್ರಿಕ ರಜೆಯಾದ ಭಾನುವಾರವೂ ಸಾಂರ್ದಭಿಕ ರಜೆಯೆಂದು ಪರಿಗಣಿಸಲಾಗುತ್ತದೆಯೇ ? | ಮಕ್ಕೂಲ್ ಲಿಂಗದಹಳ್ಳಿ , ಹಾನಗಲ್
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ಬಿ ಯಲ್ಲಿ ಪ್ರತಿ ಸರ್ಕಾರಿ ನೌಕರನಿಗೆ ಒಂದು ವರ್ಷ ಪೂರೈಸಿದ ಮೇಲೆ 15 ದಿನ ಸಾಂರ್ದಭಿಕ ರಜೆ ನೀಡಲಾಗುತ್ತದೆ . ನೀವು ಶನಿವಾರ ಮತ್ತು ಸೋಮವಾರ ರಜೆ ತೆಗೆದುಕೊಂಡರೆ ಭಾನುವಾರ ಸಾಂರ್ದಭಿಕ ರಜೆಯೆಂದು ಪರಿಗಣಿಸಲಾಗುವುದಿಲ್ಲ . ಅಂತೆಯೇ , ಯಾವುದೇ ಸಾರ್ವತ್ರಿಕರಜೆಗಳ ಮಧ್ಯೆ ಈ ಸಾಂರ್ದಭಿಕ ರಜೆ ಬಳಸಿಕೊಂಡರೆ ಅಂತಹ ಸಾರ್ವತ್ರಿಕ ರಜೆದಿನಗಳನ್ನು ಸಾಂರ್ದಭಿಕ ರಜೆ ಎಂದು ಪರಿಗಣಿಸದೆ ಬಳಸಿಕೊಳ್ಳಲು ಅನುಮತಿಸಲ್ಪಟ್ಟಿರುತ್ತದೆ . ಹೆಚ್ಚಿನ ವಿವರಗಳಿಗೆ ಇದೇ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು 'ಪುಸ್ತಕ ನೋಡಬಹುದು .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಪ್ರತಿವಾರ ಹೊಸ ಪ್ರಶ್ನೋತ್ತರಗಳು ಬ್ಲಾಗ್ ನಲ್ಲಿ ಲಭ್ಯವಿರುತ್ತದೆ.


Comments
Post a Comment