ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಉಳಿದ ವೃಂದಗಳ ಎಲ್ಲಾ ಸಿಬ್ಬಂದಿಗಳಿಗೂ ' ರಿಸ್ಕ್ ಅಲೋಯನ್ಸ್ ' ಮಂಜೂರು ಮಾಡುವ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಉಳಿದ ವೃಂದಗಳ ಎಲ್ಲಾ ಸಿಬ್ಬಂದಿಗಳಿಗೂ ' ರಿಸ್ಕ್ ಅಲೋಯನ್ಸ್ ' ಮಂಜೂರು ಮಾಡುವ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಶುಶ್ರೂಕರು / ಗ್ರೂಪ್ ' ಡಿ ' ಹಾಗೂ ಹೊರಗುತ್ತಿಗೆ / ಗುತ್ತಿಗೆ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ' ರಿಸ್ಟ್ ಅಲೋಯನ್ಸ್ ' ಮಂಜೂರು ಮಾಡಿರುತ್ತದೆ . ಇದಕ್ಕಾಗಿ ತಮಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ .
ಕೋವಿಡ್ -19 ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಉಳಿದ ವೃಂದಗಳಾದ ಪ್ರಯೋಗಶಾಲಾ ತಂತ್ರಜ್ಞರು / ಆರೋಗ್ಯ ಸಹಾಯಕರು ( ಪು & ಮ ) / ಫಾರಸಿಸ್ಟ್ / ಆರೋಗ್ಯ ಶಿಕ್ಷಣಾಧಿಕಾರಿಗಳು / ಕ್ಷ - ಕಿರಣ ತಂತ್ರಜ್ಞರು / ನೇತ್ರಾಧಿಕಾರಿಗಳು / ವಾಹನ ಚಾಲಕರು / ಫಿಜಿಯೋಥೆರಪಿಸ್ಟ್ ವೃಂದ ಸೇರಿದಂತೆ ಹಲವು ವೃಂದಗಳಿಗೆ ' ರಿಸ್ಟ್ ಅಲೋಯನ್ಸ್ ' ಮಂಜೂರು ಮಾಡದಿರುವುದರಿಂದ , ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮಧ್ಯೆ ತಾರತಮ್ಯ ಉಂಟಾಗಿ ಕರ್ತವ್ಯ ನಿರ್ವಹಣೆ ಮೇಲೆ ದುಷ್ಪರಿಣಾಮ ಬೀರಲಿರುವ ಅಂಶವನ್ನು ಗಮನಿಸಲಾಗಿದೆ . ಈ ಬಗ್ಗೆ ಉಲ್ಲೇಖ -2 ರ ಪತ್ರದನ್ವಯ ಇಲಾಖಾ ನೌಕರರ ಕೇಂದ್ರ ಸಂಘವು ಮನವಿ ಸಲ್ಲಿಸಿ ಉಂಟಾಗಿರುವ ತಾರತಮ್ಯವನ್ನು ಸರಿಪಡಿಸಲು ಮನವಿ ಮಾಡಿರುತ್ತದೆ . ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಕೋವಿಡ್ -19 ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಉಳಿದ ವೃಂದಗಳ ಎಲ್ಲಾ ಸಿಬ್ಬಂದಿಗಳಿಗೆ * ರಿಸ್ಟ್ ಅಲೋಯನ್ಸ್ ' ಮಂಜೂರು ಮಾಡಿ ಸ್ವಾಭಾವಿಕ ನ್ಯಾಯ ಕಲ್ಪಿಸಿಕೊಡಲು ಮನವಿ ಸಲ್ಲಿಸಿದರು.
Comments
Post a Comment